ಹೆತ್ತಮ್ಮ ಹತ್ಯೆಯಾಗಿರುವುದು ಮೊದಲು ನೋಡಿದ್ದು ಆಕೆಯ ಮಕ್ಕಳು, ಕೊಲೆಯಾಗಿದ್ದು ಏಕೆ?

ಮಕ್ಕಳು ಎಂದಿನಂತೆ ಶಾಲೆ ಮುಗಿಸಿ ಮನೆಗೆ ಬಂದಿದ್ರು, ಮನೆಗೆ ಬಂದವರೇ ಅಮ್ಮ ಅಮ್ಮ ಎಂದು ಕರೆದಿದ್ರು. ಆದ್ರೆ ಆಕೆ ಮನೆಯ ಹಾಲ್ ನಲ್ಲಿ ಕೊಲೆಯಾಗಿ ಬಿದ್ದಿದ್ರು. ಮಹಿಳೆಯನ್ನ ಹಾಡಹಗಲೇ ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಹೆತ್ತಮ್ಮ ಹತ್ಯೆಯಾಗಿರುವುದು ಮೊದಲು ನೋಡಿದ್ದು ಆಕೆಯ ಮಕ್ಕಳು, ಕೊಲೆಯಾಗಿದ್ದು ಏಕೆ?
ಹೆತ್ತಮ್ಮ ಹತ್ಯೆಯಾಗಿರುವುದು ಮೊದಲು ನೋಡಿದ್ದು ಆಕೆಯ ಮಕ್ಕಳು, ಕೊಲೆಯಾಗಿದ್ದು ಏಕೆ?
Follow us
ರಾಮು, ಆನೇಕಲ್​
| Updated By: ಸಾಧು ಶ್ರೀನಾಥ್​

Updated on: Jan 05, 2024 | 12:24 PM

ಹಾಡಹಗಲೇ ಗೃಹಿಣಿಯೋರ್ವಳನ್ನ (woman) ಕತ್ತು ಹಿಸುಕಿ ಹತ್ಯೆ (murder) ಮಾಡಿರುವ ಘಟನೆ ಸಿಲಿಕಾನ್ ವ್ಯಾಲಿ ಖ್ಯಾತಿಯ ಎಲೆಕ್ಟ್ರಾನಿಕ್ ಸಿಟಿಯ (Electronic City) ಮಗ್ಗಲಿನಲ್ಲಿಯೇ ನಡೆದಿದೆ. ಇದು ಐಟಿಬಿಟಿ ಸಿಲಿಕಾನ್​​ ಸಿಟಿಯ ಜನರನ್ನ ಬೆಚ್ಚಿ ಬೀಳಿಸಿದೆ. ಹಾಡಹಗಲೇ ಈ ರೀತಿಯ ಹತ್ಯೆ ನಡೆದ್ರೆ ನಮ್ಮ‌ಜೀವಕ್ಕೂ ರಕ್ಷಣೆ ಇದ್ಯಾ ಎನ್ನುವ ಪ್ರಶ್ನೆ ಜನರನ್ನ ಕಾಡ್ತಿದೆ.‌ ಅಷ್ಟಕ್ಕೂ ಹತ್ಯೆ ನಡೆದಿದ್ದು ಯಾವಾಗ, ಮೃತದೇಹವನ್ನ ಮೊದಲು ನೋಡಿದ್ದು ಯಾರು ಅಂತ ಕೇಳಿದ್ರೆ ನಿಮ್ಗೆ ಬೇಜಾರ್ ಆಗುತ್ತೆ.

