ಲಸಿಕೆ ಹಾಕಿಸಿಕೊಂಡ್ರೂ ಕೊರೊನಾ ಬಿಡಲಿಲ್ಲ; ಒಂದೇ ವಾರಕ್ಕೆ 56 ವರ್ಷದ ಮಹಿಳೆ ಸಾವು

ಕಳೆದ ಗುರುವಾರ ವ್ಯಾಕ್ಸಿನ್ ಹಾಕಿಸಿಕೊಂಡಿದ್ದ ಮಹಿಳೆ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಂಡ ಕೆಲ ದಿನಗಳ ನಂತರ ಮಹಿಳೆಗೆ ಕೆಮ್ಮು ಜ್ವರ ಬಂದಿತ್ತು, ಹುಷಾರಿರಲಿಲ್ಲ ಹೀಗಾಗಿ ಆಸ್ಪತ್ರೆಗೆ ಹೋಗಿ ಚೆಕ್ ಮಾಡಿಸಿದ್ದಾರೆ. ಆಗ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಲಸಿಕೆ ಹಾಕಿಸಿಕೊಂಡ್ರೂ ಕೊರೊನಾ ಬಿಡಲಿಲ್ಲ; ಒಂದೇ ವಾರಕ್ಕೆ 56 ವರ್ಷದ ಮಹಿಳೆ ಸಾವು
ಪ್ರಾತಿನಿಧಿಕ ಚಿತ್ರ
Ayesha Banu

| Edited By: Apurva Kumar Balegere

Apr 22, 2021 | 4:05 PM

ಬೆಂಗಳೂರು: ಕೊರೊನಾ ಬರಬಾರದು ಎಂದು ಕೊರೊನಾ ಲಸಿಕೆ ಹಾಕಿಸಿಕೊಂಡ್ರು. ಆದ್ರೆ ಲಸಿಕೆ ಪಡೆದ ಒಂದು ವಾರಕ್ಕೆ ಮಹಿಳೆ ಮೃತಪಟ್ಟಿದ್ದಾರೆ. 56 ವರ್ಷದ ಮಹಿಳೆ ಕೊರೊನಾಗೆ ಬಲಿಯಾಗಿರುವ ಘಟನೆ ನಡೆದಿದೆ.

ಕಳೆದ ಗುರುವಾರ ವ್ಯಾಕ್ಸಿನ್ ಹಾಕಿಸಿಕೊಂಡಿದ್ದ ಮಹಿಳೆ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಂಡ ಕೆಲ ದಿನಗಳ ನಂತರ ಮಹಿಳೆಗೆ ಕೆಮ್ಮು ಜ್ವರ ಬಂದಿತ್ತು, ಹುಷಾರಿರಲಿಲ್ಲ ಹೀಗಾಗಿ ಆಸ್ಪತ್ರೆಗೆ ಹೋಗಿ ಚೆಕ್ ಮಾಡಿಸಿದ್ದಾರೆ. ಆಗ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಳಿಕ ಆಸ್ಪತ್ರೆಗೆ ಸೇರಿಸೋದಕ್ಕೆ ಸಾಕಷ್ಟು ಪ್ರಯತ್ನ ಪಟ್ವಿದ್ದಾರೆ. ಆದ್ರೆ ಬಿಬಿಎಂಪಿ ಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೊನೆಗೆ ಮಹಿಳೆ ಮನೆಯಲ್ಲೇ ಇದ್ದು ನಿನ್ನೆ ಮಧ್ಯಾಹ್ನ ಸಾವನ್ನಪ್ಪಿದ್ದಾರೆ. ಸತ್ತ ಮೇಲೆ ಕೊರೊನಾ ಮೃತರಿಗೆ ಯಾವ ರೀತಿ ಅಂತ್ಯಕ್ರಿಯೆ ಮಾಡಬೇಕು ಎಂಬುವುದೂ ತಿಳಿಯದೆ ಕುಟುಂಬಸ್ಥರು ಪರದಾಡಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿದಿದ್ದರೆ ಮಹಿಳೆ ಬದುಕುಳಿತಿದ್ರು ಎಂದು ಸುಮನಹಳ್ಳಿ ಚಿತಾಗಾರ ಮುಂದೆ ಮೃತಳ ಸಂಬಂಧಿ ಅಳಲು ತೋಡಿಕೊಂಡಿದ್ದಾರೆ.

ಇನ್ನು ಮತ್ತೊಂದು ಕಡೆ ಐಸಿಯುನಲ್ಲಿ ಅಡ್ಮಿಟ್ ಮಾಡಿರುವ ಪೇಷಂಟ್ ಸ್ಥಿತಿ ಕಂಡು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಜೊತೆಗೆ ಆಸ್ಪತ್ರೆ ಬಳಿ ತಮ್ಮ ಸಂಬಂಧಿಗಳನ್ನ ಕಳೆದುಕೊಂಡಿರೋರು ಕಣ್ಣೀರು ಹಾಕುತ್ತಿದ್ದಾರೆ. ಸರಿಯಾದ ಸಮಯಕ್ಕೆ ಬೆಡ್ ಸಿಕ್ಕಿದ್ರೆ ಬದುಕುಳಿಯುತ್ತಿದ್ರು ಅಂತ ಅಳಲು ತೋಡಿಕೊಳ್ತಿದ್ದಾರೆ. ಆಸ್ಪತ್ರೆ ಮುಂಭಾಗದಲ್ಲಿ ರೋಗಿ ಕುಟುಂಬದವರ ಗೋಳು ಕೇಳೋರಿಲ್ಲ. ಅಪ್ಪನಿಗೆ ಸೀರಿಯಸ್ ಆಗಿರೋದನ್ನ ಕಂಡು ದುಖಿಸುತ್ತಿರೋ ಮಗ ಹಾಗೂ ತಾಯಿ. ಐಸಿಯು ಮುಂದೆ ಕೆಮ್ಮುತ್ತ ಕಣ್ಣೀರಿಡ್ತಿರೋ ವ್ಯಕ್ತಿ. ಇಂತಹ ದೃಶ್ಯಗಳು ಬೆಂಗಳೂರಿನಲ್ಲಿ ಸಾಮಾನವಾಗಿದೆ. ನಗರದ ಪ್ರತಿ ಆಸ್ಪತ್ರೆ ಮುಂದೆ ಇಂತಹ ದೃಶ್ಯಗಳು ನಡೆಯುತ್ತಿವೆ. ಬೆಂಗಳೂರಿನ ಸ್ಥಿತಿ ತುಂಬಾ ಹೀನಾಯವಾಗಿದೆ.

ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದರೂ ಅನಾರೋಗ್ಯ.. ಗಂಟಲು ದ್ರವ ಪರೀಕ್ಷೆಗೆ ಕೊಟ್ಟು ಮನೆಗೆ ಬಂದ ವೃದ್ಧ ಕುಸಿದು ಬಿದ್ದು ಸಾವು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada