AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಮಾರ್ಗಸೂಚಿ ಬಿಡುಗಡೆ, ಅಗತ್ಯ ಸೇವೆ ಹೊರತುಪಡಿಸಿ ಎಲ್ಲ ಬಂದ್: ಕರ್ನಾಟಕ ಆಘೋಷಿತ ಲಾಕ್​ಡೌನ್

ಬೆಂಗಳೂರಿನ ಚಿಕ್ಕಪೇಟೆ, ಮೆಜೆಸ್ಟಿಕ್,ಮೈಸೂರು ದಾವಣಗೆರೆ ಮಂಡ್ಯ ಸೇರಿದಂತೆ ಹಲವೆಡೆ ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಬಂದ್‌ ಮಾಡಲಾಗುತ್ತಿದೆ.  ವಾರಾಂತ್ಯದ ಕರ್ಫ್ಯೂ ನಾಳೆ ಸಂಜೆಯಿಂದ ಜಾರಿಗೆ ಬರಲಿದ್ದರೂ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಬಟ್ಟೆ ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ.

ಹೊಸ ಮಾರ್ಗಸೂಚಿ ಬಿಡುಗಡೆ, ಅಗತ್ಯ ಸೇವೆ ಹೊರತುಪಡಿಸಿ ಎಲ್ಲ ಬಂದ್: ಕರ್ನಾಟಕ ಆಘೋಷಿತ ಲಾಕ್​ಡೌನ್
ಬಿ ಎಸ್​ ಯಡಿಯೂರಪ್ಪ ರಾಜೀನಾಮೆ: ಬಿಜೆಪಿ ಸಂಸದೀಯ ಮಂಡಳಿ ಮುಂದಿನ ನಡೆ ಏನು? ಯಾವಾಗ?
ಆಯೇಷಾ ಬಾನು
| Updated By: guruganesh bhat|

Updated on:Apr 22, 2021 | 3:52 PM

Share

ಬೆಂಗಳೂರು: ರಾಜ್ಯ ಸರ್ಕಾರದಿಂದ ಕೊವಿಡ್ 19 ಸೋಂಕು ತಡೆಗೆ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆಯಾಗಿದೆ. ರಾಜ್ಯಾದ್ಯಂತ ವಿವಿಧ ನಗರಗಳಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಬಂದ್‌ ಮಾಡಲಾಗುತ್ತಿದೆ. ಬೆಂಗಳೂರಿನ ಚಿಕ್ಕಪೇಟೆ, ಮೆಜೆಸ್ಟಿಕ್,ಮೈಸೂರು ದಾವಣಗೆರೆ ಮಂಡ್ಯ ಸೇರಿದಂತೆ ಹಲವೆಡೆ ಅಗತ್ಯ ಸೇವೆ ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಬಂದ್‌ ಮಾಡಲಾಗುತ್ತಿದೆ.  ವಾರಾಂತ್ಯದ ಕರ್ಫ್ಯೂ ನಾಳೆ ಸಂಜೆಯಿಂದ ಜಾರಿಗೆ ಬರಲಿದ್ದರೂ ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಬಟ್ಟೆ ಅಂಗಡಿಗಳನ್ನು ಪೊಲೀಸರು ಮುಚ್ಚಿಸುತ್ತಿದ್ದಾರೆ.

