ಆಮ್ಲಜನಕ ಕೊರತೆ ನೀಗಿಸಲು ಆಕ್ಸಿಜನ್ ಪ್ಲಾಂಟ್ ಸಿದ್ಧಪಡಿಸಿದ ಚಾಮರಾಜನಗರ ಜಿಲ್ಲಾಡಳಿತ

|

Updated on: Apr 27, 2021 | 11:31 AM

ಈ ರೀತಿ ಮೂರು ಬಾರಿ ಸಿಲಿಂಡರ್ ಹೊತ್ತ ಲಾರಿ ಸಂಚಾರ ಮಾಡಬೇಕಾಗುತ್ತದೆ. ಒಂದು ಟ್ರಿಪ್ ಹೋಗಿ ಬರಲು ಸುಮಾರು 6 ಗಂಟೆಗಳ ಕಾಲಬೇಕಾಗುತ್ತದೆ. ದುಬಾರಿ ಸಾರಿಗೆ ವೆಚ್ಚದ ಜೊತೆಗೆ ಸಮಯ ಕೂಡ ವ್ಯರ್ಥವಾಗಲಿದೆ. ವಾರಕ್ಕೆ ಒಮ್ಮೆ ಆಕ್ಸಿಜನ್ ಟ್ಯಾಂಕರ್ ನೇರವಾಗಿಯೇ ಆಕ್ಸಿಜನ್ ಪ್ಲಾಂಟ್​ಗೆ ಆಗಮಿಸಿ ತುಂಬಿಸಲಿದೆ.

ಆಮ್ಲಜನಕ ಕೊರತೆ ನೀಗಿಸಲು ಆಕ್ಸಿಜನ್ ಪ್ಲಾಂಟ್ ಸಿದ್ಧಪಡಿಸಿದ ಚಾಮರಾಜನಗರ ಜಿಲ್ಲಾಡಳಿತ
ಆಕ್ಸಿಜನ್​ ಸಿಲಿಂಡರ್​ಗಳು
Follow us on

ಚಾಮರಾಜನಗರ: ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬುದು ಸರ್ಕಾರದ ಯೋಜನೆಗಳಿಗೆ ಅನ್ವಯವಾಗುತ್ತದೆ. ಆದರೆ ಈ ಬಾರಿ ಚಾಮರಾಜನಗರ ಜಿಲ್ಲಾಡಳಿತ ಮುಂದಿನ ಒಂದು ತಿಂಗಳ ಕಾಲ ಸಂಭವಿಸಬಹುದಾದ ಆಮ್ಲಜನಕದ ಕೊರತೆಯನ್ನು ಲೆಕ್ಕಚಾರ ಮಾಡಿ ಆಮ್ಲಜನಕ ಸಂಗ್ರಹಿಸಲು ಯೋಜನೆ ಸಿದ್ಧಪಡಿಸಿದೆ. ರಾಷ್ಟ್ರದಲ್ಲಿ ತಲೆ ದೂರಿರುವ ಆಕ್ಸಿಜನ್ ಸಮಸ್ಯೆ ಜಿಲ್ಲೆಯಲ್ಲಿ ಉದ್ಭವಿಸಬಾರದು ಎಂದು ನೂತನ ಆಕ್ಸಿಜನ್ ಪ್ಲಾಂಟ್ ಸಿದ್ಧಪಡಿಸಿದೆ.

ಮೇ ತಿಂಗಳಲ್ಲಿ ಸಂಭವಿಸಬಹುದಾದ ಆಕ್ಸಿಜನ್ ಕೊರತೆ ನೀಗಿಸಲು ಚಾಮರಾಜನಗರ ಜಿಲ್ಲಾಡಳಿತ ಸಿದ್ಧಗೊಂಡಿದೆ. ಜಿಲ್ಲಾಸ್ಪತ್ರೆಯಲ್ಲಿ 6 ಸಾವಿರ ಕಿಲೋಲೀಟರ್ ಸಾಮರ್ಥ್ಯದ ಆಕ್ಸಿಜನ್ ಘಟಕ ಸ್ಥಾಪಿಸಿದೆ. ಸುಮಾರು 65 ಕೋಟಿ ರುಪಾಯಿ ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲಾಗಿದೆ. 6 ಕಿಲೋಲೀಟರ್ ಸಾಮರ್ಥ್ಯದ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡುವುದರಿಂದ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಇರುವ 120 ಬೆಡ್​ಗಳ ರೋಗಿಗಳಿಗೆ ಒಂದು ವಾರಗಳ ಕಾಲ ಆಕ್ಸಿಜನ್ ಪೂರೈಕೆ ಮಾಡಬಹುದು. ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಸದ್ಯ 350 ಸಿಲಿಂಡರ್​ಗಳಿದ್ದು, ಒಂದು ಗಂಟೆಗೆ ಒಮ್ಮೆ 10 ಸಿಲಿಂಡರ್ ಬಳಕೆಯಾಗುತ್ತಿವೆ. ದಿನವೊಂದಕ್ಕೆ 240 ಸಿಲಿಂಡರ್ ಬಳಕೆಯಾಗುತ್ತಿವೆ. ಬಳ್ಳಾರಿಯಿಂದ ಆಕ್ಸಿಜನ್ ಹೊತ್ತು ಮೈಸೂರಿಗೆ ತರುವ ಟ್ಯಾಂಕರ್ ಅಲ್ಲಿಂದ ಚಾಮರಾಜನಗರ ಜಿಲ್ಲೆಗೆ ಬರಬೇಕಾಗಿದೆ. ಪ್ರತಿನಿತ್ಯ 100 ಸಿಲಿಂಡರ್ ಹೊತ್ತು ಒಂದು ಟ್ಯಾಂಕರ್ ಬರಲಿದೆ ಎಂದು ಜಿಲ್ಲಾಧಿಕಾರಿ ಡಾ.ರವಿ ಹೇಳಿದರು.

ಈ ರೀತಿ ಮೂರು ಬಾರಿ ಸಿಲಿಂಡರ್ ಹೊತ್ತ ಲಾರಿ ಸಂಚಾರ ಮಾಡಬೇಕಾಗುತ್ತದೆ. ಒಂದು ಟ್ರಿಪ್ ಹೋಗಿ ಬರಲು ಸುಮಾರು 6 ಗಂಟೆಗಳ ಕಾಲಬೇಕಾಗುತ್ತದೆ. ದುಬಾರಿ ಸಾರಿಗೆ ವೆಚ್ಚದ ಜೊತೆಗೆ ಸಮಯ ಕೂಡ ವ್ಯರ್ಥವಾಗಲಿದೆ. ವಾರಕ್ಕೆ ಒಮ್ಮೆ ಆಕ್ಸಿಜನ್ ಟ್ಯಾಂಕರ್ ನೇರವಾಗಿಯೇ ಆಕ್ಸಿಜನ್ ಪ್ಲಾಂಟ್​ಗೆ ಆಗಮಿಸಿ ತುಂಬಿಸಲಿದೆ. ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಎಲ್ಲಾ ರೀತಿಯ ಅನುಮತಿಗಳು ಸಿಕ್ಕಿವೆ. ದೂರದ ಬಳ್ಳಾರಿಯಿಂದ ಆಕ್ಸಿಜನ್ ಬರ ಬೇಕಾಗಿರುವುದರಿಂದ ಇನ್ನೇರಡು ದಿನಗಳಲ್ಲಿ ಆಕ್ಸಿಜನ್ ಪ್ಲಾಂಟ್ ತುಂಬಲಿದೆ. ಆಕ್ಸಿಜನ್ ಪ್ಲಾಂಟ್ ಜೊತೆಗೆ ಸ್ಥಳೀಯವಾಗಿಯೇ ಆಕ್ಸಿಜನ್ ಉತ್ಪಾದನೆಗೂ ಕ್ರಮ ಕೈಗೊಳ್ಳಲಾಗಿದೆ. ಸಂತೇಮರಹಳ್ಳಿಯ ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿ ಸ್ಥಳೀಯವಾಗಿಯೇ ಪ್ಲಾಂಟ್ ನಿರ್ಮಾಣ ಮಾಡಲು ನಾಲ್ಕೈದು ವೆಂಡರ್ ಜೊತೆಗೆ ಮಾತುಕತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನೂತನವಾಗಿ ನಿರ್ಮಾಣವಾಗಿರುವ ಆಕ್ಸಿಜನ್ ಪ್ಲಾಂಟ್ 660 ಜಂಬೋ ಸಿಲಿಂಡರ್ ಸಾಮಾರ್ಥ್ಯ ಹೊಂದಿದೆ. ಒಂದು ಜಂಬೋ ಸಿಲಿಂಡರ್​ನಲ್ಲಿ ಏಳು ಘನ ಮೀಟರ್​ಗಳಷ್ಟು ಸಾಂದ್ರೀಕೃತ ದ್ರವ ರೂಪದ ಆಮ್ಲಜನಕ ಇರುತ್ತದೆ. 6 ಸಾವಿರ ಲೀಟರ್ ಸಾಮರ್ಥ್ಯದ ಘಟಕದಲ್ಲಿ 4 ಸಾವಿರ 620 ಘನ ಮೀಟರ್​ಗಳಷ್ಟು ಆಮ್ಲಜನಕ ಹಿಡಿಯುತ್ತದೆ. ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪನೆಯಾಗಿರುವ ಆಕ್ಸಿಜನ್ ಪ್ಲಾಂಟ್​ನಲ್ಲಿ 660 ಜಂಬೊ ಸಿಲಿಂಡರ್​ಗಳಲ್ಲಿ ಹಿಡಿಯುವಷ್ಟು ಆಮ್ಲ ತುಂಬಿಸಬಹುದು.