ಮಕ್ಕಳು ಎಂದಿನಂತೆ ಶಾಲೆ ಮುಗಿಸಿ ಮನೆಗೆ ಬಂದಿದ್ರು, ಮನೆಗೆ ಬಂದವರೇ ಅಮ್ಮ ಅಮ್ಮ ಎಂದು ಕರೆದಿದ್ರು. ಆದ್ರೆ ಆಕೆ ಮನೆಯ ಹಾಲ್ ನಲ್ಲಿ ಕೊಲೆಯಾಗಿ ಬಿದ್ದಿದ್ರು. ಹೌದು ಮೇಲಿನ ಪೋಟೋದಲ್ಲಿ ಕಾಣ್ತಾ ಇರೋ ಲೇಡಿಯ ಹೆಸರು ನೀಲಂ (30) ಅಂತ, ಇದೇ ಮಹಿಳೆಯನ್ನ ಹಾಡಹಗಲೇ ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಮೂಲತಃ ಉತ್ತರ ಪ್ರದೇಶ ಮೂಲದವರಾಗಿದ್ದು, ಕಳೆದ ಕೆಲ ವರ್ಷಗಳ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೆಟ್ಟದಾಸನಪುರದ ಸಾಯಿ ಶಕ್ತಿ ಬಡಾವಣೆಯ ಗಂಗಾ ಬ್ಲಾಕ್ ನ ಬಾಡಿಗೆ ಮನೆಯಲ್ಲಿ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿದ್ರು. ಪತಿ ಹಾರ್ಡ್ ವೇರ್ ಶಾಪ್ ಜೊತೆಗೆ ಪೈಂಟಿಂಗ್ ಕಾಂಟ್ರಾಕ್ಟ್ ಕೆಲಸ ಮಾಡಿಕೊಂಡಿದ್ದ. ಎಂದಿನಂತೆ ಮಕ್ಕಳು ಶಾಲೆಗೆ ಹೋಗಿದ್ರೆ, ಪತಿ ಕೆಲಸಕ್ಕೆ ಹೋಗಿದ್ದ ಎನ್ನಲಾಗಿದೆ. ಮನೆಯಲ್ಲಿ ಮಹಿಳೆ ನೀಲಂ ಮಾತ್ರ ಒಬ್ಬಂಟಿಯಾಗಿದ್ದಾಗ ಯಾರೋ ಅಪರಿಚಿತರು ಮನೆಗೆ ನುಗ್ಗಿ ಮಹಿಳೆಯ ಹತ್ಯೆ ಮಾಡಿದ್ದಾರೆ.

Also Read: ಹಾಯಾಗಿದ್ದ ದಂಪತಿ ಬಾಳಲ್ಲಿ ಬಿರುಗಾಳಿಯಂತೆ ಮೂರನೆಯವ ಎಂಟ್ರಿ ಕೊಟ್ಟ, ಗರ್ಭಿಣಿಯಾದ ಬಳಿಕ ನಡು ನೀರಲ್ಲಿ ಕೈಬಿಟ್ಟ

ಸದ್ಯ ಸ್ಥಳಕ್ಕೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಶ್ವಾನದಳ ಹಾಗೂ ಎಫ್ಎಸ್ಎಲ್ ತಂಡ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕವಾಗಿ ಪರಿಚಿತರೇ ಹತ್ಯೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ಹಾಗೂ ಆಕೆಯ ಕಾಲ್ ಡಿಟೈಲ್ಸ್ ಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ. ಕೊಲೆ ಪ್ರಕರಣ ಆರೋಪಿಯನ್ನ ಬಂಧಿಸಲು ವಿಶೇಷ ತಂಡ ಮಾಡಲಾಗಿದೆ.

ಇನ್ನು ಈ ಕೊಲೆ ಲಾಭಕ್ಕಾಗಿ ಅಲ್ಲ, ಬಹುಷಃ ವೈಯಕ್ತಿಕ ವಿಚಾರವಾಗಿ ನಡೆದಿದ್ಯಾ ಎನ್ನುವ ಶಂಕೆ ವ್ಯಕ್ತವಾಗಿದೆ.‌ ಒಟ್ಟಿನಲ್ಲಿ ಕೊಲೆ ಯಾವೊಂದು ವಿಚಾರವಾಗಿ ನಡೆದಿದೆ ಅನ್ನೋದು ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