ತೂಕದಲ್ಲಿ ಏರುಪೇರು ಮಾಡಿ ರೈತರಿಗೆ ಮೋಸ: ದಲ್ಲಾಳಿ‌ಯ ಧೋಖಾಗೆ ತೀವ್ರ ಆಕ್ರೋಶ

ತೂಕದಲ್ಲಿ ಏರುಪೇರು ಆಗಿದ್ದಕ್ಕೆ ರೈತರು ತಮ್ಮ ಆಕ್ರೋಶ ಹೊರಹಾಕಿರುವ ಘಟನೆ ನಗರದ APMC ಮಾರುಕಟ್ಟೆಯಲ್ಲಿ ನಡೆದಿದೆ.

ತೂಕದಲ್ಲಿ ಏರುಪೇರು ಮಾಡಿ ರೈತರಿಗೆ ಮೋಸ: ದಲ್ಲಾಳಿ‌ಯ ಧೋಖಾಗೆ ತೀವ್ರ ಆಕ್ರೋಶ
ದಲ್ಲಾಳಿ‌ಯ ಧೋಖಾಗೆ ಕೃಷಿಕರ ಆಕ್ರೋಶ
KUSHAL V

|

Jan 23, 2021 | 6:53 PM

ಗದಗ: ತೂಕದಲ್ಲಿ ಏರುಪೇರು ಆಗಿದ್ದಕ್ಕೆ ರೈತರು ತಮ್ಮ ಆಕ್ರೋಶ ಹೊರಹಾಕಿರುವ ಘಟನೆ ನಗರದ APMC ಮಾರುಕಟ್ಟೆಯಲ್ಲಿ ನಡೆದಿದೆ.

ಜಿಲ್ಲೆಯ ಹಲವಾರು ಹಳ್ಳಿಗಳಿಂದ ಆಗಮಿಸಿದ್ದ ರೈತರು ಇಂದು ತಾವು ಬೆಳೆದ ಕೆಂಪು ಮೆಣಸಿನಕಾಯಿಯನ್ನು APMC ಮಾರುಕಟ್ಟೆಯಲ್ಲಿ ಮಾರಲು ಬಂದಿದ್ದರು. ಈ ನಡುವೆ, ದಲ್ಲಾಳಿಗಳು ತಮ್ಮ ಬೆಳೆಯನ್ನು ತೂಕ ಮಾಡುವುದರಲ್ಲಿ ಏರುಪೇರು ಮಾಡ್ತಿದ್ದಾರೆ ಅಂತಾ ರೈತರು ಆರೋಪಿಸಿದರು. ಅದರಲ್ಲೂ, ಮಾರುಕಟ್ಟೆಯಲ್ಲಿರುವ ಎಂ.ಎಂ.ಕನವಳ್ಳಿ ದಲ್ಲಾಳಿ‌ ಅಂಗಡಿಯವರ ಮೇಲೆ ರೈತರು ಆರೋಪ ಮಾಡಿದ್ದಾರೆ.

ಕೆಂಪು ಮೆಣಸಿನಕಾಯಿ ತೂಕ ಮಾಡಿದಾಗ ಸುಮಾರು 8 ಕೆ.ಜಿಯಷ್ಟು ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ರೈತರು ಸಿಟ್ಟಿಗೆದ್ದರು. ಮತ್ತೊಂದು ಅಂಗಡಿಗೆ ಹೋಗಿ ಮೆಣಸಿನಕಾಯಿಯನ್ನು ತೂಕ‌ ಮಾಡಿಸಿದಾಗ ಸತ್ಯ ಬಯಲಾಗಿದೆ.

ಹಾಗಾಗಿ, ಅಂಗಡಿಯಲ್ಲಿ ಪ್ರತಿ ರೈತರಿಗೂ ಹೀಗೆ‌ ಮೋಸ ಮಾಡಲಾಗಿದೆ ಅಂತಾ ಕೃಷಿಕರು ದೀಢಿರ್ ಪ್ರತಿಭಟನೆ ನಡೆಸಿದರು. ಈ ನಡುವೆ, ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ತೂಕದ ಯಂತ್ರವನ್ನು ವಶಕ್ಕೆ ಪಡೆದರು.

ರಸ್ತೆ ಮೇಲೆ ಒಕ್ಕಣೆ ಮಾಡಬೇಡಿ: K.R. ಪೇಟೆ ಭೂವರಾಹ ದೇಗುಲ ರೆಸ್ತೆಯಲ್ಲಿ ಹೊತ್ತಿ ಉರಿದ ಬೆಂಗಳೂರಿನ ಕಾರು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada