ಅನೈತಿಕ ಸಂಬಂಧ: ಪರಸ್ಪರ ಕಿತ್ತಾಟ, ಇಬ್ಬರು ಆಸ್ಪತ್ರೆ ಪಾಲು, ಮಚ್ಚಿನೇಟು ತಿಂದ ಯುವಕನ ಸ್ಥಿತಿ ಗಂಭೀರ

ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ತಾಲೂಕಿನ ಕರಕುಂಚಿ ಗ್ರಾಮದಲ್ಲಿ ಜ್ಯೋತಿ ಮನೆಯಲ್ಲಿ ಘಟನೆ ನಡೆದಿದೆ. ಮಹಿಳೆಯರು ಅನೈತಿಕ ಸಂಬಂಧ ಊರತುಂಬೆಲ್ಲ ಹಬ್ಬಿಸಿದ್ದಕ್ಕೆ ಆಕ್ರೋಶಗೊಂಡಿದ್ದಳು. ಇಬ್ಬರ ನಡುವೆ ಗಲಾಟೆ ನಡೆದಿದೆ. ಸಿಟ್ಟಿಗೆದ್ದ ಮಹಿಳೆಯು ಮಚ್ಚಿನಿಂದ ನವೀನ್ ತಲೆಗೆ ಏಟು ಕೊಟ್ಟಿದ್ದಾಳೆ. ನವೀನ್ ಕೂಡಾ ಅದೇ ಮಚ್ಚಿನಿಂದ ಜ್ಯೋತಿ ಮೇಲೆ ಪ್ರತಿದಾಳಿ ಮಾಡಿದ್ದಾನೆ. 

ಅನೈತಿಕ ಸಂಬಂಧ: ಪರಸ್ಪರ ಕಿತ್ತಾಟ, ಇಬ್ಬರು ಆಸ್ಪತ್ರೆ ಪಾಲು, ಮಚ್ಚಿನೇಟು ತಿಂದ ಯುವಕನ ಸ್ಥಿತಿ ಗಂಭೀರ
ಅನೈತಿಕ ಸಂಬಂಧ: ಪರಸ್ಪರ ಕಿತ್ತಾಟ, ಇಬ್ಬರು ಆಸ್ಪತ್ರೆ ಪಾಲು
Follow us
Basavaraj Yaraganavi
| Updated By: ಸಾಧು ಶ್ರೀನಾಥ್​

Updated on:Jan 03, 2024 | 5:27 PM

ಆ ಇಬ್ಬರೂ ಸಂಬಂಧಿಗಳು. ಮಹಿಳೆಗೆ ಮದುವೆಯಾಗಿ ಮಕ್ಕಳಿದ್ದಾರೆ. ಈ ನಡುವೆ ಸಂಬಂಧಿಯನ್ನು ಮದುವೆಯಾಗಿರುವ ಯುವಕನ ಜೊತೆ ಮಹಿಳೆಯೊಬ್ಬಳಿಗೆ ಅನೈತಿಕ ಸಂಬಂಧ (Illicit relationship) ಇದೆ ಎನ್ನುವ ಪುಕಾರು ಎಲ್ಲಡೆ ಹಬ್ಬಿತ್ತು. ಇದೇ ವಿಚಾರವಾಗಿ ಇಬ್ಬರ ನಡುವೆ ಬಿಗ್ ಫೈಟ್ ನಡೆಯಿತು. ಮಹಿಳೆಯು ಮಚ್ಚಿನಿಂದ ವ್ಯಕ್ತಿಯ ಮೇಲೆ ದಾಳಿ ಮಾಡಿದ್ರೆ, ಆತನು ಮಹಿಳೆಗೆ ಮಚ್ಚಿನಿಂದಲೇ ತಿರುಗೇಟು ಕೊಟ್ಟಿದ್ದಾನೆ. ಅನೈತಿಕತೆ ತಂದ ಅವಾಂತರ ಕುರಿತು ಒಂದು ವರದಿ ಇಲ್ಲಿದೆ.

ಶಿವಮೊಗ್ಗ (Shivamogga) ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಹೀಗೆ ಗಾಯಗೊಂಡು ಮಲಗಿರುವ ಮಹಿಳೆಯ ಹೆಸರು ಜ್ಯೋತಿ. ಮಹಿಳೆಯ ತಲೆ ಮತ್ತು ಕೈ ಭಾಗಕ್ಕೆ ಮಹಿಳೆಯ ಸಂಬಂಧಿ ನವೀನ್ ಎನ್ನುವ ವ್ಯಕ್ತಿಯು ಮಚ್ಚಿನಿಂದ ದಾಳಿ ಮಾಡಿದ್ದಾನೆ. ಘಟನೆಯಲ್ಲಿ ಗಾಯಗೊಂಡ ಮಹಿಳೆಯನ್ನು ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ತಲೆಗೆ ಬಿದ್ದ ಗಾಯಕ್ಕೆ ವೈದ್ಯರು ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಮಹಿಳೆಯ ದಾಖಲಾಗಿದ್ದು ಚಿಕಿತ್ಸೆ ಮುಂದುವೆದಿದೆ. ಜ್ಯೋತಿ ಮತ್ತು ನವೀನ್ ಇಬ್ಬರು ಸಂಬಂಧಿಕರು. ಇಬ್ಬರ ನಡುವೆ ಅನೈತಿಕ ಸಂಬಂಧವಿತ್ತಂತೆ. ಇಬ್ಬರದ್ದು ಮದುವೆಯಾಗಿ ಮಕ್ಕಳಿದ್ದಾರೆ.

ಈ ನಡುವೆ ಅನೈತಿಕ ಸಂಬಂಧ ಇರುವ ವಿಚಾರ ಊರಿನ ತುಂಬೆಲ್ಲಾ ನವೀನ್ ಹಬ್ಬಿಸಿದ್ದನಂತೆ. ಈ ವಿಚಾರವಾಗಿ ನಿನ್ನೆ ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ತಾಲೂಕಿನ ಕರಕುಂಚಿ ಗ್ರಾಮದಲ್ಲಿ ಜ್ಯೋತಿ ಮನೆಯಲ್ಲಿ ಘಟನೆ ನಡೆದಿದೆ. ಮಹಿಳೆಯರು ಅನೈತಿಕ ಸಂಬಂಧ ಊರತುಂಬೆಲ್ಲ ಹಬ್ಬಿಸಿದ್ದಕ್ಕೆ ಆಕ್ರೋಶಗೊಂಡಿದ್ದಳು. ಇಬ್ಬರ ನಡುವೆ ಗಲಾಟೆ ನಡೆದಿದೆ. ಸಿಟ್ಟಿಗೆದ್ದ ಮಹಿಳೆಯು ಮಚ್ಚಿನಿಂದ ನವೀನ್ ತಲೆಗೆ ಏಟು ಕೊಟ್ಟಿದ್ದಾಳೆ. ನವೀನ್ ಕೂಡಾ ಅದೇ ಮಚ್ಚಿನಿಂದ ಜ್ಯೋತಿ ಮೇಲೆ ಪ್ರತಿದಾಳಿ ಮಾಡಿದ್ದಾನೆ. ಮಹಿಳೆಯು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲು ಆದ್ರೆ ನವೀನ್ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲು ಆಗಿದ್ದಾನೆ.

ಇದನ್ನೂ ಓದಿ: ಛೋಟಾ ಮುಂಬೈಯಲ್ಲಿ ಮಾವ-ನಾದಿನಿ ಸೆಲ್ಫಿ ಸುಸೈಡ್ ಕಥೆ: ಬೆಂಗಳೂರು ಮೂಲದ ವಿವಾಹಿತರ ನಡುವಣ ವಿಲಕ್ಷಣ ಪ್ರೇಮ ಕಥೆ!

