ಕೊರೊನಾ ಮುಕ್ತಿಗೆ ದೇವರ ಮೊರೆ ಹೋದ ಕೊಡಗು ಜನರು
ಕೊಡಗಿನವರ ಕುಲದೇವ ಇಗ್ಗುತ್ತಪ್ಪ ದೇವರ ಸಹೋದರನಾದ ಈ ಪಾಲೂರಪ್ಪ ದೇವರಿಗೆ ಕೊಡಗಿನಲ್ಲಿ ವಿಶೇಷ ಮಹತ್ವವಿದೆ. ಕೊಡಗಿನ ಎಲ್ಲಾ ದೇವಾಲಯಗಳು ಪೂರ್ವಾಭಿಮುಖವಾಗಿದ್ದರೆ, ಪಾಲೂರು ಮಹಾಲಿಂಗೇಶ್ವರ ದೇವಾಲಯ ಪಶ್ಚಿಮಾಭಿಮುಖವಾಗಿದೆ. ಪ್ರತಿ ವರ್ಷ ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಪಾಲೂರು ಉತ್ಸವನ್ನ ಆಚರಿಸುವ ಮೂಲಕ ಈ ಭಾಗದ ಜನರು ದೇವರನ್ನು ಸಂತೃಪ್ತಿಗೊಳಿಸುತ್ತಾರೆ.
ಕೊಡಗು: ಕೊರೊನಾ ಹಾವಳಿ ಮಧ್ಯೆ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ. ಈ ನೆಮ್ಮದಿ ಪಡೆಯೋಕೆ ಏನು ಮಾಡಬೇಕು? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜವಾಗಿದೆ. ಇಂತಹ ಪ್ರಶ್ನೆಗೆ ಕೊಡಗಿನ ಜನರು ಉತ್ತರ ಕಂಡುಕೊಳ್ಳುತ್ತಿರುವುದು ದೇವರ ಮೂಲಕ. ಊರ ಹಬ್ಬದಲ್ಲಿ ಭಗವಂತನನ್ನು ವಿಭಿನ್ನವಾಗಿ ಆರಾಧಿಸುವ ಮೂಲಕ ಜನರು ಕೊರೊನಾ ಕಾಟದಿಂದ ತಮ್ಮನ್ನು ಮುಕ್ತಿಗೊಳಿಸುವಂತೆ ಬೇಡಿಕೊಂಡಿದ್ದಾರೆ.
ಕಳೆದ ವರ್ಷ ಕೊರೊನಾ ಕಾರಣದಿಂದಾಗಿ ಕೊಡಗು ಜಿಲ್ಲೆಯಲ್ಲಿನ ಬಹುತೇಕ ಹಬ್ಬಹರಿದಿನಗಳು ರದ್ದುಗೊಂಡಿದ್ದವು. ಅದೇ ರೀತಿ ಸುಮಾರು 800 ವರ್ಷಗಳ ಇತಿಹಾಸವಿರುವ ಪಾಲೂರು ಮಹಾಲಿಂಗೇಶ್ವರ ದೇವಾಲಯದಲ್ಲಿಯೂ ಉತ್ಸವವನ್ನ ಆಚರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಬಾರಿ ನಿಗದಿಯಂತೆ ಜಿಲ್ಲೆಯ ಮಡಿಕೇರಿ ತಾಲೂಕಿನ ಪಾಲೂರು ಗ್ರಾಮದಲ್ಲಿ ಪಾಲೂರಪ್ಪನ ಉತ್ಸವವನ್ನು ಸರಳವಾಗಿ ಆಚರಿಸುವ ಮೂಲಕ ನಾಡಿನ ಜನರು ದೇವರ ಕೃಪೆಗೆ ಪಾತ್ರರಾದರು. ವಿಶೇಷ ಎಂದರೆ ಈ ಉತ್ಸವದಲ್ಲಿ ದೇವಾಲಯದ ಒಳಗೆ ಗೋವುಗಳಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಪೂಜೆಗೂ ಮೊದಲು ಹರಕೆ ಹೊತ್ತವರು ತಮ್ಮ ಎತ್ತುಗಳನ್ನು ಅಲಂಕರಿಸಿ ದೇವಾಲಯಕ್ಕೆ ಕರೆ ತರುತ್ತಾರೆ.
ನೃತ್ತ ಬಲಿ ಕೊಡಗಿನವರ ಕುಲದೇವ ಇಗ್ಗುತ್ತಪ್ಪ ದೇವರ ಸಹೋದರನಾದ ಈ ಪಾಲೂರಪ್ಪ ದೇವರಿಗೆ ಕೊಡಗಿನಲ್ಲಿ ವಿಶೇಷ ಮಹತ್ವವಿದೆ. ಕೊಡಗಿನ ಎಲ್ಲಾ ದೇವಾಲಯಗಳು ಪೂರ್ವಾಭಿಮುಖವಾಗಿದ್ದರೆ, ಪಾಲೂರು ಮಹಾಲಿಂಗೇಶ್ವರ ದೇವಾಲಯ ಪಶ್ಚಿಮಾಭಿಮುಖವಾಗಿದೆ. ಪ್ರತಿ ವರ್ಷ ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಪಾಲೂರು ಉತ್ಸವನ್ನ ಆಚರಿಸುವ ಮೂಲಕ ಈ ಭಾಗದ ಜನರು ದೇವರನ್ನು ಸಂತೃಪ್ತಿಗೊಳಿಸುತ್ತಾರೆ. ಈ ಬಾರಿಯ ಉತ್ಸವಕ್ಕೆ ದೇವಾಲಯದ ಆವರಣದಲ್ಲಿ ಕೊಡವ ಜನಪದ ಕಲೆಗಳನ್ನು ಕೂಡ ಅನಾವರಣಗೊಳಿಸಲಾಯಿತು. ಜೊತೆಗೆ ಈ ಉತ್ಸವದ ಕೇಂದ್ರಬಿಂದು ನೃತ್ಯ ಬಲಿ. ಒಂದೇ ಜಾಗದಲ್ಲಿ ಎರಡೂ ದೇವರು ಒಟ್ಟಿಗೆ ಇರುವುದರಿಂದ ಎರಡೂ ಉತ್ಸವ ಮೂರ್ತಿಯನ್ನು ಏಕಕಾದಲ್ಲಿ ಹೊತ್ತು ನೃತ್ಯ ಮಾಡಲಾಗುತ್ತದೆ. ಹಲವು ಗಂಟೆಗಳ ಕಾಲ ನಡೆಯುವ ಸುಂದರ ನೃತ್ಯವನ್ನು ಕಣ್ತುಂಬಿಕೊಂಡು ದೇವರ ಕೃಪೆಗೆ ಪಾತ್ರರಾಗಲು ನೂರಾರು ಭಕ್ತರು ಕಾದು ನಿಂತಿರುತ್ತಾರೆ. ಜೊತೆಗೆ ಚೌಂಡಿ ತೆರೆ ಕೂಡ ಈ ಹಬ್ಬದ ಮತ್ತೊಂದು ವಿಶೇಷತೆ. ತೆಂಗಿನ ಗರಿಗಳಿಂದ ಅಲಂಕೃತವಾಗಿರುವ ಈ ದೇವರು ಬೆಂಕಿ ಕೆಂಡದ ಮೇಲೆ ಬೀಳಲು ಮುಂದಾಗುತ್ತದೆ. ಈ ಸಂದರ್ಭ ಭಕ್ತರು ದೇವರನ್ನು ಕೆಂಡದ ಗುಡ್ಡೆಯಿಂದ ಎಳೆಯುತ್ತಾರೆ.
ಕೊರೊನಾ ಆತಂಕದ ನಡುವೆಯೂ ಪಾಲೂರು ಉತ್ಸವ ಜರುಗಿತು. ಜನರು ಕೂಡ ತಮ್ಮ ನಾಡಿನ ಪಾಲಕನಾದ ಪಾಲೂರಪ್ಪನನ್ನು ಆಚರಿಸುವ ಮೂಲಕ ವಿಶ್ವನನ್ನ ಆವರಿಸಿರುವ ಮಹಾಮಾರಿಯನ್ನು ಹೊಡೆದೋಡಿಸುವಂತೆ ಬೇಡಿಕೊಂಡರು.
ಇದನ್ನೂ ಓದಿ
ಕಳಪೆ ಈರುಳ್ಳಿ ಬೀಜ ನೀಡಿದ ಕಲಾಶ್ ಕಂಪನಿ; ಪರಿಹಾರಕ್ಕೆ ಚಿತ್ರದುರ್ಗ ರೈತರ ಆಗ್ರಹ
ಗಾಳಿ, ಮಳೆಯಿಂದ ಬೀದಿಗೆ ಬಿದ್ದ ಹಾವೇರಿ ಜನರ ಬದುಕು; ಶಾಶ್ವತ ಸೂರಿಗೆ ಸ್ಥಳೀಯರ ಆಗ್ರಹ
(People of kodagu begged God to reduce the corona infection)