IMA ವಂಚನೆ ಪ್ರಕರಣ: BDA ವಿಶೇಷ ಭೂಸ್ವಾಧೀನಾಧಿಕಾರಿ ಅರೆಸ್ಟ್​

|

Updated on: Nov 23, 2020 | 5:41 PM

ಬೆಂಗಳೂರು: IMA ಸಂಸ್ಥೆಯಿಂದ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ CBI ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. CBI ಅಧಿಕಾರಿಗಳಿಂದ BDA  ವಿಶೇಷ ಭೂಸ್ವಾಧೀನಾಧಿಕಾರಿ ಪಿ.ಡಿ.ಕುಮಾರ್ ಬಂಧನವಾಗಿದೆ. ಮನ್ಸೂರ್​ ಖಾನ್ ಹಣ ರಿಯಲ್ ಎಸ್ಟೇಟ್​ಗೂ ಹೂಡಿದ್ದ. ಈ ನಡುವೆ, ಆತನ ಬಳಿ 3-4 ಕೋಟಿ ರೂಪಾಯಿ ಪಡೆದಿದ್ದ ಕುಮಾರ್​ ವಿರುದ್ಧ ಸಿಬಿಐ ಅಧಿಕಾರಿಗಳು FIR ದಾಖಲಿಸಿದ್ದರು. ಇದೀಗ, ಅಧಿಕಾರಿಗಳು ಕುಮಾರ್​ನನ್ನ ಬಂಧಿಸಿ CBI ವಿಶೇಷ ಕೋರ್ಟ್ ಎದುರು ಹಾಜರುಪಡಿಸಿದ್ದರು. ನ್ಯಾಯಾಲಯವು ಹೆಚ್ಚಿನ ವಿಚಾರಣೆಗೆಂದು ಕುಮಾರ್​ನನ್ನು 3 ದಿನಗಳ […]

IMA ವಂಚನೆ ಪ್ರಕರಣ: BDA ವಿಶೇಷ ಭೂಸ್ವಾಧೀನಾಧಿಕಾರಿ ಅರೆಸ್ಟ್​
Follow us on

ಬೆಂಗಳೂರು: IMA ಸಂಸ್ಥೆಯಿಂದ ಬಹುಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ CBI ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. CBI ಅಧಿಕಾರಿಗಳಿಂದ BDA  ವಿಶೇಷ ಭೂಸ್ವಾಧೀನಾಧಿಕಾರಿ ಪಿ.ಡಿ.ಕುಮಾರ್ ಬಂಧನವಾಗಿದೆ.

ಮನ್ಸೂರ್​ ಖಾನ್ ಹಣ ರಿಯಲ್ ಎಸ್ಟೇಟ್​ಗೂ ಹೂಡಿದ್ದ. ಈ ನಡುವೆ, ಆತನ ಬಳಿ 3-4 ಕೋಟಿ ರೂಪಾಯಿ ಪಡೆದಿದ್ದ ಕುಮಾರ್​ ವಿರುದ್ಧ ಸಿಬಿಐ ಅಧಿಕಾರಿಗಳು FIR ದಾಖಲಿಸಿದ್ದರು.

ಇದೀಗ, ಅಧಿಕಾರಿಗಳು ಕುಮಾರ್​ನನ್ನ ಬಂಧಿಸಿ CBI ವಿಶೇಷ ಕೋರ್ಟ್ ಎದುರು ಹಾಜರುಪಡಿಸಿದ್ದರು. ನ್ಯಾಯಾಲಯವು ಹೆಚ್ಚಿನ ವಿಚಾರಣೆಗೆಂದು ಕುಮಾರ್​ನನ್ನು 3 ದಿನಗಳ ಕಾಲ CBI ಕಸ್ಟಡಿಗೆ ನೀಡಿದೆ

ಮನ್ಸೂರ್ ಖಾನ್ ನ.27ರವರೆಗೆ ಸಿಬಿಐ ವಶಕ್ಕೆ
ಇತ್ತ, IMA ಸಂಸ್ಥೆ ಮುಖ್ಯಸ್ಥ ಮನ್ಸೂರ್ ಖಾನ್​ನನ್ನ ನವೆಂಬರ್ 27ರವರೆಗೆ ಸಿಬಿಐ ವಶಕ್ಕೆ ನೀಡಲಾಗಿದೆ. ನಗರದ ಸಿಬಿಐ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ. ಐಎಂಎಯಿಂದ ವಂಚನೆ ಪ್ರಕರಣದ ವಿಚಾರಣೆಗಾಗಿ ಮನ್ಸೂರ್​ ಖಾನ್​ನನ್ನು ಸಿಬಿಐ ಕಸ್ಟಡಿಗೆ ಕೋರ್ಟ್ ನೀಡಿದೆ.

Published On - 5:10 pm, Mon, 23 November 20