ಟೋಯಿಂಗ್ ಮಾಡೋ ಯುವಕರಿಂದ ಬೈಕ್ ಸವಾರನ ಮೇಲೆ ತೀವ್ರ ಹಲ್ಲೆ

ಟೋಯಿಂಗ್ ಮಾಡೋ ಯುವಕರಿಂದ ಬೈಕ್ ಸವಾರನ ಮೇಲೆ ತೀವ್ರ ಹಲ್ಲೆ

ಬೆಂಗಳೂರು: ಬೆಂಗಳೂರು ಟ್ರಾಫಿಕ್​ ಪೊಲೀಸರು ಮತ್ತೊಮ್ಮೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಬೈಕ್ ಟೋಯಿಂಗ್ ಮಾಡೋ ಯುವಕರು ಬೈಕ್ ಸವಾರನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹೆಬ್ಬಾಳ ಬಳಿಯ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಘಟನೆ ನಡೆದಿದ್ದು, ಬೈಕ್ ಸವಾರ ಕಿರಣ್ ಮೂರ್ತಿ ಅವರು ನೋ ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದರು. ಈ ವೇಳೆ, ಆರ್.ಟಿ. ನಗರ ಸಂಚಾರಿ ಪೊಲೀಸರು ಬೈಕ್ ತೆಗೆದುಕೊಂಡು ಹೋಗಿದ್ದಾರೆ. ಕಿರಣ್ ಮೂರ್ತಿ ತಮ್ಮ ಬೈಕ್ ವಾಪಸ್ ಕೇಳಲು ಹೋಗಿದ್ದಾರೆ. ಆಗ1600 ರೂಪಾಯಿ ಫೈನ್ ಕಟ್ಟುವಂತೆ ಟೋಯಿಂಗ್ ಸಿಬ್ಬಂದಿ ಸೂಚಿಸಿದ್ದಾರೆ. ಅದರಂತೆ ಕಿರಣ್ ಮೂರ್ತಿ 2 ಸಾವಿರ ನೋಟು ಕೊಟ್ಟಿದ್ದಾರೆ. ಆದರೆ ಟೋಯಿಂಗ್ ಬಾಯ್ 1 ಸಾವಿರ ವಾಪಸ್ ಕೊಟ್ಟಿದ್ದಾನೆ.

ಅದಾದನಂತರ, ಸಂಚಾರಿ ಪೊಲೀಸರ ಬಳಿ ಇರಬೇಕಾದ ಫೈನ್ ಹಾಕುವ ಮಿಷನ್ ನಿಮ್ಮ ಬಳಿ ಹೇಗೆ ಬಂತು ಎಂದು ಪ್ರಶ್ನಿಸಿ, ರಸೀದಿ ಕೊಡುವಂತೆ ಬೈಕ್ ಸವಾರ ಕೇಳಿದ್ದಾರೆ. ಈ ವೇಳೆ, ಮಾತಿಗೆ ಮಾತು ಬೆಳೆದು ಕಿರಣ್ ಮೂರ್ತಿ ಮೇಲೆ ಟೋಯಿಂಗ್ ಬಾಯ್ ಹಲ್ಲೆ ನಡೆಸಿದ್ದಾನೆ. ಮುಖ, ಕಿವಿಗೆ ಹೊಡೆದು, ಬೈಕ್ ಟೋಯಿಂಗ್ ಯುವಕರು ಹಲ್ಲೆ ನಡೆಸಿದ್ದಾರೆ. ಆರ್.ಟಿ.ನಗರ ಸಂಚಾರಿ ಠಾಣೆ ಎಎಸ್ಐ ಜಯಪ್ರಕಾಶ್ ಅವರಿಗೆ ಸೇರಿದ ಫೈನ್ ಮಿಷನ್ ಇಟ್ಕೊಂಡು ಟೋಯಿಂಗ್ ಸಿಬ್ಬಂದಿ ಫೈನ್ ಹಾಕ್ತಿದ್ದರು ಎಂದು ಕಿರಣ್ ಆರೋಪಿಸಿದ್ದಾರೆ. ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Click on your DTH Provider to Add TV9 Kannada