ಧಾರವಾಡ: ಕರ್ನಾಟಕದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು, ಕರಾವಳಿ ಸಹಿತ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಕೆಲವೆಡೆ ಅತಿವೃಷ್ಟಿಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಪಾರ ಆಸ್ತಿ, ಪಾಸ್ತಿ, ನೆಲೆ ಕಳೆದುಕೊಂಡ ಜನರು, ಊರು ಕೆಲವೆಡೆ ದ್ವೀಪದಂತಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಅತಿವೃಷ್ಟಿ ಬಗ್ಗೆ ಕೇಂದ್ರಕ್ಕೆ ರಾಜ್ಯಸರ್ಕಾರ ವರದಿ ಸಲ್ಲಿಸಬೇಕಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ತಕ್ಷಣಕ್ಕೆ ಬೇಕಾದ ಪರಿಹಾರ ಹಣ ಕೇಂದ್ರಸರ್ಕಾರ ನೀಡಲಿದೆ. ಹಿಂದೆಯೂ ಕೇಂದ್ರ ನೆರವಿಗೆ ಬಂದಿತ್ತು, ಈ ಸಲವೂ ಬರುತ್ತೆ. ನಾಳೆ ನಾನು ಕೇಂದ್ರ ಗೃಹಸಚಿವರನ್ನು ಭೇಟಿಯಾಗಿ ಚರ್ಚಿಸುವೆ ಎಂದು ಅವರು ಹೇಳಿದ್ದಾರೆ.
ಎನ್‌ಡಿಆರ್‌ಎಫ್ ನಿಯಮದಡಿ ಕೇಂದ್ರ ಸಹಕಾರ ನೀಡಲಿದೆ. ಈ ಹಿಂದಿನ ಯಾವುದೇ ಪರಿಹಾರ ಹಣ ಬಾಕಿ ಇಲ್ಲ ಎಂದು ಜೋಶಿ ಸ್ಪಷ್ಟನೆ ನೀಡಿದ್ದಾರೆ. ಹಣಕಾಸು ಆಯೋಗದಡಿ ಪರಿಹಾರ ಬಿಡುಗಡೆಗೆ ಸೂತ್ರ ಇದೆ. ಆ ಸೂತ್ರದ ಅಡಿಯಲ್ಲಿ ರಾಜ್ಯಕ್ಕೆ ಕೇಂದ್ರ ಪರಿಹಾರ ನೀಡುತ್ತೆ. ಅದಕ್ಕೆ ನಾವು ಕೇಂದ್ರದಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಪ್ರವಾಹ ಪರಿಹಾರ ವಿಚಾರದಲ್ಲಿ ತಾರತಮ್ಯ ಆಗುವುದೇ ಇಲ್ಲ. ಒಂದು ರಾಜ್ಯಕ್ಕೆ ಹೆಚ್ಚು, ಕಡಿಮೆ ಹಣ ಕೊಡಲು ಬರೋದಿಲ್ಲ ಎಂದು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: Karnataka Weather Report: ಬೆಂಗಳೂರಲ್ಲಿ 2 ದಿನ, ಕರಾವಳಿ ಭಾಗದಲ್ಲಿ ಮುಂದಿನ 4 ದಿನ ಭಾರೀ ಮಳೆ ಸಾಧ್ಯತೆ
ಕರ್ನಾಟಕದಲ್ಲಿ ಮಹಾಮಳೆ: ಪೊಲೀಸ್, ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ; ಸಂಪೂರ್ಣ ವಿವರ ಇಲ್ಲಿದೆ
(Central Minister Pralhad Joshi on Karnataka Heavy Rainfall Flood says Central Govt will help State)