ಕಳಪೆ ಈರುಳ್ಳಿ ಬೀಜ ನೀಡಿದ ಕಲಾಶ್ ಕಂಪನಿ; ಪರಿಹಾರಕ್ಕೆ ಚಿತ್ರದುರ್ಗ ರೈತರ ಆಗ್ರಹ
ಈರುಳ್ಳಿಗೆ ಉತ್ತಮ ಬೆಲೆ ಬರುವ ನಿರೀಕ್ಷೆಯಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ಹಗಲಿರುಳು ಶ್ರಮಿಸಿದ್ದಾರೆ. 1 ಕೆ.ಜಿ ಬೀಜಕ್ಕೆ 3,000 ರೂಪಾಯಿ ನೀಡಿ ರೈತರು ಖರೀಧಿಸಿದ್ದರು. ಒಂದು ಎಕರೆ ಈರುಳ್ಳಿ ಬೆಳೆಗೆ ಕನಿಷ್ಟ 45 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಕಳಪೆ ಗುಣಮಟ್ಟದ ಬೀಜ ಹಾಕಿದ ಪರಿಣಾಮ ಬಹುತೇಕ ಕಡೆ ಈರುಳ್ಳಿ ಬೆಳೆ ಹಾಳಾಗಿದೆ.
ಚಿತ್ರದುರ್ಗ: ಕೋಟೆನಾಡಿನ ರೈತರು ಕೊರೊನಾ ಭೀತಿಯಿಂದ ಮಹಾರಾಷ್ಟ್ರದ ಸತಾರ ಈರುಳ್ಳಿ ಬೀಜ ಬದಲು ಸ್ಥಳೀಯ ಕಂಪನಿಯ ಬೀಜ ಪಡೆದಿದ್ದರು. ಆದರೆ ಸ್ಥಳೀಯ ಕಲಾಶ್ ಕಂಪನಿಯ ಬೀಜ ಕಳಪೆ ಆಗಿದ್ದು, ಫಸಲು ಬಾರದೆ ರೈತರು ಕಂಗಾಲಾಗಿದ್ದಾರೆ. ಈರುಳ್ಳಿ ಬೆಳೆ ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದು, ಹಿಂಗಾರಿನಲ್ಲಿ ಸುಮಾರು 15.200 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಕೊರೊನಾ ಭೀತಿಯಿಂದ ಅನಿವಾರ್ಯವಾಗಿ ಮಹಾರಾಷ್ಟ್ರದ ಸತಾರಾ ಈರುಳ್ಳಿ ಬೀಜವನ್ನು ಪಡೆಯಲು ರೈತರು ಹಿಂದೇಟು ಹಾಕಿದ್ದರು. ಇದರಿಂದ ಕಲಾಶ್ ಕಂಪನಿಯ ಪ್ರಸಿದ್ಧಿ ಈರುಳ್ಳಿ ಬೀಜ ಪಡೆದು ಬಿತ್ತನೆ ಮಾಡಿದ್ದಾರೆ.
ಈರುಳ್ಳಿಗೆ ಉತ್ತಮ ಬೆಲೆ ಬರುವ ನಿರೀಕ್ಷೆಯಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ಹಗಲಿರುಳು ಶ್ರಮಿಸಿದ್ದಾರೆ. 1 ಕೆ.ಜಿ ಬೀಜಕ್ಕೆ 3,000 ರೂಪಾಯಿ ನೀಡಿ ರೈತರು ಖರೀಧಿಸಿದ್ದರು. ಒಂದು ಎಕರೆ ಈರುಳ್ಳಿ ಬೆಳೆಗೆ ಕನಿಷ್ಟ 45 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಕಳಪೆ ಗುಣಮಟ್ಟದ ಬೀಜ ಹಾಕಿದ ಪರಿಣಾಮ ಬಹುತೇಕ ಕಡೆ ಈರುಳ್ಳಿ ಬೆಳೆ ಹಾಳಾಗಿದೆ. ಹೀಗಾಗಿ ಬೆಳೆ ಹಾನಿ ಪರಿಹಾರ ನೀಡುವಂತೆ ಈರುಳ್ಳಿ ಬೆಳೆಗಾರರು ಆಗ್ರಹಿಸಿದ್ದಾರೆ. ತೋಟಗಾರಿಕೆ ಇಲಾಖೆ ಕಚೇರಿಗೆ ರೈತರು ದೂರು ನೀಡಿದ ಹಿನ್ನೆಲೆ ಅಧಿಕಾರಿಗಳು ಕಲಾಶ್ ಕಂಪನಿ ಜಿಲ್ಲಾ ವ್ಯವಸ್ಥಾಪಕರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ರೈತರು ಕಂಪನಿಯ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡು ಪರಿಹಾರಕ್ಕೆ ಆಗ್ರಹಿಸಿದರು.
ಜಿಲ್ಲೆಯಲ್ಲಿ ಚಳ್ಳಕೆರೆ, ಹಿರಿಯೂರು ಮತ್ತು ಚಿತ್ರದುರ್ಗ ಭಾಗದಲ್ಲಿ ಸುಮಾರು 15.200 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಲಾಗಿದೆ. ಚಿತ್ರದುರ್ಗ ತಾಲೂಕಿನ ಕಾಸವರಹಟ್ಟಿ, ದಂಡಿನ ಕುರುಬರಹಟ್ಟಿ ಭಾಗದಲ್ಲಿ ಅನೇಕ ರೈತರು ಕಲಾಶ್ ಕಂಪನಿಯ ಪ್ರಸಿದ್ಧಿ ಈರುಳ್ಳಿ ಬೀಜ ಪಡೆದು ಬಿತ್ತನೆ ಮಾಡಿದ್ದರು. ಆದರೆ ಬಹುತೇಕ ಕಡೆ ಈರುಳ್ಳಿ ಬೆಳೆ ವಿಫಲವಾಗಿದೆ. ಶೇ.60ರಿಂದ 70ರಷ್ಟು ಈರುಳ್ಳಿ ಬೆಳೆ ಗಡ್ಡೆ ಆಗದೆ ಹಾಳಾಗಿರುವುದು ಕಂಡು ಬಂದಿದೆ. ಈ ಬಗ್ಗೆ ರೈತರು ದೂರು ನೀಡಿದ ಹಿನ್ನೆಲೆ ಕಂಪನಿ ವ್ಯವಸ್ಥಾಪಕರು ಹಾಗೂ ಮಾರಾಟಗಾರರನ್ನು ಕರೆಸಿ ಚರ್ಚಿಲಾಗಿದೆ. ಜೊತೆಗೆ ರೈತರ ಬೇಡಿಕೆಯಂತೆ ಎಪ್ರಿಲ್ 27ರ ಒಳಗೆ ಕಂಪನಿಗೆ ಸೂಕ್ತ ತೀರ್ಮಾನ ಕೈಗೊಂಡು ರೈತರಿಗೆ ಪರಿಹಾರ ನೀಡಲು ಸೂಚಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ತಿಳಿಸಿದ್ದಾರೆ.
ಇದನ್ನೂ ಓದಿ
ಗಾಳಿ, ಮಳೆಯಿಂದ ಬೀದಿಗೆ ಬಿದ್ದ ಹಾವೇರಿ ಜನರ ಬದುಕು; ಶಾಶ್ವತ ಸೂರಿಗೆ ಸ್ಥಳೀಯರ ಆಗ್ರಹ
(Chitradurga Onion growers demanding compensation to Kalash Company)