FDA ಪರೀಕ್ಷೆ ಮೇಲೆ ಸಿಸಿಬಿ ಅಧಿಕಾರಿಗಳ ಹದ್ದಿನ ಕಣ್ಣು; ಎಡವಟ್ಟು ಮರುಕಳುಹಿಸದಂತೆ ಮುತುವರ್ಜಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 07, 2021 | 8:18 PM

ಪರೀಕ್ಷೆ ನಡೆಯುವವರೆಗೆ ಎಸಿಪಿ ವೇಣುಗೋಪಾಲ್ ನೇತೃತ್ವದ ವಿಶೇಷ ತಂಡ ಹದ್ದಿನ ಕಣ್ಣು ಇಟ್ಟಿದೆ. ಅಲ್ಲದೇ ಸಿಬ್ಬಂದಿ ಫೋನ್ ಕಾಲ್ಸ್ ಮತ್ತು ಕಾರ್ಯ ಚಟುವಟಿಕೆ ಮೇಲೂ ನಿಗಾ ವಹಿಸುತ್ತಿದ್ದಾರೆ.

FDA ಪರೀಕ್ಷೆ ಮೇಲೆ ಸಿಸಿಬಿ ಅಧಿಕಾರಿಗಳ ಹದ್ದಿನ ಕಣ್ಣು; ಎಡವಟ್ಟು ಮರುಕಳುಹಿಸದಂತೆ ಮುತುವರ್ಜಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಪರೀಕ್ಷೆಗೂ ಮುನ್ನ ಎಫ್​ಡಿಎ​ ಕೀ ಆನ್ಸರ್ ಸೋರಿಕೆಯಾದ ಹಿನ್ನೆಲೆ ಫೆಬ್ರವರಿ 28ರಂದು ನಡೆಯುವ ಎಫ್​ಡಿಎ ಪರೀಕ್ಷೆ ಮೇಲೆ ಸಿಸಿಬಿ ಅಧಿಕಾರಿಗಳು ತೀವ್ರ ನಿಗಾವಹಿಸುತ್ತಿದ್ದಾರೆ.

ಪ್ರಶ್ನೆ ಪತ್ರಿಕೆ ಪ್ರಿಂಟ್ ಮಾಡುವ ವೇಳೆಯಿಂದ ಹಿಡಿದು ಪರೀಕ್ಷೆ ನಡೆಯುವವರೆಗೆ ಎಸಿಪಿ ವೇಣುಗೋಪಾಲ್ ನೇತೃತ್ವದ ವಿಶೇಷ ತಂಡ ಹದ್ದಿನ ಕಣ್ಣು ಇಟ್ಟಿದೆ. ಅಲ್ಲದೇ ಸಿಬ್ಬಂದಿ ಫೋನ್ ಕಾಲ್ಸ್ ಮತ್ತು ಕಾರ್ಯ ಚಟುವಟಿಕೆ ಮೇಲೂ ನಿಗಾ ವಹಿಸುತ್ತಿದ್ದಾರೆ.

ಜನವರಿ 24 ರಂದು ನಡೆಯಬೇಕಿದ್ದ ಎಫ್​ಡಿಎ ಪರೀಕ್ಷೆ ಹಿಂದಿನ ದಿನ (ಜನವರಿ 23) ಪತ್ರಿಕೆ ಸೊರಿಕೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೆಪಿಎಸ್​ಸಿ ಸಿಬ್ಬಂದಿ ಸೇರಿ ಹಲವು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಫೆಬ್ರವರಿ 28ರಂದು ಎಫ್​ಡಿಎ​ ಪರೀಕ್ಷೆ ನಡೆಸಲು ಕೆಪಿಎಸ್​ಸಿ ನಿರ್ಧರಿಸಿದ್ದು, ಕಳೆದ ಬಾರಿಯಾದ ಎಡವಟ್ಟು ಮರುಕಳುಹಿಸದಂತೆ ಮುತುವರ್ಜಿ ವಹಿಸಿ ಪರೀಕ್ಷೆ ಸುಸೂತ್ರವಾಗಿ ನಡೆಯುವಂತೆ ಸಿಸಿಬಿ ಪೊಲೀಸರು ಹಲವು ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ನಾಳೆ ನಡೆಯಬೇಕಿದ್ದ FDA ಪರೀಕ್ಷೆ ಮುಂದೂಡಿಕೆ