AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರದಿಂದ ವಿಳಂಬ; ಪೀಠೋಪಕರಣ ಜಪ್ತಿಗೆ ಬೆಳಗಾವಿಯ ಕೋರ್ಟ್​ನಿಂದ ಆದೇಶ

ಬೆಳಗಾವಿ ಜಿಲ್ಲೆಯ ಮುತಗಾ ಗ್ರಾಮದ 30 ರೈತರಿಂದ 1942ರಲ್ಲಿ 35 ಎಕರೆ ಜಮೀನು ಭೂಸ್ವಾಧೀನ ಮಾಡಲಾಗಿತ್ತು. ಬಳಿಕ ಬಡ್ಡಿ ಸಹಿತ ರೈತರಿಗೆ ಸಿಗಬೇಕಿದ್ದ 5 ಕೋಟಿ ರೂಪಾಯಿಗೂ ಹೆಚ್ಚು ಪರಿಹಾರವನ್ನು ರಾಜ್ಯ ಮತ್ತು ಕೇಂದ್ರ ‌ಸರ್ಕಾರ ನೀಡಬೇಕಿತ್ತು.

ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರದಿಂದ ವಿಳಂಬ; ಪೀಠೋಪಕರಣ ಜಪ್ತಿಗೆ ಬೆಳಗಾವಿಯ ಕೋರ್ಟ್​ನಿಂದ ಆದೇಶ
ಪೀಠೋಪಕರಣ ಜಪ್ತಿಗೆ ಬೆಳಗಾವಿಯ ಕೋರ್ಟ್​ನಿಂದ ಆದೇಶ
preethi shettigar
|

Updated on: Apr 22, 2021 | 3:37 PM

Share

ಬೆಳಗಾವಿ: ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರದಿಂದ ವಿಳಂಬ ಧೋರಣೆ ಹಿನ್ನೆಲೆಯಲ್ಲಿ ಬೆಳಗಾವಿ ಉಪವಿಭಾಗಧಿಕಾರಿ ಕಚೇರಿಯ ಪೀಠೋಪಕರಣ ಜಪ್ತಿಗೆ ಬೆಳಗಾವಿಯ ನಾಲ್ಕನೇ ಹೆಚ್ಚುವರಿ ಜೆಎಂಎಫ್​ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಸಾಂಬ್ರಾ ಬಳಿ ಏರ್ಪೋರ್ಸ್ ಅಧಿಕಾರಿಗಳ ಕ್ವಾರ್ಟರ್ಸ್ ನಿರ್ಮಿಸಲು ಭೂಸ್ವಾಧೀನ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ಸಿಬ್ಬಂದಿ ಎಸಿ ಕಚೇರಿಯ ಪೀಠೋಪಕರಣ, ಕಂಪ್ಯೂಟರ್‌ಗಳನ್ನು ಜಪ್ತಿ ಮಾಡಿದ್ದಾರೆ.

1942ರಲ್ಲಿ ಬೆಳಗಾವಿ ಜಿಲ್ಲೆಯ ಮುತಗಾ ಗ್ರಾಮದ 30 ರೈತರಿಂದ  35 ಎಕರೆ ಜಮೀನು ಭೂಸ್ವಾಧೀನ ಮಾಡಲಾಗಿತ್ತು. ಬಳಿಕ ಬಡ್ಡಿ ಸಹಿತ ರೈತರಿಗೆ ಸಿಗಬೇಕಿದ್ದ 5 ಕೋಟಿ ರೂಪಾಯಿಗೂ ಹೆಚ್ಚು ಪರಿಹಾರವನ್ನು ರಾಜ್ಯ ಮತ್ತು ಕೇಂದ್ರ ‌ಸರ್ಕಾರ ನೀಡಬೇಕಿತ್ತು. ಆದರೆ ಈ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಹೀಗಾಗಿ ವಿಳಂಬ ಧೋರಣೆ ಖಂಡಿಸಿ ರೈತರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೀಗ ಪರಿಹಾರ ನೀಡದ ಎಸಿ ಕಚೇರಿ ಪೀಠೋಪಕರಣ ‌ಜಪ್ತಿಗೆ ನ್ಯಾಯಾಲಯದ ಆದೇಶ ಹೊರಡಿಸಿದ್ದು, ನ್ಯಾಯಾಲಯ ಆದೇಶದಂತೆ ಪೀಠೋಪಕರಣ, ಕಂಪ್ಯೂಟರ್ ಜಪ್ತಿ ಮಾಡಲಾಗಿದೆ.

ನೈಟ್ ಕರ್ಫ್ಯೂ ಉಲ್ಲಂಘಿಸುವ ವಾಹನಗಳ ಜಪ್ತಿಗೆ ಆದೇಶ ಕೊರೊನಾ ಸೋಂಕಿನ ಎರಡನೆಯ ಅಲೆಯಲ್ಲಿ ರಾಜ್ಯ ತತ್ತರಿಸಿದ್ದು, ರಾಜ್ಯ ಸರ್ಕಾರ ತಡವಾಗಿ ಕೆಲ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಬೆಂಗಳೂರಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿದ್ದು ರಾತ್ರಿ ವೇಳೆ ಕೊರೊನಾ ಕರ್ಪ್ಯೂ ಇದೆ. ಒಳ್ಳೆಯ ಮಾತಿನಿಂದ ಕೇಳದೆ ಉಲ್ಲಂಘನೆ ಮಾಡುವವರಿದ್ದಾರೆ. ಅಂಥವರ ಗಾಡಿ ಸೀಸ್ ಮಾಡುವುದಕ್ಕೆ ಹೇಳಿದ್ದೇವೆ ಎಂದಿದ್ದಾರೆ. ಕಲ್ಯಾಣ ಮಂಟಪ, ಸಭಾ ಭವನದ ಮಾಲೀಕರ ಜತೆ ಚರ್ಚೆ ನಡೆಸಿದ್ದೇವೆ. ಅವರಿಂದ ನಿಯಮಗಳ ಉಲ್ಲಂಘನೆ ಆಗದಂತೆ ಸೂಚನೆ ನೀಡಲಾಗಿದೆ. ಮದುವೆಗಳಲ್ಲಿ ನಿಯಮ ಉಲ್ಲಂಘನೆ ಆದ್ರೆ ಕಲ್ಯಾಣ ಮಂಟಪವನ್ನು ಬಂದ್ ಮಾಡಿಸುತ್ತೇವೆ ಎಂದು ಗೃಹ ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.

ಕರ್ಫ್ಯೂ ವೇಳೆ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುವುದು. ಆ್ಯಂಬುಲೆನ್ಸ್‌ಗಳ ಓಡಾಟಕ್ಕೆ ಯಾವುದೇ ಸಮಸ್ಯೆ ಆಗಲ್ಲ. ಕಳೆದ ಬಾರಿಯ ಅನುಭವ ನಮಗಿದೆ. ಪೊಲೀಸರು ಏಕಾಏಕಿ ಲಾಟಿಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಲಾಟಿ ಎತ್ತಿಕೊಳ್ಳುವ ಅವಶ್ಯಕತೆ ಇಲ್ಲವೆಂದು ನಾನೂ ತಿಳಿದಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇವತ್ತು ಬೆಳಗ್ಗೆ ಸಿಎಂ ಯಡಿಯೂರಪ್ಪ ಬೆಂಗಳೂರಿನ ಆಸ್ಪತ್ರೆಗಳ ಬಗ್ಗೆ ಲಭ್ಯವಿರುವ ಬೆಡ್ ಗಳ ಬಗ್ಗೆ, ಅವುಗಳ ಹಂಚಿಕೆ ಬಗ್ಗೆ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ಜೊತೆ ಜಂಟಿಯಾಗಿ ಸಭೆ ನಡೆಸಿ ಅಂತ ಸೂಚಿಸಿದ್ದರು. ಜಂಟಿ ವೀಡಿಯೋ ಕಾನ್ಫರೆನ್ಸ್ ಮಾಡಿದ್ದೇನೆ. ಬಿಬಿಎಂಪಿ ಆಯುಕ್ತರು, ಝೋನಲ್ ಹೆಡ್, ಡಿಸಿಪಿಗಳ ಜೊತೆ ಮಾತನಾಡಿದ್ದೇವೆ ಎಂದು ಅವರು ಹೇಳಿದರು.ನೈಟ್ ಕರ್ಫ್ಯೂ ವೇಳೆ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುವುದು. ಆ್ಯಂಬುಲೆನ್ಸ್‌ಗಳ ಓಡಾಟಕ್ಕೆ ಯಾವುದೇ ಸಮಸ್ಯೆ ಆಗಲ್ಲ. ಕಳೆದ ಬಾರಿಯ ಅನುಭವ ನಮಗಿದೆ. ಪೊಲೀಸರು ಏಕಾಏಕಿ ಲಾಟಿಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಲಾಟಿ ಎತ್ತಿಕೊಳ್ಳುವ ಅವಶ್ಯಕತೆ ಇಲ್ಲವೆಂದು ನಾನೂ ತಿಳಿದಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ:

ನೈಟ್ ಕರ್ಫ್ಯೂ ಉಲ್ಲಂಘಿಸುವ ವಾಹನಗಳ ಜಪ್ತಿಗೆ ಆದೇಶಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇನ್ನೂ ಏನು ಹೇಳಿದರು?

ದೇವನಹಳ್ಳಿ ಏರ್​​ಪೋರ್ಟ್​​ನಲ್ಲಿ ಕಸ್ಟಮರಿ ಕಾರ್ಯಾಚರಣೆ; ದುಬೈನಿಂದ ರಾಡ್, ಸ್ಕ್ರೂನಲ್ಲಿ ತಂದಿದ್ದ 360 ಗ್ರಾಂ ಚಿನ್ನ ಜಪ್ತಿ

(Belagavi court orders to sieze furnitures as it was failed to compensate people who lost their land)