AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಯಾಗಿದ್ದ ದಂಪತಿ ಬಾಳಲ್ಲಿ ಬಿರುಗಾಳಿಯಂತೆ ಮೂರನೆಯವ ಎಂಟ್ರಿ ಕೊಟ್ಟ, ಗರ್ಭಿಣಿಯಾದ ಬಳಿಕ ನಡು ನೀರಲ್ಲಿ ಕೈಬಿಟ್ಟ

ಹೊಳಲ್ಕೆರೆ ಪಟ್ಟಣದಲ್ಲಿ ವಂಚಕನೋರ್ವ ಮಹಿಳೆಯನ್ನು ನಂಬಿಸಿ ಬದುಕನ್ನು ಬೀದಿಗೆ ತಂದಿರುವ ಘಟನೆ ನಡೆದಿದೆ. ಗರ್ಭಿಣಿ ಮಹಿಳೆ ಯಾರ ನೆರವೂ ಇಲ್ಲದೆ ಒಬ್ಬಂಟಿಯಾಗಿ ಬದುಕುವ ದುಃಸ್ಥಿತಿ ಎದುರಾಗಿದೆ. ಹೀಗಾಗಿ, ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಹಾಯಾಗಿದ್ದ ದಂಪತಿ ಬಾಳಲ್ಲಿ ಬಿರುಗಾಳಿಯಂತೆ ಮೂರನೆಯವ ಎಂಟ್ರಿ ಕೊಟ್ಟ, ಗರ್ಭಿಣಿಯಾದ ಬಳಿಕ ನಡು ನೀರಲ್ಲಿ ಕೈಬಿಟ್ಟ
ಹಾಯಾಗಿದ್ದ ದಂಪತಿ ಬಾಳಲ್ಲಿ ಬಿರುಗಾಳಿಯಂತೆ ಮೂರನೆಯವ ಎಂಟ್ರಿ ಕೊಟ್ಟ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: Jan 05, 2024 | 10:55 AM

Share

ಮದುವೆಯಾಗಿ ಹಾಯಾಗಿದ್ದವರ ಬದುಕಿನಲ್ಲಿ ಬಿರುಗಾಳಿಯಂತೆ ಮೂರನೇಯವನು ಎಂಟ್ರಿ ಆಗಿದ್ದನು. ನಾನೇ ಬಾಳು ಕೊಡುತ್ತೇನೆಂದು ಮಹಿಳೆಗೆ ನಂಬಿಸಿ ಜೋಡಿ (Couple) ಅಗಲು ಬಯಸಿದ್ದನು. ಆದ್ರೆ, ಗರ್ಭಿಣಿಯಾದ (Pregnant) ಬಳಿಕ ನಡು ನೀರಲ್ಲಿ ಕೈಬಿಟ್ಟು ಹೋಗಿದ್ದಾನೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತು ವರದಿ ಇಲ್ಲಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ. ನಂಬಿಸಿ ನಡು ನೀರಲ್ಲಿ ಕೈಬಿಟ್ಟವನ ವಿರುದ್ಧ ಹಿಡಿಶಾಪ. ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹ. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ನಗರದ ಜಿಲ್ಲಾಸ್ಪತ್ರೆಯಲ್ಲಿ. ಹೌದು, ಹೊಳಲ್ಕೆರೆ ಪಟ್ಟಣದ (Holalkere, Chitradurga) ಹೊಸದುರ್ಗ ರೋಡ್ ನಿವಾಸಿ ದಿವ್ಯ 2015ರಲ್ಲಿ ಚಿಕನ್ ಅಂಗಡಿ ವ್ಯಾಪಾರಿ ರಾಜು ಜತೆ ಮದುವೆಯಾಗಿದ್ದರು. ಎರಡು ವರ್ಷ ಕಾಲ ಚೆನ್ನಾಗಿಯೇ ಜೀವಿಸಿದ್ದರು.

ಆದ್ರೆ, 2016ರಲ್ಲಿ ವಸಂತ್ ನಾಯ್ಕ್ ಎಂಬ ಮೂರನೇ ವ್ಯಕ್ತಿ ಇಬ್ಬರ ನಡುವೆ ಎಂಟ್ರಿ ಆಗಿದ್ದನಂತೆ. ಮೋಹಕ್ಕೆ ಮರುಳಾದ ದಿವ್ಯ, ವಸಂತ್ ನಾಯ್ಕ್ ಬೆನ್ನು ಬಿದ್ದಿದ್ದಳು. ರಾಜುಗೆ ಡೈವರ್ಸ್ ಕೊಟ್ಟು ನನ್ನ ಜತೆ ಬಾಳ್ವೆ ಮಾಡುವಂತೆ ನಂಬಿಸಿದ್ದ ವಸಂತ್ 2019ರಲ್ಲಿ ಡೈವರ್ಸ್ ಕೊಡಿಸಿ ದಿವ್ಯಳ ಜತೆ ಅವಳಹಟ್ಟಿ ಗ್ರಾಮದಲ್ಲಿ ವಾಸವಾಗಿದ್ದನು. ಆದ್ರೆ, ದಿವ್ಯ ಗರ್ಭಿಣಿಯಾದ ವಿಷಯ ತಿಳಿಯುತ್ತಿದ್ದಂತೆ ಗರ್ಭಪಾತ ಮಾಡಿಸುವಂತೆ ಗಲಾಟೆ ಶುರು ಮಾಡಿದ್ದಾನೆ. ತನ್ನ ಮೊದಲ ಪತ್ನಿ ಜತೆ ಸೇರಿ ದೌರ್ಜನ್ಯ ನಡೆಸುತ್ತಿದ್ದಾನೆ. ಎರಡು ತಿಂಗಳಿಂದ ನನ್ನ ಬಿಟ್ಟು ಹೋಗಿದ್ದಾನೆ ಎಂದು ದಿವ್ಯ ಆರೋಪಿಸಿದ್ದಾಳೆ.

ಇನ್ನು ಹೊಳಲ್ಕೆರೆ ಠಾಣೆಗೆ ದಿವ್ಯ ದೂರು ನೀಡಿದ್ದಾರೆ. ಆದ್ರೆ, ಪೊಲೀಸ್ರು ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಆರೋಪಿ ತಲೆ ಮರೆಸಿಕೊಂಡಿದ್ದಾನೆಂದು ಹೇಳಲಾಗುತ್ತಿದೆ. ಆದ್ರೆ, ಆರೋಪಿ ವಸಂತ್ ನಾಯ್ಕ್ ಮಹಿಳೆಯ ಬದುಕಿನಲ್ಲಿ ಚೆಲ್ಲಾಟ ಆಡಿದ್ದಾನೆ. ಅಂತೆಯೇ ದಿವ್ಯ ಗರ್ಭಿಣಿಯಾದ ಸಂದರ್ಭದಲ್ಲಿ ಅನೇಕ ಸಲ ಭ್ರೂಣ ಹತ್ಯೆ ಮಾಡಿರುವ ಶಂಕೆ ಇದೆ. ಈ ಬಗ್ಗೆಯೂ ಪೊಲೀಸ್ರು ತನಿಖೆ ನಡೆಸಬೇಕು ಎಂಬುದು ಇವ್ರ ಆಗ್ರಹ.

Also Read: ಅನೈತಿಕ ಸಂಬಂಧ: ಪರಸ್ಪರ ಕಿತ್ತಾಟ, ಇಬ್ಬರು ಆಸ್ಪತ್ರೆ ಪಾಲು, ಮಚ್ಚಿನೇಟು ತಿಂದ ಯುವಕನ ಸ್ಥಿತಿ ಗಂಭೀರ

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ವಂಚಕನೋರ್ವ ಮಹಿಳೆಯನ್ನು ನಂಬಿಸಿ ಬದುಕನ್ನು ಬೀದಿಗೆ ತಂದಿರುವ ಘಟನೆ ನಡೆದಿದೆ. ಗರ್ಭಿಣಿ ಮಹಿಳೆ ಯಾರ ನೆರವೂ ಇಲ್ಲದೆ ಒಬ್ಬಂಟಿಯಾಗಿ ಬದುಕುವ ದುಃಸ್ಥಿತಿ ಎದುರಾಗಿದೆ. ಹೀಗಾಗಿ, ಪೊಲೀಸ್ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