ಬೆಂಗಳೂರಿನಿಂದ ರಾಜ್ಯದ ಗ್ರಾಮೀಣ ಭಾಗಗಳತ್ತ ಮುಖ ಮಾಡಿದ ಕೊರೊನಾ; ಸೋಂಕು ನಿಯಂತ್ರಣದ ಬಗ್ಗೆ ತಜ್ಞರ ಆತಂಕ

ಈ ಬೆಳವಣಿಗೆ ಆತಂಕ ಸೃಷ್ಟಿಸಿದ್ದು ತಾಂತ್ರಿಕ ಸಲಹಾ ಸಮಿತಿಯ ಕೆಲ ಸದಸ್ಯರೇ ಹೇಳುವ ಪ್ರಕಾರ ಬೇರೆ ಜಿಲ್ಲೆಗಳಲ್ಲಿ ಸಮರ್ಪಕ ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾರಣ ಸೋಂಕು ನಿಯಂತ್ರಣ ತಪ್ಪಿದರೆ ಬೆಂಗಳೂರಿಗಿಂತಲೂ ಕಷ್ಟದ ಪರಿಸ್ಥಿತಿಯನ್ನು ಉಳಿದ ಜಿಲ್ಲೆಗಳು ಎದುರಿಸಬೇಕಿದೆ.

ಬೆಂಗಳೂರಿನಿಂದ ರಾಜ್ಯದ ಗ್ರಾಮೀಣ ಭಾಗಗಳತ್ತ ಮುಖ ಮಾಡಿದ ಕೊರೊನಾ; ಸೋಂಕು ನಿಯಂತ್ರಣದ ಬಗ್ಗೆ ತಜ್ಞರ ಆತಂಕ
ಸಾಂದರ್ಭಿಕ ಚಿತ್ರ
Follow us
Skanda
|

Updated on: May 08, 2021 | 12:08 PM

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ಆರಂಭವಾದ ನಂತರ ಏಪ್ರಿಲ್ ಮಧ್ಯ ಭಾಗದಲ್ಲಿ ರಾಜಧಾನಿ ಬೆಂಗಳೂರು ನಗರ ಇಡೀ ರಾಜ್ಯದ ಒಟ್ಟು ಪ್ರಕರಣಗಳ ಶೇ.70ರಷ್ಟು ಪಾಲನ್ನು ಹೊಂದಿತ್ತು. ಹೀಗಾಗಿ ಉಳಿದೆಲ್ಲಾ ಜಿಲ್ಲೆಗಳಿಗಿಂತಲೂ ಬೆಂಗಳೂರು ಅತಿ ಹೆಚ್ಚು ಅಪಾಯದಲ್ಲಿದೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಈಗ ರಾಜ್ಯದ ಉಳಿದ ಜಿಲ್ಲೆಗಳ ಒಟ್ಟು ಪ್ರಕರಣಗಳ ಪ್ರಮಾಣ ಬೆಂಗಳೂರನ್ನು ಮೀರಿಸುವ ಮೂಲಕ ಅಪಾಯ ಇಡೀ ರಾಜ್ಯಕ್ಕೂ ವಿಸ್ತರಿಸಿದೆ. ಮೇ.6ರ ಅಂತ್ಯಕ್ಕೆ ಉಳಿದ ಜಿಲ್ಲೆಗಳು ರಾಜ್ಯದ ಸೋಂಕಿತರ ಒಟ್ಟು ಪ್ರಮಾಣದ ಶೇ.52ರಷ್ಟು ಪಾಲನ್ನು ಹೊಂದಿದ್ದು ನಿನ್ನೆ (ಮೇ.7) ವೇಳೆಗೆ ಅದು ಶೇ.56ಕ್ಕೆ ಏರಿಕೆಯಾಗಿದೆ. ಆ ಮೂಲಕ ರಾಜ್ಯದ ಇತರ ಜಿಲ್ಲೆಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಕೊರೊನಾ ಸೋಂಕು ಉಲ್ಬಣಿಸಲಾರಂಭಿಸಿದೆ.

ರಾಜ್ಯದ ಸುಮಾರು 10 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಗಣನೀಯ ಏರಿಕೆ ಕಾಣಲಾರಂಭಿಸಿದ್ದು, ಮೈಸೂರು, ತುಮಕೂರು, ಕಲಬುರಗಿ ದೊಡ್ಡ ಮಟ್ಟದಲ್ಲಿ ಸೋಂಕು ಹೆಚ್ಚಳಕ್ಕೆ ಸಾಕ್ಷಿಯಾಗುತ್ತಿವೆ. ನಿರ್ವಹಣೆಯ ವಿಚಾರದಲ್ಲಿ ಈ ಬೆಳವಣಿಗೆ ಆತಂಕ ಸೃಷ್ಟಿಸಿದ್ದು ತಾಂತ್ರಿಕ ಸಲಹಾ ಸಮಿತಿಯ ಕೆಲ ಸದಸ್ಯರೇ ಹೇಳುವ ಪ್ರಕಾರ ಬೇರೆ ಜಿಲ್ಲೆಗಳಲ್ಲಿ ಸಮರ್ಪಕ ವೈದ್ಯಕೀಯ ವ್ಯವಸ್ಥೆ ಇಲ್ಲದ ಕಾರಣ ಸೋಂಕು ನಿಯಂತ್ರಣ ತಪ್ಪಿದರೆ ಬೆಂಗಳೂರಿಗಿಂತಲೂ ಕಷ್ಟದ ಪರಿಸ್ಥಿತಿಯನ್ನು ಉಳಿದ ಜಿಲ್ಲೆಗಳು ಎದುರಿಸಬೇಕಿದೆ.

