ಸಚಿವ ಮಾಧುಸ್ವಾಮಿ ಕರೆ ಮಾಡಿ ಹೇಳಿದ್ದರೂ ಸಿಗದ ಬೆಡ್: 28 ವರ್ಷದ ಯುವಕ ಸಾವು
ಸೋಂಕಿತನಿಗೆ ತುಮಕೂರಿನ ಯಾವ ಆಸ್ಪತ್ರೆಯಲ್ಲೂ ಬೆಡ್ ಸಿಕ್ಕಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಸಚಿವ ಮಾಧುಸ್ವಾಮಿಯವರಿಗೆ ಬೆಡ್ ಒದಗಿಸಿಕೊಡುವಂತೆ ಕೇಳಿಕೊಂಡಿದ್ದರು. ಬಳಿಕ ಡಿಹೆಚ್‌ಒಗೆ ಸಚಿವ ಮಾಧುಸ್ವಾಮಿ ಕರೆ ಮಾಡಿ ಹೇಳಿದ್ದರೂ ಯುವಕನಿಗೆ ಬೆಡ್ ಸಿಕ್ಕಿಲ್ಲ.
ತುಮಕೂರು: ಮಹಾಮಾರಿ ಕೊರೊನಾ 2ನೇ ಅಲೆಗೆ ಜನ ನರಳುತ್ತಿದ್ದಾರೆ. ಇದರ ಜೊತೆಗೆ ಆಸ್ಪತ್ರೆಗಳಲ್ಲಿ ಬೆಡ್ಗಳ ಅಭಾವ ಶುರುವಾಗಿದೆ. ಸಚಿವರೇ ಕರೆ ಮಾಡಿ ಹೇಳಿದರೂ ಬೆಡ್ ಸಿಕ್ತಿಲ್ಲ. ತುಮಕೂರು ಜಿಲ್ಲಾಸ್ಪತ್ರೆಯ ಬಳಿ ಸೋಂಕಿತರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗೂ ಬೆಡ್ ಸಿಗದೆ ಸೋಂಕಿತರು ಮೃತಪಡುತ್ತಿದ್ದಾರೆ. ಟೆಂಪೊ, ಆಟೋದಲ್ಲಿ ಜಿಲ್ಲಾಸ್ಪತ್ರೆಗೆ ಸೋಂಕಿತರು ಆಗಮಿಸುತ್ತಿದ್ದಾರೆ. ಆದ್ರೆ ಜಿಲ್ಲಾಸ್ಪತ್ರೆಯ ಬೆಡ್‌ಗಳು ಫುಲ್ ಆಗಿರುವ ಹಿನ್ನೆಲೆ ಜಿಲ್ಲಾಸ್ಪತ್ರೆ ಹೊರಗೆ ಸೋಂಕಿತರು, ಸಂಬಂಧಿಕರ ಪರದಾಡುವಂತಾಗಿದೆ.
ಸೂಕ್ತ ಸಮಯಕ್ಕೆ ಬೆಡ್ ಸಿಗದೆ 28 ವರ್ಷದ ಯುವಕ ಮೃತಪಟ್ಟಿದ್ದಾನೆ. ಬೆಡ್ ಒದಗಿಸಲು ಡಿಹೆಚ್‌ಒಗೆ ಸಚಿವ ಮಾಧುಸ್ವಾಮಿ ಕರೆ ಮಾಡಿ ಹೇಳಿದ್ದರೂ ಯುವಕನಿಗೆ ಬೆಡ್ ಸಿಕ್ಕಿಲ್ಲ. ಬಳಿಕ ಹಾಸನ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ. ಆದ್ರೆ ಚಿಕಿತ್ಸೆ ಫಲಿಸದೆ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮೂಲದ ಮದುವೆ ನಿಶ್ಚಯವಾಗಿದ್ದ ಯುವಕ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ. ಸೋಂಕಿತನಿಗೆ ತುಮಕೂರಿನ ಯಾವ ಆಸ್ಪತ್ರೆಯಲ್ಲೂ ಬೆಡ್ ಸಿಕ್ಕಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಸಚಿವ ಮಾಧುಸ್ವಾಮಿಯವರಿಗೆ ಬೆಡ್ ಒದಗಿಸಿಕೊಡುವಂತೆ ಕೇಳಿಕೊಂಡಿದ್ದರು. ಬಳಿಕ ಡಿಹೆಚ್‌ಒಗೆ ಸಚಿವ ಮಾಧುಸ್ವಾಮಿ ಕರೆ ಮಾಡಿ ಹೇಳಿದ್ದರೂ ಯುವಕನಿಗೆ ಬೆಡ್ ಸಿಕ್ಕಿಲ್ಲ. ಕೊನೆಗೆ ಬಹಳ ಪ್ರಯತ್ನದ ಬಳಿಕ ಹಾಸನ ಜಿಲ್ಲಾಸ್ಪತ್ರೆ ಬೆಡ್ ಸಿಕ್ಕರೂ ಯುವಕ ಬದುಕಲಿಲ್ಲ.
ಲಗೇಜ್ ಆಟೋದಲ್ಲೇ ಸೋಂಕಿತನ ನರಳಾಟ ಇನ್ನು ಬೆಡ್ ಸಿಗದೇ ಆಟೋದಲ್ಲೇ ಕೊರೊನಾ ಸೋಂಕಿತ ವ್ಯಕ್ತಿ ಪರದಾಡಿದಂತಹ ಹೃದಯ ವಿದ್ರಾವಕ ಘಟನೆಯೊಂದು ತುಮಕೂರು ಜಿಲ್ಲಾಸ್ಪತ್ರೆ ಬಳಿ ನಡೆದಿದೆ. ಕೊರೊನಾ ಸೋಂಕಿತ ವ್ಯಕ್ತಿಗೆ ಆ್ಯಂಬುಲೆನ್ಸ್ ಸಿಗದಿದ್ದದಕ್ಕೆ ಲಗೇಜ್ ಆಟೋದಲ್ಲೇ ಆಸ್ಪತ್ರೆಗೆ ಬಂದಿದ್ದರು. ಆದರೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಲಗೇಜ್ ಆಟೋದಲ್ಲೇ ನರಳಾಡಿದ್ದಾರೆ.
ಸೌಜನ್ಯಕ್ಕೂ ಆಸ್ಪತ್ರೆ ಸಿಬ್ಬಂದಿ ಸೋಂಕಿತನನ್ನು ತಪಾಸಣೆ ಮಾಡಲು ಮುಂದಾಗಿಲ್ಲ. ಆಸ್ಪತ್ರೆ ಆವರಣದಲ್ಲೇ ವ್ಯಕ್ತಿ ನರಳಾಡಿದರೂ ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದಾರೆ.
ರಾತ್ರಿಯಿಂದ ಈವರೆಗೆ ಕೊವಿಡ್ ಸೋಂಕಿಗೆ 7 ಜನ ಬಲಿ ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ರಾತ್ರಿಯಿಂದ ಈವರೆಗೆ 7 ಜನ ಬಲಿಯಾಗಿದ್ದಾರೆ. ಸೂಕ್ತ ಸಮಯದಲ್ಲಿ ಬೆಡ್ ಸಿಗದೆ, ಚಿಕಿತ್ಸೆ ಸಿಗದೆ ತುಮಕೂರು ಜಿಲ್ಲಾಸ್ಪತ್ರೆ, ವಿವಿಧ ಆಸ್ಪತ್ರೆಗಳಲ್ಲಿ 7 ಜನ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ದೈಹಿಕ ನಿಯಮವನ್ನು ಗಾಳಿಗೆ ತೂರಿದರೆ ಒಬ್ಬ ಕೊವಿಡ್ ರೋಗಿಯಿಂದ 406 ಜನರಿಗೆ ಸೋಂಕು ಹರಡುತ್ತೆ: ಐಸಿಎಂಆರ್
Published On - 9:17 am, Tue, 27 April 21