ಸಂಬಂಧಿಕರಾದ್ರೂ ಇಬ್ಬರ ಅನೈತಿಕ ಸಂಬಂಧ ಗುಟ್ಟಾಗಿ ಇರಬೇಕಿತ್ತು. ಕಾರಣ ಮಹಿಳೆಯ ಮದುವೆಯಾಗಿ ಎರಡು ದೊಡ್ಡ ಮಕ್ಕಳಿದ್ದಾರೆ. ಇನ್ನು ನವೀನ್ ಗೂ ಮದುವೆಯಾಗಿ ಮಕ್ಕಳಿದ್ದಾರೆ. ಈ ನಡುವೆ ನವೀನ್ ಅನೈತಿಕ ಸಂಬಂಧವನ್ನು ಊರತುಂಬೆಲ್ಲಾ ಪುಕಾರು ಹಬ್ಬಿಸಿಸಿದ್ದಾನೆ. ಇದರಿಂದ ಮಹಿಳೆಗೆ ಸಂಸಾರದಲ್ಲಿ ಸಮಸ್ಯೆಗಳು ಶುರುವಾಗಿದ್ದವು. ಕಂಡ ಕಂಡವರು ಬಾಯಿಯಲ್ಲಿ ಜ್ಯೋತಿಯ ನವೀನ್ ಅನೈತಿಕ ಸಂಬಂಧ ವಿಚಾರವಾಗಿ ಚರ್ಚೆ ನಡೆಯುತ್ತಿತ್ತು. ಇದರಿಂದ ಜ್ಯೋತಿ ಮಾನ ಮರ್ಯಾದೆ ಬೀದಿಯಲ್ಲಿ ಹರಾಜು ಆಗುತ್ತಿತ್ತು. ಇದರಿಂದ ಕೋಪಗೊಂಡ ಮಹಿಳೆಯ ಸಂಬಂಧಿ ನವೀನ್ ನ್ನು ಮನೆಗೆ ಭೇಟಿ ಯಾಗಲು ತಿಳಿಸಿದ್ದಳು. ಮನೆಗೆ ಬಂದಿದ್ದ ನವೀನ್ ಗೆ ಮಹಿಳೆಯು ಮಚ್ಚಿನಿಂದ ದಾಳಿ ಮಾಡಿ ತನ್ನ ಸಿಟ್ಟು ತೀರಿಸಿಕೊಂಡಿದ್ದಾಳೆ. ಇತ್ತ ನವೀನ್ ತಲೆಗೆ ಬಲವಾಗಿ ಪೆಟ್ಟು ಬಿದ್ದಿದೆ. ಆತನ ಸ್ಥಿತಿ ಗಂಭೀರವಾಗಿದೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನವೀನ್ ಸಂಬಂಧಿಕರು ಘಟನೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಗಲಾಟೆ ಕೇಸ್ ಲಕ್ಕೋಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲು ಆಗಿದೆ.

ಸಂಬಂಧಿ ಅಂತಾ ಸಲಿಗೆ ಕೊಟ್ಟಿದ್ದೇ ಇಲ್ಲಿ ಮಹಿಳೆಗೆ ಮುಳುವಾಗಿದೆ. ಇಬ್ಬರ ನಡುವೆ ಅನೈತಿಕ ಸಂಬಂಧ ಇರುವ ರಹಸ್ಯವನ್ನು ನವೀನ್ ಬಯಲು ಮಾಡಿದ್ದೆ ಇಲ್ಲಿ ದೊಡ್ಡ ಯಡವಟ್ಟಿಗೆ ಕಾರಣವಾಗಿದೆ. ಪರಸ್ಪರ ಗಲಾಟೆಯಲ್ಲಿ ಇಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಆದ್ರೆ ಇವರ ಗಲಾಟೆಯಲ್ಲಿ ಎರಡು ಕುಟುಂಬಸ್ಥರು ಈಗ ಆತಂಕ್ಕೊಳಗಾಗಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Wed, 3 January 24

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?