ನೆಲಮಂಗಲ: ಬಂಗಾರದ ನೆಕ್​ಲೇಸ್​ ಎಂದು ಭಾವಿಸಿ.. ನಕಲಿ ಚಿನ್ನದ ಸರ ಕದ್ದೊಯ್ದ ಸರಗಳ್ಳರು!

|

Updated on: Jan 09, 2021 | 9:21 PM

ಚಿನ್ನದ ಸರವೆಂದು ಭಾವಿಸಿ ಸರಗಳ್ಳರು ಮಹಿಳೆ ಧರಿಸಿದ್ದ ನಕಲಿ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಗೇರಹಳ್ಳಿಯ ನಿವಾಸಿ ಪೂರ್ಣಿಮಾ ಎಂಬುವವರ ಕುತ್ತಿಗೆಯಲ್ಲಿದ್ದ ನಕಲಿ ಸರವನ್ನು ಖದೀಮರು ಕಸಿದು ಪರಾರಿಯಾಗಿದ್ದಾರೆ.

ನೆಲಮಂಗಲ: ಬಂಗಾರದ ನೆಕ್​ಲೇಸ್​ ಎಂದು ಭಾವಿಸಿ.. ನಕಲಿ ಚಿನ್ನದ ಸರ ಕದ್ದೊಯ್ದ ಸರಗಳ್ಳರು!
ಪ್ರಾತಿನಿಧಿಕ ಚಿತ್ರ
Follow us on

ನೆಲಮಂಗಲ: ಚಿನ್ನದ ಸರವೆಂದು ಭಾವಿಸಿ ಸರಗಳ್ಳರು ಮಹಿಳೆ ಧರಿಸಿದ್ದ ನಕಲಿ ಚಿನ್ನದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ. ಗೇರಹಳ್ಳಿಯ ನಿವಾಸಿ ಪೂರ್ಣಿಮಾ ಎಂಬುವವರ ಕುತ್ತಿಗೆಯಲ್ಲಿದ್ದ ನಕಲಿ ಸರವನ್ನು ಖದೀಮರು ಕಸಿದು ಪರಾರಿಯಾಗಿದ್ದಾರೆ.

ಕೆಂಪು ಬಣ್ಣದ ಪಲ್ಸರ್​ ಬೈಕ್​ನಲ್ಲಿ ಬಂದಿದ್ದ ಇಬ್ಬರಿಂದ ಕೃತ್ಯ ಎಸಗಲಾಗಿದೆ. ಅಂದ ಹಾಗೆ, ನಕಲಿ ಚಿನ್ನದ ಸರದ ಜೊತೆ ಪೂರ್ಣಿಮಾ ತಾಳಿ ಹಾಕಿಕೊಂಡಿದ್ದರು. ಹಾಗಾಗಿ, ಸರ ಕಸಿದುಕೊಳ್ಳುವಾಗ ತಾಳಿಯನ್ನು ಗಮನಿಸಿದ ಖದೀಮರು ಅದನ್ನು ಕಸಿಯಲು ಯತ್ನಿಸಿದರು.

ಆದರೆ, ಪೂರ್ಣಿಮಾ ಅವರ ಮಾಂಗಲ್ಯ ಗಟ್ಟಿಯಿತ್ತು. ತಾಳಿಯನ್ನು ಬಲವಾಗಿ ಹಿಡಿದಿದ್ದರಿಂದ ಅವರ ಕೈಯಲ್ಲೇ ಉಳಿದುಕೊಂಡಿತು. ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

‘ಧರ್ಮಸ್ಥಳದಲ್ಲಿ ಕ್ರಿಶ್ಚಿಯನ್ ಹಬ್ಬ ಆಚರಣೆ ಮಾಡ್ತೀರಾ?, ವೀರೇಂದ್ರ ಹೆಗಡೆಯವ್ರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು’