ಬೆಂಗಳೂರು: ಡಿಸೆಂಬರ್ 22 ಹಾಗೂ 27ರಂದು ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲಾ ಪಕ್ಷಗಳು ಹಾಗೂ ಅಭ್ಯರ್ಥಿಗಳು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ವೇಳೆ, ನೇರ ಅಥವಾ ವಾಮವಾರ್ಗ ಬಳಸಿ ಶತಾಯ ಗತಾಯ ಗೆಲ್ಲಲು ಕೆಲವರು ಪ್ರಯತ್ನ ನಡೆಸುತ್ತಿದ್ದಾರೆ.
ಧಾರವಾಡದ ಗ್ರಾಮಗಳಲ್ಲಿ ವಾಮಾಚಾರದ ಕಾಟ
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಧಾರವಾಡದ ಗ್ರಾಮಗಳಲ್ಲಿ ವಾಮಾಚಾರದ ಕಾಟ ಹೆಚ್ಚಾಗಿದೆ. ಜಿಲ್ಲೆಯ ಅಂಬ್ಲಿಕೊಪ್ಪ, ಯರಿಕೊಪ್ಪ ಗ್ರಾಮದಲ್ಲಿ ವಾಮಾಚಾರದ ಕುರುಹುಗಳು ಕಂಡುಬಂದಿದೆ.
ತಾಯತ, ನಿಂಬೆ ಹಣ್ಣು, ಸಾಸಿವೆ ಇಟ್ಟು ಅಂಬ್ಲಿಕೊಪ್ಪದಲ್ಲಿ ಅಭ್ಯರ್ಥಿ ಮಂಜುಳಾ ವಡ್ಡರ್ ಮನೆ ಮುಂದೆ ವಾಮಾಚಾರ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಇತ್ತ, ಯರಿಕೊಪ್ಪದಲ್ಲಿ ಮತಗಟ್ಟೆ ಮುಂದೆ ವಾಮಾಚಾರ ನಡೆಸಲಾಗಿದೆ.
ಚಿಕ್ಕಬಳ್ಳಾಪುರ ಬಶೆಟ್ಟಹಳ್ಳಿಯ ಮತಗಟ್ಟೆ ಬಳಿ ವಾಮಾಚಾರ
ಇತ್ತ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕಂಬಾಲಹಳ್ಳಿಯ ಬಶೆಟ್ಟಹಳ್ಳಿಯ ಗ್ರಾಮ ಪಂಚಾಯಿತಿ ಚುನಾವಣಾ ಮತಗಟ್ಟೆ ಬಳಿ ವಾಮಾಚಾರ ನಡೆಸಲಾಗಿದೆ. ಮತಗಟ್ಟೆಯ ಸುತ್ತ ದುಷ್ಕರ್ಮಿಗಳು ನಿಂಬೆಹಣ್ಣು ಹೂತಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಭ್ಯರ್ಥಿಗಳಾದ ವೆಂಕಟಪ್ಪ ಮತ್ತು ರಾಮಾಂಜಿನಪ್ಪ ವಿರುದ್ಧ ವಾಮಾಚಾರ ಮಾಡಿರುವ ಆರೋಪ ಕೇಳಿಬಂದಿದೆ. ಇದೀಗ, ಸ್ಥಳೀಯರಿಂದ ವಾಮಾಚಾರದ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪತಿ-ಪತ್ನಿ ಮುಖಾಮುಖಿ: ಗಮನ ಸೆಳೆದಿದೆ ದಂಪತಿ ಸ್ಪರ್ಧೆ