ಮಂಡ್ಯ: ರೈತನಿಂದ ಲಂಚ ಸ್ವೀಕರಿಸುತ್ತಿದ್ದ ರೆವಿನ್ಯೂ ಇನ್ಸ್ಪೆಕ್ಟರ್ ಶಂಕರಮೂರ್ತಿ ಎಸಿಬಿ ಪೊಲೀಸರ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಮದ್ದೂರು ತಾಲೂಕು ಕೊಪ್ಪ ಮೊದಲನೇ ವೃತ್ತದ ಕಂದಾಯ ನಿರೀಕ್ಷಕರಾಗಿರುವ ಶಂಕರಮೂರ್ತಿ ಕರಿಗೌಡನಕೊಪ್ಪಲಿನ ಲೋಕೇಶ್ ಎಂಬ ರೈತನ ಬಳಿ ಜಮೀನು ಒಟ್ಟುಗೂಡಿಸಿ ಆರ್ಟಿಸಿ ನೀಡಲು 16 ಸಾವಿರ ಲಂಚ ಕೇಳಿದ್ದರು.
ಇದರಂತೆ ರೈತ ಲಂಚ ನೀಡಲು ಬಂದಿದ್ದಾನೆ. ಈ ವೇಳೆ ಎಸಿಬಿ, ಡಿವೈಎಸ್ಪಿ ಆರ್ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿ ಮದ್ದೂರು ತಾಲೂಕು ಕಚೇರಿ ಬಳಿಯ ಟೀ ಅಂಗಡಿಯಲ್ಲಿ ಲಂಚ ಸ್ವೀಕರಿಸುತ್ತಿದ್ದ ಶಂಕರಮೂರ್ತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.
Published On - 7:11 pm, Tue, 26 November 19