ಮೇ 4ರವರೆಗೆ ಬಟ್ಟೆ ಅಂಗಡಿ ತೆರೆಯದಂತೆ ಸೂಚಿಸಿದ್ದಾರೆ ಎಂದು ಬೆಂಗಳೂರಿನ ಚಿಕ್ಕಪೇಟೆಯ ಬಟ್ಟೆ ಅಂಗಡಿ ವ್ಯಾಪಾರಿ ಹೇಳಿದ್ದಾರೆ. ಅಂಗಡಿ ಮುಚ್ಚಿಸಲು ಆದೇಶ ಬಂದಿದೆ. ಹೀಗಾಗಿ ಬಟ್ಟೆ ಅಂಗಡಿ ಮುಚ್ಚಿಸುತ್ತಿದ್ದೇವೆ. ಅಂಗಡಿ ಮುಚ್ಚದಿದ್ದರೆ ಪೊಲೀಸ್ ಠಾಣೆಗೆ ಬನ್ನಿ ಎಂದು ಪೊಲೀಸರು ತಿಳಿಸಿದ್ದಾರೆ.ಯಾವ ಅಂಗಡಿಗಳಿಗೂ ಇಲ್ಲದ ರೂಲ್ಸ್ ನಮಗೆ ಮಾತ್ರ ಏಕೆ ಎಂದು ಸದ್ಯ ಚಿಕ್ಕಪೇಟೆಯ ಬಟ್ಟೆ ಅಂಗಡಿ ವ್ಯಾಪಾರಿ ಅಳಲು ತೋಡಿಕೊಂಡಿದ್ದಾರೆ. ಬಟ್ಟೆ ಅಂಗಡಿಗಳನ್ನ ಮಾತ್ರ ಯಾಕೆ ಬಂದ್ ಮಾಡಬೇಕು. ಇದ್ದಕ್ಕಿದ್ದಂತೆ ಹೀಗೆ ಹೇಳಿದರೆ ಏನು ಮಾಡುವುದು ಎಂದು ಅವೆನ್ಯೂ ರಸ್ತೆಯ ಬಟ್ಟೆ ಮಾರಾಟ ಮಾಡುವ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮೇ 4ರ ವರಗೆ ಅಗತ್ಯ ಸೇವೆಗಳನ್ನ ಬಿಟ್ಟು ಉಳಿದೆಲ್ಲ ಅಂಗಡಿಗಳು ಬಂದ್ ಕೊರೊನಾ ಎರಡನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕೋವಿಡ್ ಹೆಚ್ಚಳವಾಗುತ್ತಿರುವ ಕಾರಣ ಮೇ 4ರ ವರಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವಂತೆ ವ್ಯಾಪಾರಿಗಳಿಗೆ ಪೊಲೀಸ್ ಇಲಾಖೆಯಿಂದ ಸೂಚನೆ ನೀಡಲಾಗಿದೆ ಎಂದು ಡಿಐಪಿ ಪ್ರಕಾಶ್ ಗೌಡ ಹೇಳಿಕೆ ನೀಡಿದ್ದಾರೆ.

ಶನಿವಾರ -ಭಾನುವಾರ ಎರಡು ದಿನಗಳು ಮಾತ್ರ ವೀಕೆಂಡ್ ಕರ್ಫ್ಯೂ. ಮೆಡಿಕಲ್, ಮಾಂಸದಂಗಡಿ, ತರಕಾರಿ, ಹಣ್ಣು ಖರೀದಿಸುವವರಿಗೆ ಮಾತ್ರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಕಾಲಾವಕಾಶ. ಮಾಂಸ ಮಾರಾಟಗಾರರು ಅಗತ್ಯಕ್ಕೂ ಹೆಚ್ಚು ಮಾಂಸ ಮಾರಾಟಕ್ಕೆ ಮುಂದಾಗಬಾರದು. ಕೇವಲ ನಿಗದಿತ ಸಮಯಕ್ಕಾಗುವಷ್ಟು ಮಾಂಸ ಮಾರಾಟಕ್ಕೆ ಮುಂದಾಗಿ. ಅನಗತ್ಯ ಮಾಂಸ ಮಾರಾಟ ಮಾಡುವ ಮೂಲಕ ನಷ್ಟ ಅನುಭವಿಸದಿರಿ. ಹೇರ್ ಸಲೂನ್ , ಬ್ಯುಟಿ ಪಾರ್ಲರ್​ಗಳು ವೀಕೆಂಡ್ ಕರ್ಫ್ಯೂನಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಬಾರ್. ರೆಸ್ಟೋರೆಂಟ್, ಹೋಟೆಲ್​ಗಳಲ್ಲಿ ಪಾರ್ಸೆಲ್ ಕಡ್ಡಾಯ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: ಲಸಿಕೆ ಹಾಕಿಸಿಕೊಂಡ್ರೂ ಕೊರೊನಾ ಬಿಡಲಿಲ್ಲ; ಒಂದೇ ವಾರಕ್ಕೆ 56 ವರ್ಷದ ಮಹಿಳೆ ಸಾವು

ಹರಿಯಾಣದ ಆಸ್ಪತ್ರೆಯಿಂದ ಕೊರೊನಾ ಲಸಿಕೆಯನ್ನೇ ಎಗರಿಸಿದ ಕಳ್ಳರು; 1,710 ಡೋಸ್ ಲಸಿಕೆ ಹಾಗೂ ಕಡತಗಳು ಕಣ್ಮರೆ

(Bengaluru lockdown update police forcefully closing shops in chickpet over night curfew )

Published On - 3:12 pm, Thu, 22 April 21