ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳ ವಾರ್ಡ್ ಐಸಿಯುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಆರೋಗ್ಯ ಇಲಾಖೆ ಸುತ್ತೋಲೆ ನೀಡಿದೆ. ಮೇ 11ರೊಳಗೆ ಸಿಸಿ ಕ್ಯಾಮರಾ ಅಳವಡಿಸುವಂತೆ ಸುತ್ತೋಲೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಇತ್ತಿಚೇಗೆ ಆಕ್ಸಿಜನ್ ಕಳವು , ಸಿಬ್ಬಂದಿಗಳ ನಿರ್ಲಕ್ಷ್ಯದ ಬಗ್ಗೆ ಅನೇಕ ಆರೋಪಗಳು ಕೇಳಿ ಬಂದಿತ್ತು. ಹೀಗಾಗಿ ಸಿಸಿ ಕ್ಯಾಮರಾ ಅಳವಡಿಕೆಗೆ ಆರೋಗ್ಯ ಇಲಾಖೆ ಮುಂದಾಗಿದೆ.
ಬೆಂಗಳೂರಲ್ಲಿ 200 ಹಾಸಿಗೆಯ ಆಸ್ಪತ್ರೆ ಸ್ಥಾಪನೆಗೆ ಮುಂದಾದ ಬೋಯಿಂಗ್ ಇಂಡಿಯಾ
ಏರೋಸ್ಪೇಸ್ ಪ್ರಮುಖ ಸಂಸ್ಥೆಯಾದ ಬೋಯಿಂಗ್ ಇಂಡಿಯಾದಿಂದ ಬೆಂಗಳೂರಿನಲ್ಲಿ 200 ಹಾಸಿಗೆ ಆಸ್ಪತ್ರೆ ಮತ್ತು ಜತೆಗೆ ಆಕ್ಸಿಜನ್ ವ್ಯವಸ್ಥೆ ಒದಗಿಸಲು ಮುಂದೆ ಬಂದಿದೆ ಎಂದು ಶುಕ್ರವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದ ಪತ್ರದಲ್ಲಿ ಯಡಿಯೂರಪ್ಪ, ದಿಢೀರನೆ ಹೆಚ್ಚಳವಾದ ಕೊರೊನಾ ಸೋಂಕು ಪ್ರಕರಣದಿಂದಾಗಿ ಆಕ್ಸಿಜನ್ ಬೇಡಿಕೆ ವಿಪರೀತ ಹೆಚ್ಚಾಗಿದೆ ಎಂದು ಹೇಳಿದ್ದಾರೆ. “ಸದ್ಯದ ಏರಿಕೆ ದರದಲ್ಲಿ, ಮೇ 15ರೊಳಗೆ ಕರ್ನಾಟಕಕ್ಕೆ 1500 ಮೆಟ್ರಿಕ್ ಟನ್ ಬೇಕಾಗಬಹುದು. ಭಾರತ ಸರ್ಕಾರದ ಬಳಕೆ ನಿಯಮಾವಳಿಯಂತೆ 964 ಮೆಟ್ರಿಕ್ ಟನ್ ಹಂಚಿಕೆ ಮಾಡಲಾಗಿದೆ,” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಬೆಂಗಳೂರಿನ ಯಲಹಂಕದ ಕೆಪಿಸಿಎಲ್ ಸ್ಥಳದಲ್ಲಿ ಆಕ್ಸಿಜನ್ ವ್ಯವಸ್ಥೆ ಜತೆಗೆ 200 ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಬೋಯಿಂಗ್ ಇಂಡಿಯಾ ಮುಂದಾಗಿದೆ. ಕೆಪಿಸಿಎಲ್ ಘಟಕದಿಂದ ಆಕ್ಸಿಜನ್ ಪೂರೈಕೆ ಖಾತ್ರಿ ಆಗಿದೆ. ಇದರಿಂದಾಗಿ ರಾಜ್ಯದಲ್ಲಿನ ಈಗಿರುವ ಆಕ್ಸಿಜನ್ ಪೂರೈಕೆದಾರರ ಮೇಲೆ ಒತ್ತಡ ಕಡಿಮೆ ಆಗುತ್ತದೆ ಎಂದಿದ್ದಾರೆ. ಹೆಚ್ಚಿನ ಆಕ್ಸಿಜನ್ ಪೂರೈಸುವಂತೆ ಕೇಂದ್ರ ಸರ್ಕರಕ್ಕೆ ರಾಜ್ಯ ಸರ್ಕಾರದಿಂದ ಕೇಳಲಾಗಿದೆ. ಅಂದಹಾಗೆ ಕರ್ನಾಟಕದಲ್ಲಿ ಕೋವಿಡ್- 19 ಪ್ರಕರಣಗಳು ವಿಪರೀತ ಹೆಚ್ಚಾಗಿದೆ. ಅದರ ಜತೆಗೆ ಸಾವಿನ ಪ್ರಮಾಣದಲ್ಲೂ ಹೆಚ್ಚಾಗಿದೆ. ಆಕ್ಸಿಜನ್ ಪೂರೈಕೆ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ಕೋರಿದ್ದ ಕೇಂದ್ರದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದ ಮೇಲೆ ಕರ್ನಾಟಕಕ್ಕೆ ನಿರಾಳ ಸಿಕ್ಕಿದೆ.
ಇದನ್ನೂ ಓದಿ:
ಬೆಂಗಳೂರಿನಿಂದ ರಾಜ್ಯದ ಗ್ರಾಮೀಣ ಭಾಗಗಳತ್ತ ಮುಖ ಮಾಡಿದ ಕೊರೊನಾ; ಸೋಂಕು ನಿಯಂತ್ರಣದ ಬಗ್ಗೆ ತಜ್ಞರ ಆತಂಕ
ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲೇ ಕೊವಿಡ್ ಆಸ್ಪತ್ರೆಗೆ ಅಳವಡಿಸಿದ್ದ ಜಂಬೋ ಆಕ್ಸಿಜನ್ ಸಿಲಿಂಡರ್‌ಗಳ ಕಳ್ಳತನ
Published On - 1:16 pm, Sat, 8 May 21