ಜ್ವರ ನಿವಾರಣೆಗೆ ಅನಾದಿ ಕಾಲದಿಂದಲೂ ಶೀತಲಾದೇವಿಯ ಪೂಜಿಸುತ್ತಾ ಬಂದಿದ್ದಾರೆ ಇಲ್ಲಿಯ ಜನ

Fever| ಶೀತ, ಜ್ವರಕ್ಕೆ ಉತ್ತರದ ಬಂಗಾಳ, ಒಡಿಸ್ಸಾ ರಾಜ್ಯಗಳಲ್ಲಿ ರೋಗಗಳನ್ನು ವಾಸಿ ಮಾಡುವ ದೇವತೆಯಾಗಿ ಶೀತಲಾದೇವಿಯನ್ನು ಆರಾಧಿಸ್ತಾರೆ.

ಜ್ವರ ನಿವಾರಣೆಗೆ ಅನಾದಿ ಕಾಲದಿಂದಲೂ ಶೀತಲಾದೇವಿಯ ಪೂಜಿಸುತ್ತಾ ಬಂದಿದ್ದಾರೆ ಇಲ್ಲಿಯ ಜನ
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: Apr 27, 2021 | 6:50 AM

ಮಹಾಮಾರಿ ಕೊರೊನಾ ದೇಶಕ್ಕೆ ಒಕ್ಕರಿಸಿದೆ. ಸಾಮಾನ್ಯ ಶೀತವು ಕೂಡ ಹೆಮ್ಮಾರಿ ಕಾಯಿಲೆಯಾಗಿ ಕಾಡುವ ಕಾಲ ಬಂದಿದೆ. ಅದರಲ್ಲೂ ಮಕ್ಕಳನ್ನು ಎಷ್ಟು ಕಣ್ಣಲ್ಲಿ ಕಣ್ಣಿಟ್ಟು ಜೋಪಾನವಾಗಿ ನೋಡಿಕೊಂಡರೂ ಹಲವು ರೀತಿಯ ರೋಗಗಳು ಕಾಡೋದುಂಟು. ಆದ್ರೆ ಈಗಿನ ಕಾಲದಲ್ಲಿ ಸುಧಾರಿತ ವೈದ್ಯಕೀಯ ಸೌಲಭ್ಯಗಳಿಂದಾಗಿ ಕೆಮ್ಮು, ಜ್ವರ ಕಾಣಿಸಿಕೊಂಡರೂ ಪೋಷಕರು ತರಹೇವಾರಿ ವೈದ್ಯಕೀಯ ಚಿಕಿತ್ಸೆ ಕೊಡಿಸ್ತಾರೆ.

ಪರಿಣಾಮ ಮಕ್ಕಳಿಗೆ ರೋಗಗಳ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಕುಗ್ಗಿ ಹೋಗಿದೆ. ಆದ್ರೆ ಹಿಂದಿನ ಕಾಲದಲ್ಲಿ ಈಗಿನಂತೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳಾಗಲೀ, ರೋಗಗಳಿಗೆ ತಕ್ಕ ಮೆಡಿಸಿನ್ಗಳಾಗಲೀ ಸಿಗುತ್ತಿರಲಿಲ್ಲ. ಹಾಗಂತಾ ಕಾಯಿಲೆ ಬಂದವರೆಲ್ಲಾ ಗುಣಮುಖರಾಗದೇ ಸಾವನ್ನಪ್ಪುತ್ತಿರಲಿಲ್ಲ. ಚಿಕ್ಕ ಪುಟ್ಟ ಕಾಯಿಲೆಗಳಿಗೆ ಆಯುರ್ವೇದ ಶಾಸ್ತ್ರದ ಸಹಾಯದಿಂದ ನಾನಾ ಬಗೆಯ ಸಿದ್ಧೌಷಧಗಳನ್ನು ನಮ್ಮ ಪೂರ್ವಜರು ಕಂಡುಕೊಂಡಿದ್ದರು. ಮನೆಯಲ್ಲೇ ಔಷಧಗಳನ್ನು ತಯಾರಿಸಿಕೊಂಡು ಸೇವಿಸಿ ಗುಣಮುಖರಾಗ್ತಾ ಇದ್ರು. ಒಂದು ವೇಳೆ ಕಾಯಿಲೆಗಳು ಉಲ್ಬಣಿಸಿದಾಗ ದೈವದ ಮೊರೆ ಹೋಗ್ತಿದ್ರು.

