
ಬೆಂಗಳೂರು, (ಸೆಪ್ಟೆಂಬರ್ 29): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಅಂದರೆ, ಅದು ಗ್ಯಾರಂಟಿ ಯೋಜನೆಯ ಶಕ್ತಿ ಯೋಜನೆ. 2023 ಜೂನ್- 11 ರಂದು ರಾಜ್ಯದಲ್ಲಿ ಶಕ್ತಿ ಯೋಜನೆಯನ್ನು ಜಾರಿಗೆ ಬಂದಿದೆ. ಆದರೆ ಈ ಯೋಜನೆ ಮಿಸ್ ಯೂಸ್ ಆಗ್ತಿರೋ ದೂರುಗಳು ಕೇಳಿ ಬರುತ್ತಿವೆ.ಬೇರೆ ಬೇರೆ ರಾಜ್ಯದ ಮಹಿಳೆಯರು ನಕಲಿ ಆಧಾರ್ ಕಾರ್ಡ್ ಬಳಕೆ ಮಾಡಿಕೊಂಡು ಕೆಎಸ್ಆರ್ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಬಸ್ಸುಗಳಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದರಿಂದ ನಾಲ್ಕು ಸಾರಿಗೆ ನಿಗಮಕ್ಕೆ ಕೋಟ್ಯಂತರ ರುಪಾಯಿ ನಷ್ಟ ಉಂಟಾಗುತ್ತಿದ್ದು, ಇದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಇದೀಗ 250 ಕೋಟಿ ರುಪಾಯಿ ವೆಚ್ಚದಲ್ಲಿ ರಾಜ್ಯದ ಒಂದು ಕೋಟಿ ಮಹಿಳೆಯರಿಗೆ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲು ಟೆಂಡರ್ ಕರೆದಿದೆ.
ಮೊದಲು ಬಿಎಂಟಿಸಿ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವುದು, ನಂತರ ಉಳಿದ ಸಾರಿಗೆ ನಿಗಮಗಳ ಮಹಿಳಾ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ವೋಟರ್ ಐಡಿ, ಆಧಾರ್ ಕಾರ್ಡ್ ನೀಡಿದ್ರೆ ಸಾಕು, ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ. ಸ್ಮಾರ್ಟ್ ಕಾರ್ಡ್ ನಲ್ಲಿ ನಮ್ಮ ಮೆಟ್ರೋ ಸಂಚಾರದ ಬಳಕೆಗೆ ಅವಕಾಶ ನೀಡಲಾಗಿದೆ. ಬಸ್ ನಲ್ಲಿ ಸ್ಮಾರ್ಟ್ ಕಾರ್ಡ್ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು. ಇದಕ್ಕೆ ಮಹಿಳೆಯರು ಶಕ್ತಿ ಯೋಜನೆಯ ದುರ್ಬಳಕೆ ತಡೆಯಲು ಪರಿಷ್ಕರಣೆ ಮಾಡ್ತಿರೋದು ಒಳ್ಳೆಯದು ಅಂತಾರೇ.
ಇನ್ನೂ ಶಕ್ತಿಯ ಮಿಸ್ ಯೂಸ್ ತಡೆಯಲು ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲು ಟೆಂಡರ್ ಕರೆದಿದ್ದು, ವೋಟರ್ ಐಡಿ ಕಾರ್ಡ್ ಇದ್ದವರಿಗೆ ಮಾತ್ರ ಸ್ಮಾರ್ಟ್ ಕಾರ್ಡ್ ನೀಡಲು ತೀರ್ಮಾನ ಮಾಡಲಾಗಿದೆ. ಇದರಿಂದ ಬೇರೆ ರಾಜ್ಯದ ಮಹಿಳೆಯರು ಉಚಿತವಾಗಿ ಬಸ್ಸಿನಲ್ಲಿ ಪ್ರಯಾಣ ಮಾಡಲು ತಪ್ಪಿಸಬಹುದು ಅನ್ನೋ ಪ್ಲ್ಯಾನ್ ಇದೆ. ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಯೋಗಾತ್ಮಕವಾಗಿ ಬಿಎಂಟಿಸಿಯಲ್ಲಿ ಜಾರಿಯಾಗಲಿದೆ. ಈಗಾಗಲೇ ಬಿಎಂಟಿಸಿ ನಲ್ಲಿ11000 ಇಟಿಎಂ ಯಂತ್ರಗಳು ಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ.
ಈ ಸ್ಮಾರ್ಟ್ ಕಾರ್ಡ್ ನಲ್ಲಿ ಎನ್ಎಫ್ಸಿ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದ್ದು, ಈ ಸ್ಮಾರ್ಟ್ ಕಾರ್ಡ್ ಅನ್ನು ಮಹಿಳೆಯರಿಗೆ ಮತ್ತು ತೃತೀಯ ಲಿಂಗಿಗಳಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಈ ಸ್ಮಾರ್ಟ್ ಕಾರ್ಡ್ ಗಳನ್ನು ಬೆಂಗಳೂರು ಒನ್, ಕರ್ನಾಟಕ ಓನ್, ಬಾಪುಜಿ ಸೇವಾ ಕೇಂದ್ರ ಸೈಬರ್ ಸೆಂಟರ್ ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಕೆ ಮಾಡಿ ಪಡೆದುಕೊಳ್ಳಬಹುದು.
ರಾಜ್ಯದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಸ್ಮಾರ್ಟ್ ಕಾರ್ಡ್ ಇತರರಿಗೆ ವರ್ಗಾಯಿಸಲು ಅವಕಾಶ ಇಲ್ಲ. ರಾಜ್ಯದಲ್ಲಿ 1 ಕೋಟಿ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಸ್ಮಾರ್ಟ್ ಕಾರ್ಡ್ ನಲ್ಲಿ ಶಕ್ತಿ ಯೋಜನೆ ಫಲಾನುಭವಿಯ ಹೆಸರು, ಪೋಟೋ,ಆಧಾರ್ ನಂಬರ್, ವಿಳಾಸದ ವಿವರಣೆ ಇರಲಿದೆ.
ಒಟ್ನಲ್ಲಿ ಶಕ್ತಿ ಯೋಜನೆಯ ಮಿಸ್ ಯೂಸ್ ತಡೆಯಲು ಸರ್ಕಾರ ಶಕ್ತಿ ಸ್ಮಾರ್ಟ್ ಕಾರ್ಡ್ ನೀಡಲು ಕೊನೆಗೂ ಟೆಂಡರ್ ಕರೆದಿದ್ದು, ಇದರಿಂದಾದ್ರು ಬೇರೆ ರಾಜ್ಯದ ಮಹಿಳೆಯರ ಉಚಿತ ಸಂಚಾರ ನಿಲ್ಲಲಿದ್ಯಾ ಎಂದು ಕಾದು ನೋಡಬೇಕಿದೆ.
ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳು
ಪ್ರಶ್ನೆ: ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲು ಸರ್ಕಾರ ಮುಂದಾಗಿರುವುದ್ಯಾಕೆ?
ಉತ್ತರ: ಕರ್ನಾಟಕದಲ್ಲಿ ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಲು ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲು ತೀರ್ಮಾನಿಸಿದೆ. ಇದರೊಂದಿಗೆ ಶಕ್ತಿ ಯೋಜನೆಯ ದುರ್ಬಳಕೆ ತಡೆಯಲು ಈ ಕ್ರಮ ಕೈಗೊಂಡಿದೆ.
ಪ್ರಶ್ನೆ: ಸ್ಮಾರ್ಟ್ ಕಾರ್ಡ್ ಹೇಗೆ? ಎಲ್ಲಿ ದೊರೆಯಲಿದೆ?
ಉತ್ತರ: ಸ್ಮಾರ್ಟ್ ಕಾರ್ಡ್ ಗಳನ್ನು ಬೆಂಗಳೂರು ಒನ್, ಕರ್ನಾಟಕ ಓನ್, ಬಾಪುಜಿ ಸೇವಾ ಕೇಂದ್ರ ಸೈಬರ್ ಸೆಂಟರ್ ನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಕೆ ಮಾಡಿ ಪಡೆದುಕೊಳ್ಳಬಹುದು.
ಪ್ರಶ್ನೆ: ಸ್ಮಾರ್ಟ್ ಕಾರ್ಡ್ಗೆ ಯಾವ್ಯಾವ ದಾಖಲೆಗಳು ಬೇಕು?
ಉತ್ತರ: ವೋಟರ್ ಐಡಿ, ಆಧಾರ್ ಕಾರ್ಡ್ ನೀಡಿದ್ರೆ ಸಾಕು, ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತದೆ.
ಪ್ರಶ್ನೆ: ಸ್ಮಾರ್ಟ್ ಕಾರ್ಡ್ನಲ್ಲಿ ಏನೇನು ಇರಲಿದೆ?
ಉತ್ತರ: ಸ್ಮಾರ್ಟ್ ಕಾರ್ಡ್ ನಲ್ಲಿ ಶಕ್ತಿ ಯೋಜನೆ ಫಲಾನುಭವಿಯ ಹೆಸರು, ಪೋಟೋ,ಆಧಾರ್ ನಂಬರ್, ವಿಳಾಸದ ವಿವರಣೆ ಇರಲಿದೆ.
Published On - 11:02 pm, Tue, 29 September 26