ರಾಷ್ಟ್ರದಾದ್ಯಂತ ಆಕ್ಸಿಜನ್ ಕೊರತೆ ತಲೆ ತೂಗುತ್ತಿರುವ ಸಂದರ್ಭದಲ್ಲಿ ಮುನ್ನೆಚ್ಚರಿಕೆಯಾಗಿ ಜಿಲ್ಲಾಡಳಿತ ತೆಗೆದುಕೊಂಡ ನಿರ್ಧಾರ ಸಾರ್ವಜನಿಕರ ಮೆಚ್ವುಗೆ ಪಾತ್ರವಾಗಿದೆ. ಆದಷ್ಟು ಬೇಗ ಆಕ್ಸಿಜನ್ ಪ್ಲಾಂಟ್ ಕಾರ್ಯಾರಂಭ ಮಾಡಿ, ಆಕ್ಸಿಜನ್ ಸಿಲಿಂಡರ್​ಗಳು ತಾಲೂಕು ಆಸ್ಪತ್ರೆಗಳಲ್ಲಿ ಬಳಕೆಯಾಗಿ ಆಕ್ಸಿಜನ್ ಸಮಸ್ಯೆ ಎದುರಿಸುವ ರೋಗಿಗಳಿಗೆ ಅನುಕೂಲವಾಗಲಿ ಎಂಬುದು ನಾಗರೀಕರ ಅಭಿಮತವಾಗಿದೆ.

ಇದನ್ನೂ ಓದಿ

ಕೊರೊನಾ ಸೋಂಕಿತರ ಚಿಕಿತ್ಸೆಗೆ ಶೇ.50 ರಷ್ಟು ಹಾಸಿಗೆ ಮೀಸಲಿಡಲು ಖಾಸಗಿ ಆಸ್ಪತ್ರೆಗಳಿಗೆ ಗದಗ ಜಿಲ್ಲಾಧಿಕಾರಿ ಸೂಚನೆ

ಸಚಿವ ಮಾಧುಸ್ವಾಮಿ ಕರೆ ಮಾಡಿ ಹೇಳಿದ್ದರೂ ಸಿಗದ ಬೆಡ್: 28 ವರ್ಷದ ಯುವಕ ಸಾವು

(Chamarajanagar District Administration set up an oxygen plant to alleviate lack of oxygen)

Published On - 11:29 am, Tue, 27 April 21