ದೈವಕ್ಕೆ ಹರಕೆ ಕಾಯಿಲೆಗಳು ವಾಸಿಯಾದ ನಂತರ ಆ ದೈವಗಳಿಗೆ ವಿವಿಧ ಬಗೆಯ ಹರಕೆಗಳನ್ನು ಸಲ್ಲಿಸುತ್ತಿದ್ರು. ಆದ್ರೆ ನಾವಿಂದು ಅವನ್ನೆಲ್ಲಾ ಮೂಢನಂಬಿಕೆ ಎಂದು ಮೂದಲಿಸುತ್ತೇವೆ. ಆದ್ರೆ ಇಂದಿಗೂ ಭಾರತದ ಕೆಲವೆಡೆ ಜ್ವರ, ಶೀತದಂತಹ ಸಮಸ್ಯೆಗಳು ಉಲ್ಬಣಿಸಿದಾಗ ದೇವರ ಆರಾಧನೆ ಮಾಡ್ತಾರೆ. ಹೀಗೆ ಶೀತ, ಜ್ವರಕ್ಕೆ ಉತ್ತರದ ಬಂಗಾಳ, ಒಡಿಸ್ಸಾ ರಾಜ್ಯಗಳಲ್ಲಿ ರೋಗಗಳನ್ನು ವಾಸಿ ಮಾಡುವ ದೇವತೆಯಾಗಿ ಶೀತಲಾದೇವಿಯನ್ನು ಆರಾಧಿಸ್ತಾರೆ.

ಶಕ್ತಿ ಸ್ವರೂಪಿಣಿಯಾದ ಜಗದಾಂಬೆಯು ತನ್ನ ಅನಂತ ಅನುಗ್ರಹವನ್ನು ವಿವಿಧ ರೀತಿಯಲ್ಲಿ ನೀಡಲು ಧರಿಸಿದ ರೂಪಗಳಲ್ಲಿ ಶೀತಲಾದೇವಿಯ ರೂಪವೂ ಒಂದು. ಕತ್ತೆಯ ವಾಹನದ ಮೇಲೆ ಕುಳಿತು ಮೊರ, ಪೊರಕೆ, ಕಲಶದೊಂದಿಗೆ ಇರುವ ಈ ದೇವಿಯು ರೋಗನಾಶಕ ಶಕ್ತಿಗಳ ಸಂಕೇತವಾಗಿದ್ದಾಳೆ. ಈ ದೇವಿಯ ಬಳಿ ಬಂದು ಹರಕೆ ಹೊತ್ತರೆ ರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇಲ್ಲಿಯ ಜನರದ್ದು. ಇದಕ್ಕೆ ಪೂರಕವೆಂಬಂತೆ ದಕ್ಷಿಣ ಭಾರತದಲ್ಲಿಯೂ ಸಹ ವಿವಿಧ ರೋಗಗಳಿಗೆ ಅಮ್ಮನವರನ್ನು, ಗ್ರಾಮ ದೇವತೆಯನ್ನು ಪೂಜಿಸುವ ಪದ್ಧತಿ ಅನಾದಿಕಾಲದಿಂದಲೂ ಇದೆ.

ಇದನ್ನೂ ಓದಿ: ಕೊರೊನಾ ಮುಕ್ತಿಗೆ ದೇವರ ಮೊರೆ ಹೋದ ಕೊಡಗು ಜನರು

ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