ಮೈಸೂರು ವೈದ್ಯಕೀಯ ಸಂಶೋಧನಾಲಯದ ಡೀನ್​ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕ್ಲಾಸ್​

ರಾಜ್ಯದಲ್ಲಿ ಇಂದು 30 ಸಾವಿರ ಆಕ್ಸಿಜನ್ ಬೆಡ್‌ಗಳಿವೆ. ರಾಜ್ಯದ ಹಲವು ತಾಲೂಕು ಆಸ್ಪತ್ರೆಗಳಲ್ಲಿ ಬೆಡ್ ಮೀಸಲು ಇಡಲಾಗಿದೆ. 50 ಮೀಸಲು ಬೆಡ್‌ಗಳನ್ನ ಆಕ್ಸಿಜನ್ ಬೆಡ್ ಮಾಡಿದ್ದೇವೆ. 8 ತಿಂಗಳಲ್ಲಿ ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚು ಮಾಡಿದ್ದೇವೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಅದು ಸಾಕಾಗುತ್ತಾ ಎಂಬ ಭಯ ಇದೆ: ಆರೋಗ್ಯ ಸಚಿವ ಡಾ.ಸುಧಾಕರ್

ಮೈಸೂರು ವೈದ್ಯಕೀಯ ಸಂಶೋಧನಾಲಯದ ಡೀನ್​ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕ್ಲಾಸ್​
ಡಾ.ಕೆ.ಸುಧಾಕರ್ (ಸಂಗ್ರಹ ಚಿತ್ರ)
preethi shettigar

| Edited By: Skanda

Apr 22, 2021 | 1:32 PM

ಮೈಸೂರು: ಜಿಲ್ಲೆಯ ಮೇಟಗಳ್ಳಿಯಲ್ಲಿರುವ ಕೊವಿಡ್ ಆಸ್ಪತ್ರೆಗೆ ಸಚಿವ ಡಾ.ಕೆ.ಸುಧಾಕರ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಡಾ.ಕೆ.ಸುಧಾಕರ್‌ಗೆ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ನಾಗೇಂದ್ರ, ಡಿಸಿ ರೋಹಿಣಿ ಸಿಂಧೂರಿ ಸಾಥ್ ನೀಡಿದ್ದು, ಆಸ್ಪತ್ರೆಯಲ್ಲಿರುವ ಸಮಸ್ಯೆ ಬಗ್ಗೆ ಸಚಿವರಿಗೆ ಆಸ್ಪತ್ರೆ ಉಸ್ತುವಾರಿ ಡಾ.ರಾಜೇಶ್ವರಿ ದೂರು ನೀಡಿದ್ದಾರೆ. ಮೈಸೂರು ವೈದ್ಯಕೀಯ ಸಂಶೋಧನಾಲಯದ ಡೀನ್ ನಂಜರಾಜ ಅರಸ್‌ ಜೊತೆ ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ನಿಮ್ಮ ಭಿನ್ನಾಭಿಪ್ರಾಯಗಳನ್ನು ಕೆಲಸದಲ್ಲಿ ತೋರಿಸಬೇಡಿ. ಅದನ್ನು ನಾನು ‌ಸಹಿಸಲು ಸಾಧ್ಯವಿಲ್ಲ. ಜಿಲ್ಲಾ ಕೊವಿಡ್ ಆಸ್ಪತ್ರೆ ಜತೆ ಹೊಂದಾಣಿಕೆ ಇರಬೇಕು, ಇಲ್ಲದಿದ್ದರೆ ನಿಮ್ಮನ್ನೇ ಹೊಣೆ ಮಾಡಲಾಗುವುದು. ಇನ್ನು ಮುಂದೆ ಈ ರೀತಿ ದೂರು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಾರ್ನಿಂಗ್​ ನೀಡಿದ್ದಾರೆ.

ನಾನೇ ಆಸ್ಪತ್ರೆಗೆ ಪಿಪಿಇ ಕಿಟ್ ಹಾಕಿಕೊಂಡು ಬರಬೇಕಾ? ಸೋಂಕಿತರಿಗಾಗಿ 1 ಸಾವಿರ ಬೆಡ್ ಮೀಸಲಿಡಲು ಆಗಲ್ವಾ? ಜನರಿಗೆ ಸೂಕ್ತ ಮಾಹಿತಿ ನೀಡುವುದಕ್ಕೆ ಆಗುವುದಿಲ್ಲವಾ? ಎಂದು ಡೀನ್ ನಂಜರಾಜ್ ಅವ‌ರನ್ನು ಸಚಿವ ಡಾ.ಕೆ.ಸುಧಾಕರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ಡಾ. ಸುಧಾಕರ್​ ಅವರಿಗೆ ರೋಗಿಗಳು ಮತ್ತು ಆಸ್ಪತ್ರೆ ಸಿಬ್ಬಂದಿ ದೂರು ನೀಡಿದ್ದು, ಇವರ ಜೊತೆಗೆ ಆಸ್ಪತ್ರೆ ಸಮಸ್ಯೆ ಬಗ್ಗೆ ಬಿಜೆಪಿ ಶಾಸಕ‌ ನಾಗೇಂದ್ರ ಕೂಡ ದನಿ ಎತ್ತಿದ್ದಾರೆ. ಕೆ.ಆರ್.ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ನಾನೇ ಹಲವು ಬಾರಿ ಗಲಾಟೆ ಮಾಡಿ ಹೋಗಿದ್ದೇನೆ ಎಂದು ತಿಳಿಸಿದ್ದಾರೆ.

ಇದರಿಂದಾಗಿ ಸ್ಥಳದಲ್ಲಿಯೇ ವೈದ್ಯರು ಡಾ. ಸುಧಾಕರ್ ಅವರಿಗೆ ಸ್ಪಷ್ಟನೆ ನೀಡಿದ್ದು, ನರ್ಸಿಂಗ್ ಸಿಬ್ಬಂದಿ, ಗ್ರೂಪ್ ಡಿ ನೌಕರರ ಕೊರತೆ ಇದೆ. ಕೊವಿಡ್ ಪಾಸಿಟಿವ್ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಸಮಸ್ಯೆಯಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಬಳಿಕ ಈ ಬಗ್ಗೆ ಲಿಖಿತವಾಗಿ ಮನವಿ ಸಲ್ಲಿಸಲು ಕೆ.ಆರ್.ಆಸ್ಪತ್ರೆ ವೈದ್ಯರಿಗೆ ಸಚಿವ ಡಾ. ಸುಧಾಕರ್ ಸೂಚಿಸಿದ್ದಾರೆ.

ರೆಮ್‌ಡೆಸಿವಿರ್ ಲೈಫ್ ಸೇವಿಂಗ್ ಡ್ರಗ್ ಅಲ್ಲ ವೈಜ್ಞಾನಿಕವಾಗಿ ರೆಮ್‌ಡೆಸಿವಿರ್ ಲೈಫ್ ಸೇವಿಂಗ್ ಡ್ರಗ್ ಅಲ್ಲ. ಜನ ಸಾಮಾನ್ಯರಲ್ಲಿ ಈ ರೀತಿಯ ಅಭಿಪ್ರಾಯ ಮೂಡಿದೆ ಅಷ್ಟೇ. ವಿಶ್ಚ ಆರೋಗ್ಯ ಸಂಸ್ಥೆಯ ಪಟ್ಟಿಯಲ್ಲೂ ರೆಮಿಡೆಸಿಯರ್ ಇಲ್ಲ. ಆದರೆ ರೆಮ್‌ಡೆಸಿವಿರ್ ಕೊರೊನಾ ಸಂಜೀವಿನಿ ಎಂದು ಬಿಂಬಿತವಾಗಿದೆ. ಅದಕ್ಕಿಂತ ಕಡಿಮೆ ದರದ ಪರ್ಯಾಯ ಔಷಧಗಳಿವೆ. ನಾನು ವೈದ್ಯನಾಗಿ ಹೇಳಬೇಕೆಂದರೆ ಅದರ ಬದಲು ಸ್ಟಿರಾಯ್ಡ್​ ಪರಿಣಾಮಕಾರಿಯಾಗಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ.

ಕೊರೊನಾ ಕಡಿಮೆಯಾದ ಹಿನ್ನೆಲೆ ರೆಮ್​ಡೆಸಿವರ್ ಉತ್ಪಾದನೆ ನಿಲ್ಲಿಸಲಾಗಿತ್ತು. ಈಗ ಮತ್ತೆ ಕೊರೊನಾ ಜಾಸ್ತಿಯಾಗಿದೆ ಬೇಡಿಕೆ ಹೆಚ್ಚಾಗಿದೆ. ಸ್ವಲ್ಪ ದಿನದಲ್ಲಿ ರೆಮ್​ಡೆಸಿವರ್ ಪೂರೈಕೆ ಸರಿಯಾಗುತ್ತದೆ. ದೇಶದಲ್ಲಿ 8 ರಿಂದ 9 ಕಂಪನಿಗಳು ಮಾತ್ರ ರೆಮ್​ಡೆಸಿವರ್ ಉತ್ಪಾದನೆ ಮಾಡುತ್ತಿವೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಇಂದು 30 ಸಾವಿರ ಆಕ್ಸಿಜನ್ ಬೆಡ್‌ಗಳಿವೆ. ರಾಜ್ಯದ ಹಲವು ತಾಲೂಕು ಆಸ್ಪತ್ರೆಗಳಲ್ಲಿ ಬೆಡ್ ಮೀಸಲು ಇಡಲಾಗಿದೆ. 50 ಮೀಸಲು ಬೆಡ್‌ಗಳನ್ನ ಆಕ್ಸಿಜನ್ ಬೆಡ್ ಮಾಡಿದ್ದೇವೆ. 8 ತಿಂಗಳಲ್ಲಿ ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚು ಮಾಡಿದ್ದೇವೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಅದು ಸಾಕಾಗುತ್ತಾ ಎಂಬ ಭಯ ಇದೆ. ತಕ್ಷಣಕ್ಕೆ ಸಾಧ್ಯವಾಗುವ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ವೈದ್ಯಕೀಯ ಪರೀಕ್ಷೆ ಮುಂದೂಡಿಕೆ ವೈದ್ಯಕೀಯ ಪರೀಕ್ಷೆ ಕುರಿತು ಮಾತನಾಡಿದ ಡಾ.ಕೆ.ಸುಧಾಕರ್ ಇಂದು ನಡೆಯಬೇಕಿದ್ದ ಸ್ನಾತಕೋತ್ತರ, ಪದವಿ ಸೇರಿ ಎಲ್ಲ ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ. ವೈದ್ಯಕೀಯ ಶಿಕ್ಷಣದ ಅಂತಿಮ ವರ್ಷದ ವಿದ್ಯಾರ್ಥಿಗಳನ್ನ ಕೊವಿಡ್ ಕೆಲಸಕ್ಕೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:

ಆಸ್ಪತ್ರೆಯಿಂದ ಕೊರೊನಾ ಲಸಿಕೆಯನ್ನೇ ಎಗರಿಸಿದ ಕಳ್ಳರು; 1,710 ಡೋಸ್ ಲಸಿಕೆ ಹಾಗೂ ಕಡತಗಳು ಕಣ್ಮರೆ

ಶ್ರೀರಾಮನಂತೆ ಕಾಡಿಗೆ ಹೋಗುವುದು ಬೇಡ, ಹಿರಿಯರಿಗೆ ಲಸಿಕೆ ಕೊಡಿಸೋಣ: ಯುವಕರಿಗೆ ಆರೋಗ್ಯ ಸಚಿವ ಸುಧಾಕರ್ ಕರೆ

(Karnataka Health Minister Dr. Sudhakar angry on Mysuru Medical Research Institute Dean )

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada