AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್ಚರಾ! ಭಾರತದಲ್ಲಿ ಆಗಸ್ಟ್​ 1ರೊಳಗೆ ಕೊರೊನಾ ಸೋಂಕಿಗೆ 10 ಲಕ್ಷ ಜನ ಸಾವು -ಇದು ಬ್ರಿಟಿಷ್ ಮೆಡಿಕಲ್ ಜರ್ನಲ್ ವರದಿ

British Medical Lancet journal report: ಕೊರೊನಾ ವಿರುದ್ದದ ಪ್ರಾರಂಭಿಕ ಯಶಸ್ಸು ಅನ್ನು ಭಾರತ ಹಾಳು ಮಾಡಿಕೊಂಡಿದೆ‌. ಬಿಕ್ಕಟ್ಟು ಉಲ್ಭಣದಿಂದ ಭಾರತದ ಕ್ರಮಗಳನ್ನು ಮರುಪರಿಶೀಲಿಸಬೇಕು. ಸರ್ಕಾರ ಜವಾಬ್ದಾರಿಯುತ ನಾಯಕತ್ವ ನೀಡಬೇಕು. ದೇಶಾದ್ಯಂತ ಲಾಕ್ ಡೌನ್ ಸೇರಿದಂತೆ ಏನು ಮಾಡಬೇಕೆಂದು ಹೇಳಬೇಕು ಎಂದು ಎಚ್ಚರಿಕೆಯ ದನಿಯಲ್ಲಿ ಲ್ಯಾನ್ಸೆಟ್ ಜರ್ನಲ್‌ ಗುಡುಗಿದೆ.

ಎಚ್ಚರಾ! ಭಾರತದಲ್ಲಿ ಆಗಸ್ಟ್​ 1ರೊಳಗೆ ಕೊರೊನಾ ಸೋಂಕಿಗೆ 10 ಲಕ್ಷ ಜನ ಸಾವು -ಇದು ಬ್ರಿಟಿಷ್ ಮೆಡಿಕಲ್ ಜರ್ನಲ್  ವರದಿ
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​
|

Updated on: May 08, 2021 | 11:10 AM

Share

ಬೆಂಗಳೂರು: ಬ್ರಿಟನ್ನಿನ ಲ್ಯಾನ್ಸೆಟ್ ಜರ್ನಲ್ ಭಾರತದಲ್ಲಿ ಕೊರೊನಾ ಸೋಂಕಿನಿಂದ ದೊಡ್ಡ ದುರಂತ ಸಂಭವಿಸುವ ಮುನ್ನೆಚ್ಚರಿಕೆ ನೀಡಿದೆ. ಭಾರತದಲ್ಲಿ ಇನ್ನು ಮೂರು ತಿಂಗಳಲ್ಲಿ ಅಂದ್ರೆ ಆಗಸ್ಟ್ 1ರೊಳಗೆ ಕೊರೊನಾದಿಂದ 10 ಲಕ್ಷ ಜನ ಸಾವಿಗೀಡಾಗಲಿದ್ದಾರೆ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ಲ್ಯಾನ್ಸೆಟ್ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ. ಭಾರತದಲ್ಲಿ ಕೊರೊನಾದಿಂದಾಗುವ ದುರಂತದ ಬಗ್ಗೆ ಎಚ್ಚರಿಕೆ ನೀಡಿರುವ ಲ್ಯಾನ್ಸೆಟ್ ಜರ್ನಲ್‌, ಭಾರತದಲ್ಲಿ ಕೊವಿಡ್ ವಿರುದ್ಧದ ಆರಂಭಿಕ ಹೋರಾಟದಲ್ಲಿ ಯಶಸ್ಸು ಸಾಧ್ಯವಾಗಿತ್ತು. ಆದರೆ ಆ ಯಶಸ್ಸನ್ನು ಈಗ ಹಾಳು ಮಾಡಿಕೊಂಡಿದೆ ಎಂದು ವಿಷಾದದ ದನಿಯಲ್ಲಿ ಹೇಳಿದೆ.

ಹರ್ಡ್ ಇಮ್ಯೂನಿಟಿ ಹಂತ ತಲುಪಿದೆ ಎಂದು ತಪ್ಪು ಲೆಚ್ಚಾಚಾರ: ಏಪ್ರಿಲ್‌ವರೆಗೆ ಕೊರೊನಾ ಟಾಸ್ಕ್ ಫೋರ್ಸ್ ಸಭೆ ಸೇರಿಲ್ಲ. ಭಾರತದ ಕ್ರಮಗಳ ಬಗ್ಗೆ ಈಗ ಮರುಪರಿಶೀಲಿಸಬೇಕಾಗಿದೆ. ಸರ್ಕಾರ ತನ್ನ ತಪ್ಪು ಒಪ್ಪಿಕೊಂಡು ಕೆಲಸ ಮಾಡಬೇಕು. ಜವಾಬ್ದಾರಿಯುತ ನಾಯಕತ್ವವನ್ನು ನೀಡಬೇಕು. ಭಾರತದಲ್ಲಿ ಕೊವಿಡ್ ಲಸಿಕೆ ನೀಡಿಕೆ ವೇಗ ಹೆಚ್ಚಿಸಬೇಕು. ಕೊರೊನಾ ತಡೆಗೆ ಏನು ಮಾಡಬೇಕೆಂದು ತಿಳಿಯಹೇಳಬೇಕು. ಮುನ್ನೆಚ್ಚರಿಕೆ ನೀಡಿದ್ದರೂ ಸೂಪರ್ ಸ್ಪ್ರೆಡರ್ ಧಾರ್ಮಿಕ ಚಟುವಟಿಕೆಗೆ ಅವಕಾಶ ನೀಡಲಾಗಿತ್ತು. ಇದರ ಜೊತೆಗೆ ರಾಜಕೀಯ ಸಮಾವೇಶಗಳನ್ನು ನಡೆಸಲು ಅವಕಾಶವಿತ್ತು. ಭಾರತ ಹರ್ಡ್ ಇಮ್ಯೂನಿಟಿ ಹಂತ ತಲುಪಿದೆ ಎಂದು ತಪ್ಪು ಲೆಚ್ಚಾಚಾರ ಹಾಕಲಾಗಿದೆ ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್ ಲ್ಯಾನ್ಸೆಟ್ ಜರ್ನಲ್ ಸಂಪಾದಕೀಯದಲ್ಲಿ ಪ್ರತಿಪಾದನೆ ಮಾಡಲಾಗಿದೆ.

ಕೊರೊನಾ ನಿಯಂತ್ರಣಕ್ಕಿಂತ ಟ್ವೀಟ್‌ಗಳ ಡಿಲೀಟ್‌ನಲ್ಲಿ ಬ್ಯುಸಿಯಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಟ್ವಿಟ್ಟರ್‌ನಲ್ಲಿ ಬರುವ ಟೀಕೆಗಳನ್ನು ಡಿಲೀಟ್‌ ಮಾಡುವುದರಲ್ಲೇ ಬ್ಯುಸಿಯಾಗಿದ್ದಾರೆ ಎಂದೂ ಮೆಡಿಕಲ್ ಜರ್ನಲ್ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಮೋದಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಕೊರೊನಾ ವಿರುದ್ದದ ಪ್ರಾರಂಭಿಕ ಯಶಸ್ಸು ಅನ್ನು ಭಾರತ ಹಾಳು ಮಾಡಿಕೊಂಡಿದೆ‌. ಬಿಕ್ಕಟ್ಟು ಉಲ್ಭಣದಿಂದ ಭಾರತದ ಕ್ರಮಗಳನ್ನು ಮರುಪರಿಶೀಲಿಸಬೇಕು. ಸರ್ಕಾರ ಜವಾಬ್ದಾರಿಯುತ ನಾಯಕತ್ವ ನೀಡಬೇಕು. ದೇಶಾದ್ಯಂತ ಲಾಕ್ ಡೌನ್ ಸೇರಿದಂತೆ ಏನು ಮಾಡಬೇಕೆಂದು ಹೇಳಬೇಕು. ಜೆನೋಮ್ ಸಿಕ್ವೇನ್ಸ್ ಅನ್ನು ಹೆಚ್ಚಿಸಬೇಕು ಎಂದು ಎಚ್ಚರಿಕೆಯ ದನಿಯಲ್ಲಿ ಲ್ಯಾನ್ಸೆಟ್ ಜರ್ನಲ್‌ ಗುಡುಗಿದೆ. ಇನ್ಸ್ ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಎವೆಲ್ಯೂಯೇಷನ್ ಎಂಬ ಜಾಗತಿಕ ಆರೋಗ್ಯ ಸಂಶೋಧನೆ ಸಂಸ್ಥೆಯ ಮಾಹಿತಿ ಆಧಾರದಲ್ಲಿ ಈ ಅಂದಾಜು ಮಾಡಲಾಗಿದೆ.

(british medical lancet journal report on aggravating covid situation in india)

ಹೆದರುವುದು ಬೇಡ, ಆತ್ಮಸ್ಥೈರ್ಯದಿಂದಿರಿ; ಕೊರೊನಾ ಗೆದ್ದು ಬಂದ ಒಂದೇ ಕುಟುಂಬದ 17 ಮಂದಿ