ದಾವಣಗೆರೆ: ಬಾಲ್ಯ ವಿವಾಹ ತಡೆದ ಅಧಿಕಾರಿಗಳು; ಹೆತ್ತವರಿಗೆ ಜೈಲು ಶಿಕ್ಷೆ ಹಾಗೂ ದಂಡದ ಎಚ್ಚರಿಕೆ

ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಅರಿವು ಮೂಡಿಸಿದ ಅಧಿಕಾರಿಗಳು ಜೈಲು ಶಿಕ್ಷೆ ಹಾಗೂ ದಂಡದ ಮೊತ್ತದ ಬಗ್ಗೆ ಎಚ್ಚರಿಸಿದರೂ ಬಾಲಕಿಯ ತಂದೆ ಮುಚ್ಚಳಿಕೆ ಪತ್ರಕ್ಕೆ ಸಹಿಹಾಕಲು ಒಪ್ಪಲಿಲ್ಲ. ಪುನಃ ಅವರಿಗೆ ಕಾನೂನಿನ ಶಿಕ್ಷೆಯ ತೀವ್ರತೆ ಬಗ್ಗೆ ಮನವರಿಕೆ ಮಾಡಿದಾಗ ಮುಚ್ಚಳಿಕೆ ಪತ್ರಕ್ಕೆ ಸಹಿ ಪಡೆದು ವಿವಾಹವನ್ನು ತಡೆದರು.

ದಾವಣಗೆರೆ: ಬಾಲ್ಯ ವಿವಾಹ ತಡೆದ ಅಧಿಕಾರಿಗಳು; ಹೆತ್ತವರಿಗೆ ಜೈಲು ಶಿಕ್ಷೆ ಹಾಗೂ ದಂಡದ ಎಚ್ಚರಿಕೆ
ಸಾಂದರ್ಭಿಕ ಚಿತ್ರ

ದಾವಣಗೆರೆ: ಬಾಲ್ಯ ವಿವಾಹ ನಿಷೇಧವಾದರು ಜನರಿಗೆ ಈ ಬಗ್ಗೆ ಇನ್ನು ಅರಿವು ಬಂದಿಲ್ಲ ಅನಿಸುತ್ತೆ. ಜೀವನದಲ್ಲಿ ಏನಾದರೂ ಸಾಧಿಸಬೇಕಾದ ಹೆಣ್ಣು ಮಗಳಿಗೆ ಬಾಲ್ಯದಲ್ಲಿ ವಿವಾಹವನ್ನು ಮಾಡಿ ಅವಳ ಆಸೆ, ಆಕಾಂಶೆಗಳನ್ನು ಕಿತ್ತುಕೊಳ್ಳುವ ಜನರಿಗೆ ತಕ್ಕ ಶಿಕ್ಷೆ ಅನಿವಾರ್ಯ ಆಗಿದೆ. ಬದುಕಿನ ಬಗ್ಗೆ ಕಿಂಚಿತ್ತು ಅರಿವಿಲ್ಲದ ಬಾಲಕಿಯರಿಗೆ ಮದುವೆ ಮಾಡಿದರೆ ಸಂಸಾರವನ್ನು ಹೇಗೆ ನಡೆಸಲು ಸಾಧ್ಯ. ಆಕೆಯ ದೈಹಿಕ ಜೊತೆಗೆ ಮಾನಸಿಕ ಸ್ಥಿತಿ ಹದಗೆಡುವುದರಲ್ಲಿ ಅನುಮಾನವಿಲ್ಲ. ಹೀಗೆ ಜಿಲ್ಲೆಯ ಗ್ರಾಮವೊಂದರಲ್ಲಿ ನಿನ್ನೆ (ಏಪ್ರಿಲ್ 26) ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ತಡೆದು ಅಧಿಕಾರಿಗಳು ಆಕೆಯನ್ನು ರಕ್ಷಿಸಿದ್ದಾರೆ.

ಜಗಳೂರು ತಾಲೂಕಿನ ಬಿಳಿಚೋಡು ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ಬಾಲಕಿಯೊಬ್ಬಳ ವಿವಾಹವನ್ನು ತಡೆಯುವ ಮೂಲಕ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ. ಚಿತ್ರದುರ್ಗ ತಾಲೂಕಿನ ಸಿರಿಗೆರೆ ಹತ್ತಿರದ ಗ್ರಾಮದ 28 ವರ್ಷದ ಯುವಕನೊಂದಿಗೆ ನಿನ್ನೆ ಮದುವೆ ಸಿದ್ಧತೆ ನಡೆದಿತ್ತು. ಮಕ್ಕಳ ಸಹಾಯವಾಣಿಗೆ ದೂರು ಬಂದ ನಿಮಿತ್ತ ಸಹಾಯವಾಣಿ ಕೊಲ್ಯಾಬ್ ಡಾನ್ ಬಾಸ್ಕೋ ತಂಡದ ಸಂಯೋಜಕ ಕೊಟ್ರೇಶ್ ಟಿ.ಎಂ ನೇತೃತ್ವದಲ್ಲಿ ಬಾಲಕಿಯ ಮನೆಗೆ ಹೋಗಿ ಆಕೆಯ ತಂದೆ, ತಾಯಿ ಹಾಗೂ ಸಂಬಂಧಿಕರನ್ನು ಭೇಟಿ ಮಾಡಿ ಶಾಲಾ ದಾಖಲೆ ಸಂಗ್ರಹಿಸಿ ಪರಿಶೀಲಿಸಿದಾಗ ಬಾಲಕಿಯ ವಯಸ್ಸು 14 ವರ್ಷ 10 ತಿಂಗಳು ಎಂಬುವುದು ತಿಳಿದುಬಂದಿತ್ತು.

ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಅರಿವು ಮೂಡಿಸಿದ ಅಧಿಕಾರಿಗಳು ಜೈಲು ಶಿಕ್ಷೆ ಹಾಗೂ ದಂಡದ ಮೊತ್ತದ ಬಗ್ಗೆ ಎಚ್ಚರಿಸಿದರೂ ಬಾಲಕಿಯ ತಂದೆ ಮುಚ್ಚಳಿಕೆ ಪತ್ರಕ್ಕೆ ಸಹಿಹಾಕಲು ಒಪ್ಪಲಿಲ್ಲ. ಪುನಃ ಅವರಿಗೆ ಕಾನೂನಿನ ಶಿಕ್ಷೆಯ ತೀವ್ರತೆ ಬಗ್ಗೆ ಮನವರಿಕೆ ಮಾಡಿದಾಗ ಮುಚ್ಚಳಿಕೆ ಪತ್ರಕ್ಕೆ ಸಹಿ ಪಡೆದು ವಿವಾಹವನ್ನು ತಡೆದರು.

ಕೊರೊನಾ ಸಂದರ್ಭದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುವ ಸಾಧ್ಯತೆಗಳಿದ್ದು, ಕೊರೊನಾ ಮಾರ್ಗಸೂಚಿಗಳೊಂದಿಗೆ ಬಾಲ್ಯ ವಿವಾಹಗಳನ್ನು ತಡೆಯಲು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಸಂಯೋಜಕ ಟಿ.ಎಂ. ಕೊಟ್ರೇಶ್ ತಿಳಿಸಿದರು.

ಸಹಾಯವಾಣಿಯ ಕಾರ್ಯಕರ್ತ ಟಿ.ನಾಗರಾಜ, ಕ್ರೀಂ ಯೋಜನೆಯ ಕಾರ್ಯಕರ್ತ ಬಿ. ಶ್ರೀನಿವಾಸ್, ಶಿಶು ಅಭಿವೃದ್ಧಿ ಯೋಜನೆಯ ಮಹಿಳಾ ಮೇಲ್ವಿಚಾರಕಿ ಎಚ್.ವಿ.ಶಾಂತಮ್ಮ, ಬಿಳಿಚೋಡು ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಎಂ.ಟಿ.ಸ್ವಾಮಿ ಇದ್ದರು.

ಇದನ್ನೂ ಓದಿ

ಕೇವಲ 21ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ರಾಮು, ನಂತರ ಕೋಟಿ ರಾಮು ಆಗಿದ್ದರ ಹಿಂದಿದೆ ಅಚ್ಚರಿಯ ಕಥೆ

ಜ್ವರ ನಿವಾರಣೆಗೆ ಅನಾದಿ ಕಾಲದಿಂದಲೂ ಶೀತಲಾದೇವಿಯ ಪೂಜಿಸುತ್ತಾ ಬಂದಿದ್ದಾರೆ ಇಲ್ಲಿಯ ಜನ

(Authorities blocked child marriage and made parents aware of Child Marriage Prohibition Act)

Click on your DTH Provider to Add TV9 Kannada