ಹೆಲ್ಮೆಟ್‌ನಿಂದ ಹೊಡೆದು ಗರ್ಭಿಣಿ ಪತ್ನಿಯನ್ನು ಕೊಂದಿದ್ದ ಪತಿ ಬಂಧನ; ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದ

ಸಧ್ಯದಲ್ಲೇ ಒಳ್ಳೆ ಹುಡುಗನನ್ನ ಹುಡುಕಿ ಭರ್ಜರಿಯಾಗಿ ಮದುವೆ ಮಾಡಿ ಕೊಡುವೆ ಎಂದಿದ್ದ ತಂದೆ-ತಾಯಿಯ ಮಾತನ್ನು ಧಿಕ್ಕರಿಸಿ ತಾನು ಪ್ರೀತಿಸಿದವನನ್ನೇ  ಮದುವೆ ಆಗಿದ್ದ ಯುವತಿಯನ್ನು ಕೊಲೆ ಮಾಡಿ ಎಕ್ಸಿಡೆಂಟ್ ಎಂಬ ಕಥೆ ಕಟ್ಟಿ ತಪ್ಪಿಸಿಕೊಳ್ಳಲು ಪ್ಲ್ಯಾನ್​ ಮಾಡಿದ್ದ ಪತಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಆಗಿದ್ದಾದರೂ ಎನು ಅಂತೀರಾ? ಈ ಸ್ಟೋರಿ ಓದಿ.

ಹೆಲ್ಮೆಟ್‌ನಿಂದ ಹೊಡೆದು ಗರ್ಭಿಣಿ ಪತ್ನಿಯನ್ನು ಕೊಂದಿದ್ದ ಪತಿ ಬಂಧನ; ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದ
ಬಂಧಿತ ಆರೋಪಿ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 07, 2024 | 4:50 PM

ದಾವಣಗೆರೆ, ಜ.07: ಜಿಲ್ಲೆಯ ಚನ್ನಗಿರಿ(Channagiri) ತಾಲೂಕಿನ ನುಗ್ಗಿಹಳ್ಳಿ ಕ್ರಾಸ್​ ಬಳಿ ಜ. 4 ರಂದು ವರದಕ್ಷಿಣೆ ಕಾರಣಕ್ಕಾಗಿ ಮೂರು ತಿಂಗಳ‌ ಗರ್ಭೀಣಿಯಾಗಿದ್ದ ಯಶೋಧ(23) ಎಂಬ ಮಹಿಳೆಯನ್ನು ಹೆಲ್ಮೆಟ್​ನಿಂದ ಹೊಡೆದು ಆಕೆಯ ಪತಿಯಾದ ತಿಪ್ಪೇಶ್ (28) ಎಂಬಾತ ಕೊಲೆ(Murder) ಮಾಡಿ ಅಪಘಾತವೆಂದು ನಾಟಕವಾಡಿದ್ದ. ಇದೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.

ತನಿಖೆ ಬಳಿಕ ಸತ್ಯಾಂಶ ಬಯಲು

ತಾಲೂಕಿನ ನರಗನಹಳ್ಳಿ ಗ್ರಾಮದ ತಿಪ್ಪೇಶ್ ಎಂಬಾತನ್ನ ಪ್ರೀತಿಸಿ ಆರು ತಿಂಗಳ ಹಿಂದೆ ಯಶೋಧಾ ಮದುವೆ ಆಗಿದ್ದರು. ಜನವರಿ ನಾಲ್ಕರಂದು ಪತಿ ಜೊತೆ ತವರಿಗೆ ಬಂದಿದ್ದಳು. ಬಳಿಕ ವಾಪಸ್ಸು ಹೋಗುವಾಗಿ ಬೈಕ್ ಅಪಘಾತವಾಗಿ ಯಶೋಧಾ ಸಾವನ್ನಪ್ಪಿದ್ದಾಳೆ ಎಂದು ಸಂಬಂಧಿಕರಿಗೆ ಪತಿ ತಿಪ್ಪೇಶ್ ಮಾಹಿತಿ‌ ನೀಡಿದ್ದ. ಕೂಡಲೇ ಸ್ಥಳಕ್ಕೆ ಬಂದು ಯಶೋಧಾಳ ಶವ ನೋಡಿದ ತಂದೆ ಚಂದ್ರಪ್ಪಗೆ ಇದು ಕೊಲೆ ಎಂಬ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನಲೆ ತನ್ನ ಪುತ್ರಿ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿಲ್ಲ, ಬದಲಾಗಿ ಕೊಲೆಯಾಗಿದೆ ಎಂದು ಯಶೋಧಾ ತಂದೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಇದೀಗ ಆತನಿಂದ ಸತ್ಯ ಹೊರಗೆ ತಗೆದಿದ್ದು, ತಾನೇ ಹೊಡೆದು ಸಾಯಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಒಬ್ಬಂಟಿ ಮಹಿಳೆಯ ಕತ್ತುಹಿಸುಕಿ ಕೊಲೆ

