ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಂಟಿಬಿ ನಾಗರಾಜ್ ಸ್ಪರ್ಧೆ: ಬಿವೈ ವಿಜಯೇಂದ್ರ ಹೇಳಿದ್ದೇನು?

ಬೆಂಗಳೂರು ನಗರದ ಗರುಡಾಚಾರಪಾಳ್ಯದಲ್ಲಿರುವ ಎಂಎಲ್​ಸಿ ಎಂಟಿಬಿ ನಾಗರಾಜ್ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ರಾಜ್ಯಾಧ್ಯಕ್ಷರನ್ನು ಹೂಗುಚ್ಛ ನೀಡಿ ಎಂಟಿಬಿ ಬರಮಾಡಿಕೊಂಡರು. ಭೇಟಿ ವೇಳೆ ಎಂಟಿಬಿ ಆಪ್ತರ ಜೊತೆಗೆ ವಿಜಯೇಂದ್ರ ಅವರು ಪೋಟೋ ತೆಗೆಸಿಕೊಂಡರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಂಟಿಬಿ ನಾಗರಾಜ್ ಸ್ಪರ್ಧೆ: ಬಿವೈ ವಿಜಯೇಂದ್ರ ಹೇಳಿದ್ದೇನು?
ಎಂಟಿಬಿ ನಾಗರಾಜ್ ಅವರನ್ನು ಭೇಟಿಯಾದ ಬಿವೈ ವಿಜಯೇಂದ್ರ
Updated By: Rakesh Nayak Manchi

Updated on: Jan 07, 2024 | 4:22 PM

ಬೆಂಗಳೂರು, ಜ.7: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಎಂಎಲ್​ಸಿ ಎಂಟಿಬಿ ನಾಗರಾಜ್ (MTB Nagaraj) ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ ಆಗಬೇಕು ಎಂದು ಮುಂದೆ ಚರ್ಚೆ ಆಗುತ್ತದೆ. ಪಕ್ಷದ ಹಿರಿಯರ ಜೊತೆಗೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.

ಬೆಂಗಳೂರು ನಗರದ ಗರುಡಾಚಾರಪಾಳ್ಯದಲ್ಲಿರುವ ನಿವಾಸದಲ್ಲಿ ಎಂಎಲ್​ಸಿ ಎಂಟಿಬಿ ನಾಗರಾಜ್ ಅವರನ್ನು ಭೇಟಿಯಾದ ನಂತರ ಮಾತನಾಡಿದ ವಿಜಯೇಂದ್ರ, ರಾಜ್ಯಾಧ್ಯಕ್ಷನಾಗಿ ಮೊದಲ ಬಾರಿಗೆ ಎಂಟಿಬಿ ನಾಗರಾಜ್ ಅವರನ್ನು ಭೇಟಿಯಾಗಿದ್ದೇನೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಎಂಟಿಬಿ ನಾಗರಾಜ್ ವ್ಯಕ್ತಿಯಲ್ಲ. ಶಕ್ತಿ. ಇಡೀ ರಾಜ್ಯದಲ್ಲಿ ಅವರದೇ ಆದಂತಹ ಜನ ಬೆಂಬಲವನ್ನ ಗಳಿಸಿಕೊಂಡಿರುವ ಎಂಟಿಬಿ ನಾಗರಾಜ್ ಅವರು ಬಿಜೆಪಿಯ ಶಕ್ತಿಯಾಗಿ ದುಡಿಯುತ್ತಿದ್ದಾರೆ ಎಂದರು.

ಇದನ್ನೂ ಓದಿ: ಬಿಕೆ ಹರಿಪ್ರಸಾದ್ ಬಂಧಿಸಿ ಮಂಪರು ಪರೀಕ್ಷೆ ಮಾಡಬೇಕು: ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲು ಗೆಲುವು ಸಾಧಿಸುಲು ಶ್ರಮಿಸಲು ಮೂಲಕ ನಿಮ್ಮೊಟ್ಟಿಗೆ ನಿಲ್ಲುತ್ತೇವೆ ಎಂದು ಎಂಟಿಬಿ ನಾಗರಾಜ್ ಅವರು ಭರವಸೆ ನೀಡಿದ್ದಾರೆ. ಅವರನ್ನು ಭೇಟಿ ಮಾಡಿ ತುಂಬಾ ಸಂತೋಷ ಆಗಿದೆ. ಅವರ ಮಾರ್ಗದರ್ಶನವನ್ನು ಪಕ್ಷ ತೆಗೆದುಕೊಳ್ಳುತ್ತದೆ. ಚಿಕ್ಕಬಳ್ಳಾಪುರ ಕ್ಷೇತ್ರ ಗೆಲ್ಲಲು. ತಯಾರಿ ಮಾಡಿಕೊಂಡಿದ್ದೇವೆ ಎಂದರು.

ಲೋಕಸಭೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳ ಗೆಲುವಿಗೆ ಸಂಕಲ್ಪ: ಎಂಟಿಬಿ ನಾಗರಾಜ್

ರಾಜ್ಯಾಧ್ಯಕ್ಷರಾದ ಮೇಲೆ ವಿಜಯೇಂದ್ರ ಅವರು ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ ಎಂದು ಎಂಟಿಬಿ ಹೇಳಿದರು. ಪ್ರಧಾನಿ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಿ ಮಾಡಲು ಸಂಕಲ್ಪ ಮಾಡಿದ್ದಾರೆ. ಅದರ ಭಾಗವಾಗಿ ಸೌಹಾರ್ದಯುತವಾಗಿ ಭೇಟಿಯಾಗಿದ್ದಾರೆ. ನಾನು ಕೂಡ ಅವರಿಗೆ ಆಶಿರ್ವಾದ ಮಾಡಿದ್ದೇನೆ ಎಂದರು.

ಬಿವೈ ವಿಜಯೇಂದ್ರ ಟ್ವೀಟ್

ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೆ ವಿಜಯೇಂದ್ರ ಪ್ರವಾಸ ಮಾಡಲಿ. ಮುಂದಿನ ಸಂಸತ್ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲಿ. ಭೇಟಿ ವೇಳೆ ಜವಬ್ದಾರಿ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು. ಚಿಕ್ಕಬಳ್ಳಾಪುರದಿಂದ ಸ್ಪರ್ಧೆ ಮಾಡುವ ವಿಚಾರವಾಗಿ ಮಾತನಾಡಿದ ಅವರು, ಪಕ್ಷದ ತೀರ್ಮಾನವೇ ಅಂತಿಮ ಎಂದರು.

ಬೆಂಗಳೂರು ನಗರದ ಗರುಡಾಚಾರಪಾಳ್ಯದಲ್ಲಿರುವ ಎಂಎಲ್​ಸಿ ಎಂಟಿಬಿ ನಾಗರಾಜ್ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ಕಾರ್ಯಕರ್ತರು ಪಟಾಕಿ ಸಿಡಿಸಿ ಸ್ವಾಗತಿಸಿದರು. ರಾಜ್ಯಾಧ್ಯಕ್ಷರನ್ನು ಹೂಗುಚ್ಛ ನೀಡಿ ಎಂಟಿಬಿ ಬರಮಾಡಿಕೊಂಡರು. ಭೇಟಿ ವೇಳೆ ಎಂಟಿಬಿ ಆಪ್ತರ ಜೊತೆಗೆ ವಿಜಯೇಂದ್ರ ಅವರು ಪೋಟೋ ತೆಗೆಸಿಕೊಂಡರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