AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಗರ್ಭಿಣಿ ಬಲಿ; ಸಾವಿನ ಸುತ್ತ ಅನುಮಾನದ ಹುತ್ತ

ಪವಿತ್ರ ಮದುವೆಯಾಗಿ ಕೇವಲ ಐದು ತಿಂಗಳಲ್ಲೆ ಗಂಡನ ಮನೆಯಲ್ಲಿ ಶವವಾಗಿದ್ದಾರೆ. ಆಕೆಗೆ ಕೇವಲ 20 ವರ್ಷ ವಯಸ್ಸು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದುಗ್ಗಿನಾಯ್ಕನಪಲ್ಲಿ ನಿವಾಸಿ. ಈಕೆಯನ್ನು ಇದೆ ಬಾಗೇಪಲ್ಲಿ ತಾಲೂಕಿನ ಕಾಶಪುರ ಗ್ರಾಮದ ಮಧು ಎಂಬಾತ ಮದುವೆ ಮಾಡಿಕೊಂಡಿದ್ದ.

ಚಿಕ್ಕಬಳ್ಳಾಪುರ: ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಗರ್ಭಿಣಿ ಬಲಿ; ಸಾವಿನ ಸುತ್ತ ಅನುಮಾನದ ಹುತ್ತ
ಪ್ರಾತಿನಿಧಿಕ ಚಿತ್ರ
sandhya thejappa
|

Updated on: Apr 27, 2021 | 10:44 AM

Share

ಚಿಕ್ಕಬಳ್ಳಾಪುರ: ಮದುವೆ ಮಾಡಿಕೊಳ್ಳುವಾಗ ನಮಗೆ ವರದಕ್ಷಿಣೆ ಏನು ಬೇಡ ಚೆನ್ನಾಗಿ ಮದುವೆ ಮಾಡಿಕೊಡಿ ಅಂದಿದ್ದ ಗಂಡನ ಮನೆಯವರು, ಆಕೆ ಮೂರು ತಿಂಗಳ ಗರ್ಭಿಣಿ ಆಗುತ್ತಿದ್ದಂತೆ ವರದಕ್ಷಿಣಿ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆ. ಈ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದೆ. ಇದರಿಂದ ನೊಂದ ಪವಿತ್ರ ಎಂಬಾಕೆ ಶವವಾಗಿ ಪತ್ತೆಯಾಗಿದ್ದು, ಗರ್ಭಿಣಿಯ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದೆ.

ಪವಿತ್ರ ಮದುವೆಯಾಗಿ ಕೇವಲ ಐದು ತಿಂಗಳಲ್ಲೆ ಗಂಡನ ಮನೆಯಲ್ಲಿ ಶವವಾಗಿದ್ದಾರೆ. ಆಕೆಗೆ ಕೇವಲ 20 ವರ್ಷ ವಯಸ್ಸು. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದುಗ್ಗಿನಾಯ್ಕನಪಲ್ಲಿ ನಿವಾಸಿ. ಈಕೆಯನ್ನು ಇದೆ ಬಾಗೇಪಲ್ಲಿ ತಾಲೂಕಿನ ಕಾಶಪುರ ಗ್ರಾಮದ ಮಧು ಎಂಬಾತ ಮದುವೆ ಮಾಡಿಕೊಂಡಿದ್ದ.

ಪವಿತ್ರ ಮೂರು ತಿಂಗಳು ಗರ್ಭಿಣಿಯಾಗಿದ್ದರು. ಹುಟ್ಟೊ ಮಗುವಿನ ಬಗ್ಗೆ ನೂರೆಂಟು ಕನಸ್ಸು ಕಂಡಿದ್ದರು. ಆದರೆ ಕಳೆದ ಎರಡು ಮೂರು ತಿಂಗಳಿನಿಂದ ಗಂಡನ ಮನೆಯವರು ವರದಕ್ಷಿಣಿ ಕಿರುಕುಳ ನೀಡಲು ಆರಂಭಿಸಿದ್ದರಂತೆ. ಪವಿತ್ರಳ ಗಂಡನ ಮನೆಯವರ ವರದಕ್ಷಿಣೆ ದಾಹ ಕೊನೆಗೆ ಪವಿತ್ರಳ ಸಾವಿನಲ್ಲಿ ಅಂತ್ಯವಾಗಿದೆ.

ವರದಕ್ಷಿಣೆಗಾಗಿ ಪಿಡಿಸುತ್ತಿದ್ದ ಪವಿತ್ರಳ ಗಂಡ ಮಧು ಹಾಗೂ ಆಕೆಯ ಅತ್ತೆ, ಪ್ರತಿದಿನ ಒಂದಿಲ್ಲೊಂದು ರೀತಿಯಲ್ಲಿ ಹಿಯಾಳಿಸುತ್ತಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದರಂತೆ. ಇದೆ ವಿಚಾರಕ್ಕೆ ಏಪ್ರಿಲ್ 25 ರಂದು ಅತ್ತೆ ಸೊಸೆಗೆ ಜಗಳವಾಗಿದೆ. ಆಗ ಮಧು ಹಾಗೂ ಆತನ ತಾಯಿ ಇಬ್ಬರು ಸೇರಿಕೊಂಡು ಪವಿತ್ರಳ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಅಂತ ಮೃತಳ ಸಂಬಂಧಿಗಳು ಬಾಗೇಪಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವರದಕ್ಷಿಣಿ ಕಿರುಕುಳ ಹಾಗೂ ಕೊಲೆ ಪ್ರಕರಣ ದಾಖಲು ಮಾಡಿಕೊಂಡು, ಮೃತಳ ಗಂಡ ಹಾಗೂ ಅತ್ತೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ

ನಾಲ್ಕು ತಿಂಗಳಲ್ಲಿ ಹುಬ್ಬಳ್ಳಿಯ ತೋಳನಕೆರೆ ಉದ್ಯಾನವನ ಲೋಕಾರ್ಪಣೆಗೊಳ್ಳುತ್ತದೆ; ಪ್ರಹ್ಲಾದ್ ಜೋಶಿ ಮಾಹಿತಿ

ಕೊರೊನಾ ಲಾಕ್ ಡೌನ್ ಹಿನ್ನೆಲೆ ಬೆಲೆ ಸಿಗದೆ ದಪ್ಪ ಮಣಸಿನಕಾಯಿ ಬೆಳೆ ನಾಶ ಮಾಡಿದ ರೈತರು

(three months pregnant Lady died from dowry torture at Chikkaballapur)