ಅಸಲಿಗೆ ತಿಪ್ಪೇಶ್ ಯಶೋಧಾ ಸಂಬಂಧಿಯಾಗಿದ್ದ. ಮದುವೆಗೂ ಮುನ್ನ ಅವರ ಮನೆಗೆ ಬಂದು ಹೋಗುತ್ತಿದ್ದ. ಇತ ಒಳ್ಳೆಯ ವ್ಯಕ್ತಿ ಅಲ್ಲ ಎಂಬುದರ ಬಗ್ಗೆ ಯಶೋಧಾ ತಂದೆ ತಾಯಿಗೆ ಗೊತ್ತಿತ್ತು. ಇದೇ ಕಾರಣಕ್ಕೆ ಇವನಿಗೆ ಕೊಟ್ಟು ಮದುವೆ ಮಾಡಲು ಕುಟುಂಬಸ್ಥರ ವಿರೋಧ ಇತ್ತು. ಆದ್ದರಿಂದ ಯಶೋಧಳನ್ನು ಕರೆದುಕೊಂಡು ಹೋಗಿ ದೇವಸ್ಥಾನದಲ್ಲಿ‌ಮದುವೆ ಆಗಿದ್ದ. ಮದುವೆಯಾಗಿ ಕೆಲವೇ ದಿನಗಳಲ್ಲಿ ವರದಕ್ಷಿಣೆ ಗಾಗಿ ಕಿರುಕುಳ ಶುರುಮಾಡಿದ್ದ ಇತ, ಕೊನೆಗೂ ಆಕೆಯನ್ನು ಬಲಿ ತೆಗೆದುಕೊಂಡಿದ್ದಾನೆ.

ಹೀಗೆ ಸಂಬಂಧದಲ್ಲಿ ಮನೆಗೆ ಹೋಗಿ ಪ್ರೀತಿಸಿ, ನಂತರ ಕುಟುಂಬದವರ ವಿರೋಧ ಕಟ್ಟಿಕೊಂಡು ದೇವಸ್ಥಾನದಲ್ಲಿ ಮದ್ವೆ ಆಗಿದ್ದ ದುಷ್ಟ ತಿಪ್ಪೇಶ್. ಆದ್ರೆ ಮನೆಯಲ್ಲಿ ಬೇರೆ ಯಾರನ್ನಾದ್ರು ಮದ್ವೆಯಾದ್ರು ಚನ್ನಾಗಿ ಎನಾದ್ರು ಕೊಡುತ್ತಿದ್ದರು ಎಂದು ತಿಪ್ಪೇಶನ ಸಂಬಂಧಿಕರು ತಲೆ ತಿಕ್ಕಿದ್ದರು. ಇದೇಕಾರಣಕ್ಕೆ ಚಿತ್ರ ಹಿಂಸೆ ನೀಡಿದ್ದ. ಈ ಹಿಂಸೆ ತಪ್ಪಿಸಿಕೊಳ್ಳಲು ತವರಿಗೆ ಬಂದಿದ್ದಳು. ಆದ್ರೆ ತವರಿಗೂ ಬಂದು ನಡು ರಸ್ತೆಯಲ್ಲಿ ಅಮಾಯಕ ಪತ್ನಿಯ ಜೀವ ತೆಗೆದಿದ್ದಾನೆ. ದುಷ್ಟನ ಕೈಗೆ ಸಿಕ್ಕು, ಹುಟ್ಟುವ ಮಗುವಿನ ಜೊತೆ ಶವವಾಗಿದ್ದಾಳೆ ಎಂಬುದೇ ದುರಂತ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