ಬೆಂಗಳೂರು: ಹುಳಿಮಾವು ಕೆರೆಯ ಏರಿ ಒಡೆದ ಪ್ರಕರಣಕ್ಕೆ ಇದೀಗ ಮೇಜರ್ ಟ್ವಿಸ್ಟ್ ಸಿಕ್ಕಿದೆ. ದೇವಸ್ಥಾನದೊಳಗೆ ಬರ್ತಿದ್ದ ಕೆರೆಯ ನೀರು ತಪ್ಪಿಸಲು ಇಡೀ ಊರನ್ನೇ ಮುಳುಗಿಸಿದ್ರಾ? ಹುಳಿಮಾವು ಕೆರೆ ಏರಿ ಒಡೆಯಲು ಉಪಮೇಯರ್ ರಾಮ್ ಮೋಹನ್ ರಾಜ್ ಕಾರಣ? ಎಂಬ ಆರೋಪಗಳು ಕೇಳಿಬರುತ್ತಿವೆ.
ದೇಗುಲಕ್ಕೆ ಬರ್ತಿದ್ದ ಕೆರೆ ನೀರು ತಪ್ಪಿಸಲು ಸೂಚನೆ:
ಹುಳಿಮಾವು ಕೆರೆ ಏರಿ ಮೇಲೆ ಕಟ್ಟೆ ಗಂಗಮ್ಮ ದೇವಸ್ಥಾನವಿದೆ. ಈ ದೇವಸ್ಥಾನದೊಳಗೆ ಕೆರೆ ನೀರು ಬಂದು ತುಂಬಿಕೊಳ್ಳುತ್ತಿತ್ತು. ಈ ಬಗ್ಗೆ ಸ್ಥಳೀಯ ಶಾಸಕರಿಗೆ ಮತ್ತು ಬಿಬಿಎಂಪಿ ಉಪಮೇಯರ್ಗೆ ದೇವಸ್ಥಾನದವರು ದೂರು ನೀಡಿದ್ದರು. ಅದರಂತೆ ಕೆರೆ ನೀರನ್ನ ಹರಿ ಬೀಡುವಂತೆ ಬಿಬಿಎಂಪಿ ಅಧಿಕಾರಿ ಶಿಲ್ಪಾಗೆ ಉಪಮೇಯರ್ ರಾಮ್ ಮೋಹನ್ ರಾಜ್ ಸೂಚಿಸಿದ್ದರು.
ಜೆಸಿಬಿ ಚಾಲಕನ ಎಡವಟ್ಟು!
ಆದ್ರೆ, ನೀರು ಹರಿಬಿಡಲು ಪ್ರಾರಂಭದಲ್ಲಿ ಬಿಬಿಎಂಪಿ ಕೆರೆ ವಿಭಾಗದ ಎಂಜಿನಿಯರ್ ಶಿಲ್ಪಾ ಒಪ್ಪಿರಲಿಲ್ಲ. ನಂತರ ಕೆರೆ ಪಕ್ಕದ ರಾಜಕಾಲುವೆಗೆ ಸಣ್ಣದಾಗಿ ಕೆರೆ ನೀರು ಹರಿ ಬಿಡಲು ಶಿಲ್ಪಾ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಜೆಸಿಬಿ ಮೂಲಕ ಕೆರೆ ನೀರನ್ನ ಹರಿಬಿಡುವಂತೆ ಉಪಮೇಯರ್ ಸೂಚನೆ ನೀಡಿದ್ದಾರೆ. ಆದ್ರೆ, ಜೆಸಿಬಿ ಚಾಲಕ ಕೆರೆಯ ಏರಿಯನ್ನೇ ಒಡೆದು ಎಡವಟ್ಟು ಮಾಡಿದ್ದಾನೆ. ಇದರಿಂದ ಏರಿ ಒಡೆದು ಇಡೀ ಊರಿಗೇ ಕೆರೆಯ ನೀರು ನುಗ್ಗಿದೆ ಎಂದು ಟಿವಿ9 ಗೆ ಬಿಬಿಎಂಪಿ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Published On - 7:48 am, Wed, 27 November 19