ಕಲಬುರಗಿ: ಮಹಾಮಾರಿ ಕೊರೊನಾಗೆ ಇಡೀ ದೇಶವೇ ನಲುಗಿ ಹೋಗಿದೆ. ಅದೆಷ್ಟೋ ಕುಟುಂಬಗಳ ಬದುಕನ್ನು ಕೊರೊನಾ ಸೋಂಕು ಬೀದಿಗೆ ತಳ್ಳಿದೆ. ಸಂಬಂಧಿಕರನ್ನು ಕಳೆದುಕೊಂಡವರು ಸೋಂಕಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ಪತ್ತೆಯಾದ ಬ್ಲಾಕ್ ಫಂಗಸ್ನಿಂದ ರಾಜ್ಯದಲ್ಲಿ ಆತಂಕ ಹೆಚ್ಚಾಗಿದೆ. ಕೆಲವರು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಆದರೆ ಕಲಬುರಗಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾದ ಬ್ಲಾಕ್ ಪಂಗಸ್ ರೋಗಿಗಳು ಇಂಜೆಕ್ಷನ್ ಸಿಗದೆ ಪರದಾಟ ಪಡುತ್ತಿದ್ದಾರೆ.
ಮೊದಲು ಜಿಮ್ಸ್ ಆಸ್ಪತ್ರೆಗೆ ದಾಖಲಾದವರಿಗೆ ಮಾತ್ರ ಇಂಜೆಕ್ಷನ್ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗೆ ಇಂಜೆಕ್ಷನ್ ನೀಡುವುದಿಲ್ಲ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ. ಹೀಗಾಗಿ ಕಲಬುರಗಿ ನಗರದ ವಿವಿಧ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬ್ಲಾಕ್ ಫಂಗಸ್ ರೋಗಿಗಳು ಇಂಜೆಕ್ಷನ್ ಸಿಗದೆ ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಬ್ಲ್ಯಾಕ್ ಪಂಗಸ್ಗೆ ತುತ್ತಾದ ಅನೇಕರು ಖಾಸಗಿ ಆಸ್ಪತ್ರೆಯಲ್ಲಿದ್ದಾರೆ. ಒಂದು ಕಡೆ ದುಡ್ಡು ನೀಡುತ್ತೇವೆ ನಮಗೂ ಇಂಜೆಕ್ಷನ್ ಕೊಡಿ ಎಂದು ಕೇಳಿದರೂ ಇಂಜೆಕ್ಷನ್ ಕೊಡುವುದಿಲ್ಲ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ. ಇನ್ನೊಂದು ಕಡೆ ಖಾಸಗಿ ಆಸ್ಪತ್ರೆ ವೈದ್ಯರು ನಮಗೆ ಸರ್ಕಾರದಿಂದ ಇಂಜೆಕ್ಷನ್ ಪೂರೈಕೆ ಆಗುತ್ತಿಲ್ಲ. ಇಂಜೆಕ್ಷನ್ ತಂದರೆ ನೀಡುತ್ತೀವಿ ಅಂತ ರೋಗಿಗಳಿಗೆ ಹೇಳುತ್ತಿದ್ದಾರೆ. ಇವರಿಬ್ಬರ ನಡುವೆ ಸಿಲುಕಿದ ರೋಗಿಗಳು ಇಂಜೆಕ್ಷನ್ ಸಿಗದೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಮತ್ತೆ ಇಬ್ಬರಿಗೆ ಬ್ಲಾಕ್ ಫಂಗಸ್
ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಬ್ಲಾಕ್ ಫಂಗಸ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 83 ಬ್ಲಾಕ್ ಫಂಗಸ್ ಪ್ರಕರಣ ಪತ್ತೆಯಾಗಿದ್ದು, 12 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಬ್ಲಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಾವಿನ ಸಂಖ್ಯೆ ಏರದೇ ಇರುವುದು ಸಮಾಧಾನ ತಂದಿದೆ. ಒಬ್ಬ ವ್ಯಕ್ತಿ ಮಾತ್ರ ಸಂದೇಹಾಸ್ಪದ ಸಾವನ್ನಪ್ಪಿದ್ದಾರೆ. ಜಿಲ್ಲಾಡಳಿತ ಪ್ರಕಾರ ಇದುವರೆಗೆ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ನಿಂದ ಯಾವುದೇ ಸಾವಾಗಿಲ್ಲ.
ಇದನ್ನೂ ಓದಿ
ಪುರುಷರ ಕ್ರಿಕೆಟ್ಗೆ ನೀಡುವ ಪ್ರಾಮುಖ್ಯತೆಯನ್ನು ಮಹಿಳಾ ಕ್ರಿಕೆಟ್ಗೂ ನೀಡಿ.. ತಾರತಮ್ಯ ಬೇಡ; ಇಶಾ ಗುಹಾ
ಮಂಗಳೂರಿನಲ್ಲಿ ಮಾಸ್ಕ್ ಧರಿಸದ ಪ್ರಕರಣ: ಸೂಪರ್ ಮಾರ್ಕೆಟ್ ಮಾಲೀಕನ ವಿರುದ್ಧ ದೂರು ದಾಖಲಿಸಿದ ವೈದ್ಯ ಕಕ್ಕಿಲಾಯ
(Black Fungus patients are suffering from lack of injection at a private hospital in Kalaburagi)