AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಟ್ ಕರ್ಫ್ಯೂ ಉಲ್ಲಂಘಿಸುವ ವಾಹನಗಳ ಜಪ್ತಿಗೆ ಆದೇಶಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇನ್ನೂ ಏನು ಹೇಳಿದರು?

ಖಾಸಗಿ ಆಸ್ಪತ್ರೆಗಳು 7 ಸಾವಿರ ಬೆಡ್‌ಗಳನ್ನು ನೀಡಿವೆ. ನಗರದಲ್ಲಿ ಇನ್ನೂ 4 ಸಾವಿರ ಬೆಡ್‌ಗಳನ್ನು ನೀಡಬೇಕಾಗಿದೆ. ಈಗಾಗಲೇ ಹಂಚಿಕೆ ಮಾಡಿದ ಬೆಡ್‌ಗಳ ಬಗ್ಗೆ ಪರಿಶೀಲನೆ ಮಾಡಿ ಬೆಡ್ ಸಮಸ್ಯೆ ಬಗೆಹರಿಸಲಾಗುವುದು. ಬಿಬಿಎಂಪಿಯ 8 ಜಂಟಿ ಆಯುಕ್ತರು, ಡಿಸಿಪಿಗಳ ವ್ಯವಸ್ಥೆ ಮಾಡಲಾಗಿದ್ದು, ಅವರುಗಳು ಆಯಾ ವಲಯದಲ್ಲಿ ಬೆಡ್ ವ್ಯವಸ್ಥೆ ನೋಡಿಕೊಳ್ಳುತ್ತಾರೆ.. ಗೃಹ ಸಚಿವ ಬಸವರಾಜ ಬೊಮ್ಮಾಯಿ

ನೈಟ್ ಕರ್ಫ್ಯೂ ಉಲ್ಲಂಘಿಸುವ ವಾಹನಗಳ ಜಪ್ತಿಗೆ ಆದೇಶಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇನ್ನೂ ಏನು ಹೇಳಿದರು?
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
ಸಾಧು ಶ್ರೀನಾಥ್​
|

Updated on:Apr 22, 2021 | 3:43 PM

Share

ಬೆಂಗಳೂರು: ಕೊರೊನಾ ಸೋಂಕಿನ ಎರಡನೆಯ ಅಲೆಯಲ್ಲಿ ರಾಜ್ಯ ತತ್ತರಿಸಿದ್ದು, ರಾಜ್ಯ ಸರ್ಕಾರ ತಡವಾಗಿ ಕೆಲ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಈ ಕುರಿತು ಬೆಂಗಳೂರಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿದ್ದು ರಾತ್ರಿ ವೇಳೆ ಕೊರೊನಾ ಕರ್ಪ್ಯೂ ಇದೆ. ಒಳ್ಳೆಯ ಮಾತಿನಿಂದ ಕೇಳದೆ ಉಲ್ಲಂಘನೆ ಮಾಡುವವರಿದ್ದಾರೆ. ಅಂಥವರ ಗಾಡಿ ಸೀಸ್ ಮಾಡುವುದಕ್ಕೆ ಹೇಳಿದ್ದೇವೆ ಎಂದಿದ್ದಾರೆ. ಕಲ್ಯಾಣ ಮಂಟಪ, ಸಭಾ ಭವನದ ಮಾಲೀಕರ ಜತೆ ಚರ್ಚೆ ನಡೆಸಿದ್ದೇವೆ. ಅವರಿಂದ ನಿಯಮಗಳ ಉಲ್ಲಂಘನೆ ಆಗದಂತೆ ಸೂಚನೆ ನೀಡಲಾಗಿದೆ. ಮದುವೆಗಳಲ್ಲಿ ನಿಯಮ ಉಲ್ಲಂಘನೆ ಆದ್ರೆ ಕಲ್ಯಾಣ ಮಂಟಪವನ್ನು ಬಂದ್ ಮಾಡಿಸುತ್ತೇವೆ ಎಂದು ಗೃಹ ಸಚಿವ ಬೊಮ್ಮಾಯಿ ತಿಳಿಸಿದ್ದಾರೆ.

ಕರ್ಫ್ಯೂ ವೇಳೆ ಕಟ್ಟುನಿಟ್ಟಿನ ನಿಯಮ ಪಾಲಿಸಲಾಗುವುದು. ಆ್ಯಂಬುಲೆನ್ಸ್‌ಗಳ ಓಡಾಟಕ್ಕೆ ಯಾವುದೇ ಸಮಸ್ಯೆ ಆಗಲ್ಲ. ಕಳೆದ ಬಾರಿಯ ಅನುಭವ ನಮಗಿದೆ. ಪೊಲೀಸರು ಏಕಾಏಕಿ ಲಾಟಿಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಲಾಟಿ ಎತ್ತಿಕೊಳ್ಳುವ ಅವಶ್ಯಕತೆ ಇಲ್ಲವೆಂದು ನಾನೂ ತಿಳಿದಿದ್ದೇನೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇವತ್ತು ಬೆಳಗ್ಗೆ ಸಿಎಂ ಯಡಿಯೂರಪ್ಪ ಬೆಂಗಳೂರಿನ ಆಸ್ಪತ್ರೆಗಳ ಬಗ್ಗೆ ಲಭ್ಯವಿರುವ ಬೆಡ್ ಗಳ ಬಗ್ಗೆ, ಅವುಗಳ ಹಂಚಿಕೆ ಬಗ್ಗೆ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ಜೊತೆ ಜಂಟಿಯಾಗಿ ಸಭೆ ನಡೆಸಿ ಅಂತ ಸೂಚಿಸಿದ್ದರು. ಜಂಟಿ ವೀಡಿಯೋ ಕಾನ್ಫರೆನ್ಸ್ ಮಾಡಿದ್ದೇನೆ. ಬಿಬಿಎಂಪಿ ಆಯುಕ್ತರು, ಝೋನಲ್ ಹೆಡ್, ಡಿಸಿಪಿಗಳ ಜೊತೆ ಮಾತನಾಡಿದ್ದೇವೆ ಎಂದು ಅವರು ಹೇಳಿದರು.

ಖಾಸಗಿ ಆಸ್ಪತ್ರೆಗಳು 7 ಸಾವಿರ ಬೆಡ್‌ಗಳನ್ನು ನೀಡಿವೆ. ನಗರದಲ್ಲಿ ಇನ್ನೂ 4 ಸಾವಿರ ಬೆಡ್‌ಗಳನ್ನು ನೀಡಬೇಕಾಗಿದೆ. ಈಗಾಗಲೇ ಹಂಚಿಕೆ ಮಾಡಿದ ಬೆಡ್‌ಗಳ ಬಗ್ಗೆ ಪರಿಶೀಲನೆ ಮಾಡಿ ಬೆಡ್ ಸಮಸ್ಯೆ ಬಗೆಹರಿಸಲಾಗುವುದು. ಬಿಬಿಎಂಪಿಯ 8 ಜಂಟಿ ಆಯುಕ್ತರು, ಡಿಸಿಪಿಗಳ ವ್ಯವಸ್ಥೆ ಮಾಡಲಾಗಿದ್ದು, ಅವರುಗಳು ಆಯಾ ವಲಯದಲ್ಲಿ ಬೆಡ್ ವ್ಯವಸ್ಥೆ ನೋಡಿಕೊಳ್ಳುತ್ತಾರೆ. ಎಲ್ಲ ಡಿಸಿಪಿಗಳು ಇಂದು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸ್ತಾರೆ. ಇಂದು ಸಂಜೆ ಅಥವಾ ರಾತ್ರಿಯೊಳಗೆ ಬೆಡ್ ಪಡೆಯುತ್ತೇವೆ. ಖಾಸಗಿ ಆಸ್ಪತ್ರೆಗಳು ನೀಡಬೇಕಾದ ಬೆಡ್‌ಗಳನ್ನ ಪಡೆಯುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿವರಿಸಿದ್ದಾರೆ.

home minister basavaraj bommai acts tough on coronavirus guidelines

ಬಿಬಿಎಂಪಿಯ 8 ಜಂಟಿ ಆಯುಕ್ತರ ವ್ಯವಸ್ಥೆ ಮಾಡಲಾಗಿದ್ದು, ಅವರು ಆಯಾ ವಲಯದಲ್ಲಿ ಬೆಡ್ ವ್ಯವಸ್ಥೆ ನೋಡಿಕೊಳ್ಳುತ್ತಾರೆ: ಗೃಹ ಸಚಿವ ಬಸವರಾಜ ಬೊಮ್ಮಾಯಿ

ಎಂಟು ಝೋನ್ ಗಳಲ್ಲಿ ವಿಭಾಗಿಸಲಾಗಿದೆ. ಜಂಟಿ ಇನಸ್ಪೆಕ್ಷನ್ ಮಾಡ್ತೇವೆ. 7೦೦೦ ಬೆಡ್ ಗಳು ಲಭ್ಯವಾಗಿವೆ, ಇನ್ನು 4೦೦೦ ಬೆಡ್ ಗಳು ಲಭ್ಯವಾಗಬೇಕು. ಇದರ ಸತ್ಯಾಸತ್ಯತೆ ತಿಳಿದುಕೊಂಡು ಬೆಡ್ ಗಳನ್ನು ಹಂಚಿಕೆ ಬಗೆಹರಿಸುತ್ತೇವೆ. ಎಂಟು ಮಂದಿ ಜಾಯಿಂಟ್ ಕಮಿಷನರ್ ಹಾಗೂ ಎಂಟು ಡಿಸಿಪಿಗಳು ಅವರವರ ವಲಯಗಳ ಆಸ್ಪತ್ರೆಗಳ ಬೆಡ್ ವ್ಯವಸ್ಥೆ ನೋಡಿಕೊಳ್ಳುವುದು. ಜನಸಂದಣಿ ಜಾಸ್ತಿ ಆಗಿ ಕೆಲ ಆಸ್ಪತ್ರೆ ಲಾ ಆ್ಯಂಡ್ ಆರ್ಡರ್ ಮೆಂಟೇನ್ ಮಾಡಬೇಕು. ಅಂಬ್ಯುಲೆನ್ಸ್ ಗೆ ಹಾದಿ ಕ್ಲಿಯರ್ ಮಾಡಿಕೊಡುವುದು.

ಜನರಲ್ ಬೆಡ್ ಗಿಂತ ಆಕ್ಸಿಜನ್ ಬೆಡ್ ಒದಗಿಸಿಕೊಡುವುದು ಎಂದು ಸಚಿವ ಬೊಮ್ಮಾಯಿ ಸೂಚಿಸಿದ್ದಾರೆ. ಈಗ ಎಲ್ಲ ಡಿಸಿಪಿಗಳು ಸಭೆಯನ್ನು ಮಾಡ್ತಾರೆ. ಡಿಸಿಪಿಗಳು IAS ಅಧಿಕಾರಿಗಳ ಸಂಪರ್ಕದಲ್ಲಿರಬೇಕು. 3 ಗಂಟೆಗೆ ಎಲ್ಲ ಆಸ್ಪತ್ರೆ ವಿಸಿಟ್ ಮಾಡ್ತಾರೆ. ಸಂಜೆ ಅಥವಾ ರಾತ್ರಿ ವೇಳೆಗೇ ಆಗಲಿ ಎಷ್ಟೇ ಹೊತ್ತಾಗಲಿ 4೦೦೦ ಬೆಡ್ ಗಳನ್ನು ಪಡೆದುಕೊಳ್ತೇವೆ ಎಂದು ಅವರು ಸ್ಪಷ್ಟಪಡಿಸಿದರು. (home minister basavaraj bommai acts tough on covid 19 guidelines as per cm bs yediyurappa instructions)

Published On - 1:58 pm, Thu, 22 April 21