ಶಿರಾ, ಆರ್​.ಆರ್​.ನಗರ ಬಿಜೆಪಿ ತೆಕ್ಕೆಗೆ -ಸಿ ವೋಟರ್‌ ಸಮೀಕ್ಷೆ

ಬೆಂಗಳೂರು: ಆರ್​.ಆರ್​.ನಗರ ಹಾಗೂ ಶಿರಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಂತರ ನಡೆಸಿದ ಸಿ ವೋಟರ್‌ ಸಮೀಕ್ಷೆಯಲ್ಲಿ ಎರಡೂ ಕಡೆ ಬಿಜೆಪಿ ಜಯಗಳಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಇತ್ತ, ರಾಜರಾಜೇಶ್ವರಿನಗರದಲ್ಲಿ ಸಿ ವೋಟರ್‌ ಸಮೀಕ್ಷೆ ಪ್ರಕಾರ ಬಿಜೆಪಿಯ ಮುನಿರತ್ನ ಜಯಗಳಿಸುವ ಸಾಧ್ಯತೆಯಿದ್ದು ಅವರು ಶೇ.37.8ರಷ್ಟು ಮತ ಪಡೆದಿರುವ ಸಾಧ್ಯತೆಯಿದೆ ಎಂದು ಚುನಾವಣೋತ್ತರ ಸಮೀಕ್ಷೆ ವರದಿಮಾಡಿದೆ. ಕಾಂಗ್ರೆಸ್​ನ ಅಭ್ಯರ್ಥಿ ಕುಸುಮಾ ಶೇ.31.1ರಷ್ಟು ಮತಗಳಿಸಿರುವ ಸಾಧ್ಯತೆಯಿದ್ದು JDS‌ ಅಭ್ಯರ್ಥಿ ಕೃಷ್ಣಮೂರ್ತಿಗೆ ಶೇ.14ರಷ್ಟು ಮತಗಳು ಸಿಕ್ಕಿರುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ವರದಿಯಾಗಿದೆ. R​.R​.ನಗರದಲ್ಲಿ ಇತರರಿಗೆ […]

ಶಿರಾ, ಆರ್​.ಆರ್​.ನಗರ ಬಿಜೆಪಿ ತೆಕ್ಕೆಗೆ -ಸಿ ವೋಟರ್‌ ಸಮೀಕ್ಷೆ

Updated on: Nov 07, 2020 | 7:48 PM

ಬೆಂಗಳೂರು: ಆರ್​.ಆರ್​.ನಗರ ಹಾಗೂ ಶಿರಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಂತರ ನಡೆಸಿದ ಸಿ ವೋಟರ್‌ ಸಮೀಕ್ಷೆಯಲ್ಲಿ ಎರಡೂ ಕಡೆ ಬಿಜೆಪಿ ಜಯಗಳಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಇತ್ತ, ರಾಜರಾಜೇಶ್ವರಿನಗರದಲ್ಲಿ ಸಿ ವೋಟರ್‌ ಸಮೀಕ್ಷೆ ಪ್ರಕಾರ ಬಿಜೆಪಿಯ ಮುನಿರತ್ನ ಜಯಗಳಿಸುವ ಸಾಧ್ಯತೆಯಿದ್ದು ಅವರು ಶೇ.37.8ರಷ್ಟು ಮತ ಪಡೆದಿರುವ ಸಾಧ್ಯತೆಯಿದೆ ಎಂದು ಚುನಾವಣೋತ್ತರ ಸಮೀಕ್ಷೆ ವರದಿಮಾಡಿದೆ. ಕಾಂಗ್ರೆಸ್​ನ ಅಭ್ಯರ್ಥಿ ಕುಸುಮಾ ಶೇ.31.1ರಷ್ಟು ಮತಗಳಿಸಿರುವ ಸಾಧ್ಯತೆಯಿದ್ದು JDS‌ ಅಭ್ಯರ್ಥಿ ಕೃಷ್ಣಮೂರ್ತಿಗೆ ಶೇ.14ರಷ್ಟು ಮತಗಳು ಸಿಕ್ಕಿರುವ ಸಾಧ್ಯತೆಯಿದೆ ಎಂದು ಸಮೀಕ್ಷೆಯಲ್ಲಿ ವರದಿಯಾಗಿದೆ. R​.R​.ನಗರದಲ್ಲಿ ಇತರರಿಗೆ ಶೇ.17.2ರಷ್ಟು ಮತಗಳು ಲಭ್ಯವಾಗಿರುವ ಸಾಧ್ಯತೆಯಿದೆ ಎಂದು ಸಿ ವೋಟರ್‌ ವರದಿಮಾಡಿದೆ.

ಇತ್ತ, ಶಿರಾದಲ್ಲಿ ಬಿಜೆಪಿಯ ರಾಜೇಶ್‌ ಗೌಡ ಜಯಭೇರಿ ಬಾರಿಸುವ ಸಾಧ್ಯತೆಯಿದೆ ಎಂದು ಸಿ ವೋಟರ್‌ ಸಮೀಕ್ಷೆ ಹೇಳಿದೆ. ರಾಜೇಶ್‌ ಗೌಡಗೆ ಶೇ.36.6ರಷ್ಟು ಮತಗಳು ಸಿಕ್ಕಿರುವ ಸಾಧ್ಯತೆಯಿದೆ. ಕಾಂಗ್ರೆಸ್​ನ ಜಯಚಂದ್ರಗೆ ಶೇ.32.5ರಷ್ಟು ಮತಗಳು ಲಭ್ಯವಾಗಿರುವ ಸಾಧ್ಯತೆಯಿದ್ದರೆ JDS ಅಭ್ಯರ್ಥಿ ಅಮ್ಮಾಜಮ್ಮಗೆ ಶೇ.17.4ರಷ್ಟು ಮತಗಳಿಕೆ ಆಗಿರುವ ಸಾಧ್ಯತೆಯಿದೆ ಎಂದು ಸಮೀಕ್ಷೆ ವರದಿಮಾಡಿದೆ. ಜೊತೆಗೆ, ಶಿರಾ ಕ್ಷೇತ್ರದಲ್ಲಿ ಇತರರಿಗೆ ಶೇ.13.5ರಷ್ಟು ಮತಗಳು ಸಿಕ್ಕಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಹಾಗಾಗಿ, ಸಮೀಕ್ಷೆ ಪ್ರಕಾರ ಶಿರಾದಲ್ಲಿ ಮೊದಲ ಬಾರಿಗೆ BJP ಖಾತೆ ತೆರೆಯುವ ನಿರೀಕ್ಷೆಯಿದೆ.