ಕೊರೊನಾ ಲಸಿಕೆ ಪಡೆದರೂ ಅನಾರೋಗ್ಯ.. ಗಂಟಲು ದ್ರವ ಪರೀಕ್ಷೆಗೆ ಕೊಟ್ಟು ಮನೆಗೆ ಬಂದ ವೃದ್ಧ ಕುಸಿದು ಬಿದ್ದು ಸಾವು
ಇಳಕಲ್ ನಗರದಲ್ಲಿ ಏಪ್ರಿಲ್ 19ರ ಸಂಜೆ 75 ವರ್ಷದ ಉದ್ಯಮಿ ಕಳೆದ ತಿಂಗಳು ಕೊರೊನಾ ಲಸಿಕೆ ಪಡೆದಿದ್ರು ಎಂಬ ಮಾಹಿತಿ ಸಿಕ್ಕಿದೆ. ಲಸಿಕೆಯ ಪಡೆದ ಬಳಿಕ ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಪುತ್ರನ ಜೊತೆ ಇಳಕಲ್ ನಗರದ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು.
ಬಾಗಲಕೋಟೆ: ಮಹಾಮಾರಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು ಮೃತ ಸಂಖ್ಯೆ ಸಹ ಏರಿಕೆಯಾಗುತ್ತಿದೆ. ಇದರ ಜೊತೆಗೆ ಕೊರೊನಾ ಭಯಕ್ಕೆಯೇ ಜನ ಮೃತಪಡುತ್ತಿರುವ ಘಟನೆ ಸಹ ಕೆಲವೆಡೆ ನಡೆಯುತ್ತಿವೆ. ಭಯವೇ ಸಾವಿಗೆ ಕಾರಣವೆಂಬಂತಾಗಿದೆ. ಇನ್ನು ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ಇದೇ ರೀತಿಯ ಘಟನೆ ನಡೆದಿದೆ. ಗಂಟಲು ದ್ರವ ಪರೀಕ್ಷೆಗೆ ಕೊಟ್ಟು ಮನೆಗೆ ಬರುತ್ತಿದ್ದ 75 ವರ್ಷ ವಯಸ್ಸಿನ ವೃದ್ಧ ಕುಸಿದು ಬಿದ್ದ ಪ್ರಾಣ ಕಳೆದುಕೊಂಡಿದ್ದಾರೆ.
ಇಳಕಲ್ ನಗರದಲ್ಲಿ ಏಪ್ರಿಲ್ 19ರ ಸಂಜೆ 75 ವರ್ಷದ ಉದ್ಯಮಿ ಕಳೆದ ತಿಂಗಳು ಕೊರೊನಾ ಲಸಿಕೆ ಪಡೆದಿದ್ರು ಎಂಬ ಮಾಹಿತಿ ಸಿಕ್ಕಿದೆ. ಲಸಿಕೆಯ ಪಡೆದ ಬಳಿಕ ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಪುತ್ರನ ಜೊತೆ ಇಳಕಲ್ ನಗರದ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ತನಗೆ ಕೊರೊನಾ ಇದೆಯಾ ಎಂಬ ಅನುಮಾನ ಹಾಗೂ ಆತಂಕದಲ್ಲೇ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದಾರೆ. ಆಗ ಪಾಸಿಟಿವ್ ಇದೆ ಎನ್ನುವ ಆತಂಕದಲ್ಲಿ ಮನೆಯತ್ತ ತೆರಳಿದ್ದು ಮನೆ ತಲುಪುತ್ತಲೇ ಕುಸಿದು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಕೊವಿಡ್ ನಿಯಮಾವಳಿ ಅನ್ವಯ ಅಂತ್ಯಸಂಸ್ಕಾರ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮ ಇನ್ನು ಬಾಗಲಕೋಟೆಯಲ್ಲಿ ನಿನ್ನೆ 97 ಜನರಲ್ಲಿ ಹೊಸದಾಗಿ ಕೊರೊನಾ ಪತ್ತೆಯಾಗಿತ್ತು. ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಏರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೊಂಕಿತರಿಗೆ ತೊಂದರೆಯಾಗದಂತೆ ಜಿಲ್ಲಾಸ್ಪತ್ರೆಯಲ್ಲಿ ಸದ್ಯ ಒಟ್ಟು 350 ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಅದರಲ್ಲಿ 250 ಬೆಡ್ಗಳಿಗೆ ಸೆಂಟ್ರಲ್ ಆಕ್ಸಿಜನ್ ಸೌಲಭ್ಯವಿದೆ. 40 ಐಸಿಯು ಬೆಡ್ ವ್ಯವಸ್ಥೆ. 31 ವೆಂಟಿಲೇಟರ್ ಇವೆ. ಕೊರೊನಾ ಸೋಂಕಿತರಿಗೆ ಅಂತಾನೆ ಆಸ್ಪತ್ರೆಯ ಎರಡನೇ ಪ್ಲೋರ್ನಲ್ಲಿ 70 ರಿಂದ 100 ಹಾಸಿಗೆ ಕಾಯ್ದಿರಿಸಿಕೊಂಡಿದ್ದೇವೆ. ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಮೊದಲ ಹಾಗೂ ನೆಲ ಮಹಡಿಯನ್ನು ಕೊವಿಡ್ಗೆ ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿದೆ ಎಂದು ಜಿಲ್ಲಾಸ್ಪತ್ರೆ ಸರ್ಜನ್ ಪ್ರಕಾಶ್ ಬಿರಾದಾರ ತಿಳಿಸಿದ್ದಾರೆ.
ಬನಶಂಕರಿ ದೇಗುಲ ಕ್ಲೋಸ್ ಇನ್ನು ಜಿಲ್ಲಾಡಳಿತದ ಸೂಚನೆಯ ಮೇರೆಗೆ ಮೇ 15ರವರೆಗೆ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಐತಿಹಾಸಿಕ ಬನಶಂಕರಿ ದೇಗುಲ ಕ್ಲೋಸ್ ಆಗಿರಲಿದೆ. ದೇಗುಲದ ಮುಖ್ಯ ದ್ವಾರಕ್ಕೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ. ನಾಡಿನ ಶಕ್ತಿ ಪೀಠಗಳಲ್ಲೊಂದಾಗಿರುವ ಬಾದಾಮಿ ಬನಶಂಕರಿ ದೇಗುಲ ಮೇ 15ವರೆಗೆ ಬಂದ್ ಆಗಿರುತ್ತೆ. ಹೀಗಾಗಿ ದೇಗುಲ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಜೊತೆಗೆ ಕೂಡಲಸಂಗಮ, ಸಂಗಮನಾಥ್ ದೇಗುಲ, ತುಳಸಿಗೇರಿ ಆಂಜನೇಯ ದೇಗುಲ, ಮುಚಖಂಡಿ ವೀರಭದ್ರೇಶ್ವರ ದೇಗುಲ ಸೇರಿದಂತೆ ಪ್ರಮುಖ ದೇಗುಲಗಳು ಬಂದ್ ಆಗಿವೆ.
ಇದನ್ನೂ ಓದಿ: ಶಾಸಕ ಡಾ.ಅಜಯ್ ಸಿಂಗ್, ಸಹೋದರ ವಿಜಯ್ ಸಿಂಗ್ಗೆ ಕೊರೊನಾ ಪಾಸಿಟಿವ್, ಬೆಂಗಳೂರಿನಲ್ಲಿ ಚಿಕಿತ್ಸೆ