ಸೋಂಕು ಈ ಮಟ್ಟಕ್ಕೆ ಗ್ರಾಮೀಣ ಭಾಗಕ್ಕೆ ಹಬ್ಬಲು ಅಂತರ್ ಜಿಲ್ಲೆ ಓಡಾಟಕ್ಕೆ ಅನುಮತಿ ಇದ್ದಿದ್ದೇ ಕಾರಣ ಎನ್ನುವ ತಜ್ಞರು, ಯುಗಾದಿ ವೇಳೆಗೆ ಜನರ ಓಡಾಟ ಅತಿ ಹೆಚ್ಚಾಗಿತ್ತು ಎಂಬುದನ್ನು ಒತ್ತಿ ಹೇಳಿದ್ದಾರೆ. ಕೊರೊನಾ ಗಂಭೀರತೆಯ ಬಗ್ಗೆ ಜನರಿಗೆ ಅರಿವು ಇರದಿದ್ದ ಕಾರಣ ಹೂವು, ಹಣ್ಣುಗಳೊಂದಿಗೆ ಕೊರೊನಾ ಸೋಂಕು ಸಹ ಮನೆ ಮನೆಗೆ ಹಂಚಲ್ಪಟ್ಟಿತು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಬಹುಮುಖ್ಯವಾಗಿ ಬೆಂಗಳೂರಿನಿಂದ ಬೇರೆ ಕಡೆಗೆ ಹೋದವರೇ ಹಾಸನ, ಮೈಸೂರು, ಬೆಳಗಾವಿಯಂತಹ ಜಿಲ್ಲೆಗಳಲ್ಲಿ ಸೋಂಕು ಹಬ್ಬಿಸುವುದಕ್ಕೆ ಕಾರಣ ಎಂದಿದ್ದಾರೆ. ಅಂತೆಯೇ ಉತ್ತರ ಕರ್ನಾಟಕಕ್ಕೆ ಮಹಾರಾಷ್ಟ್ರ, ಆಂಧ್ರ, ತೆಲಂಗಾಣದಿಂದ ಬಂದವರು ಸೋಂಕು ಹಬ್ಬಿಸಿದ್ದು, ದಕ್ಷಿಣ ಭಾಗದಲ್ಲಿ ಕೇರಳದಿಂದ ಬಂದವರು ಕಾರಣರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ನಿನ್ನೆ (ಮೇ.7) ಅತಿ ಹೆಚ್ಚು ಸೋಂಕಿತರು ಮೃತಪಟ್ಟಿದ್ದು ಒಂದೇ ದಿನದಲ್ಲಿ 592 ಮಂದಿಯ ಸಾವಿಗೆ ರಾಜ್ಯ ಸಾಕ್ಷಿಯಾಗಿದೆ. ಈ ಪೈಕಿ 346 ಸಾವು ಬೆಂಗಳೂರು ನಗರದಲ್ಲೇ ದಾಖಲಾಗಿದೆ ಎನ್ನುವುದು ಗಮನಾರ್ಹ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 17,804ಮಂದಿ ಸಾವಿಗೀಡಾಗಿದ್ದು, ಒಟ್ಟು ಪ್ರಕರಣಗಳಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ಕರ್ನಾಟಕವಿದೆ. ಈಗ ಸೋಂಕು ಗ್ರಾಮೀಣ ಭಾಗಗಳಲ್ಲೂ ಹೆಚ್ಚಾಗುತ್ತಿರುವುದರಿಂದ ವೈದ್ಯಕೀಯ ಸೌಲಭ್ಯದ ಕೊರತೆ ಕಾರಣದಿಂದ ಮರಣ ಪ್ರಮಾಣ ಹೆಚ್ಚಾಗಬಹುದು ಎಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಜನರು ಸರ್ಕಾರ ನಿಯಮ ಜಾರಿಗೊಳಿಸಿದೆ ಎಂಬ ಕಾರಣಕ್ಕೆ ಪಾಲನೆ ಮಾಡುವುದಕ್ಕಿಂತಲೂ ಹೆಚ್ಚಾಗಿ ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಜಾಗರೂಕರಾಗಿರಬೇಕೆಂದು ವೈದ್ಯರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಎಚ್ಚರಾ! ಭಾರತದಲ್ಲಿ ಆಗಸ್ಟ್​ 1ರೊಳಗೆ ಕೊರೊನಾ ಸೋಂಕಿಗೆ 10 ಲಕ್ಷ ಜನ ಸಾವು -ಇದು ಬ್ರಿಟಿಷ್ ಮೆಡಿಕಲ್ ಜರ್ನಲ್ ವರದಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು