ನಾಳೆ ನಡೆಯಬೇಕಿದ್ದ FDA ಪರೀಕ್ಷೆ ಮುಂದೂಡಿಕೆ

ನಾಳೆ ನಡೆಯಬೇಕಿದ್ದ FDA ಪರೀಕ್ಷೆ ಮುಂದೂಡಿಕೆ ಆಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಎಕ್ಸಾಂ ಮುಂದೂಡಿಕೆ ಆಗಿದೆ ಎಂದು ಹೇಳಲಾಗಿದೆ.

  • TV9 Web Team
  • Published On - 20:04 PM, 23 Jan 2021
ನಾಳೆ ನಡೆಯಬೇಕಿದ್ದ FDA ಪರೀಕ್ಷೆ ಮುಂದೂಡಿಕೆ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಾಳೆ ನಡೆಯಬೇಕಿದ್ದ FDA ಪರೀಕ್ಷೆ ಮುಂದೂಡಿಕೆ ಆಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಎಕ್ಸಾಂ ಮುಂದೂಡಿಕೆ ಆಗಿದೆ ಎಂದು ಹೇಳಲಾಗಿದೆ.

ಪರೀಕ್ಷೆ ಮುಂದೂಡಿಕೆ ಬಗ್ಗೆ KPSC ಕಾರ್ಯದರ್ಶಿ ಸತ್ಯವತಿ ಮಾಹಿತಿ ನೀಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆ FDA ಪರೀಕ್ಷೆ ಮುಂದೂಡಿಕೆ ಆಗಿದೆ ಎಂದು ಸತ್ಯವತಿ ಹೇಳಿದ್ದಾರೆ. ಜೊತೆಗೆ,ಪರೀಕ್ಷಾ ದಿನಾಂಕ ಶೀಘ್ರ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.

ಸುಮಾರು 1,114 ಹುದ್ದೆಗಳಿಗೆ ಪರೀಕ್ಷೆ ನಡೆಯಬೇಕಿತ್ತು. ಜೊತೆಗೆ, 3.74 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದರು ಎಂದು ತಿಳಿದುಬಂದಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ನಾಲ್ವರ ಬಂಧನ
ಇದೀಗ, FDA ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದ ಆರು ಆರೋಪಿಗಳನ್ನು ಬಂಧಿಸಲಾಗಿದೆ. CCB ಪೊಲೀಸರಿಂದ ಆರು ಆರೋಪಿಗಳ ಬಂಧನವಾಗಿದೆ.

ರಾಚಪ್ಪ, ಚಂದ್ರು ಸೇರಿದಂತೆ ನಾಲ್ವರು ಆರೋಪಿಗಳ ಬಂಧನವಾಗಿದೆ. ಬಂಧಿತರಿಂದ 24 ಲಕ್ಷ ರೂಪಾಯಿ, 3 ವಾಹನಗಳು ಮತ್ತು ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ವಶಕ್ಕೆ ಪಡೆಯಲಾಗಿದೆ.

ರಸ್ತೆ ಮೇಲೆ ಒಕ್ಕಣೆ ಮಾಡಬೇಡಿ: K.R. ಪೇಟೆ ಭೂವರಾಹ ದೇಗುಲ ರೆಸ್ತೆಯಲ್ಲಿ ಹೊತ್ತಿ ಉರಿದ ಬೆಂಗಳೂರಿನ ಕಾರು