ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಗುಂಡಿಮಾಳ ಗ್ರಾಮದಲ್ಲಿ ಮನೆಯ ಶೌಚ ಗುಂಡಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ರಾಜಶೇಖರ ಮೂರ್ತಿ ಎಂಬುವವರ ಶವ ಶೌಚ ಗುಂಡಿಯಲ್ಲಿ ಪತ್ತೆಯಾಗಿದೆ. ಕಳೆದ ಗುರುವಾರ ರಾಜಶೇಖರ ಮೂರ್ತಿ ನಾಪತ್ತೆಯಾಗಿದ್ದರು. ಮೃತನ ತಂದೆ ಮಹದೇವಸ್ವಾಮಿ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಮನೆಯ ಶೌಚ ಗುಂಡಿಯಲ್ಲೇ ಶವ ಪತ್ತೆಯಾಗಿದೆ.
42 ವರ್ಷದ ರಾಜಶೇಖರ ಮೂರ್ತಿ ಕಳೆದ ಗುರುವಾರ ನಾಪತ್ತೆಯಾಗಿದ್ದರು. ಈ ಬಗ್ಗೆ ರಾಜಶೇಖರ ತಂದೆ ದೂರು ನೀಡಿದ್ದರು. ಸೋಮವಾರ ಸಂಜೆಯ ವೇಳೆಗೆ ಮನೆಯ ಶೌಚಾಲಯದ ಕಡೆಯಿಂದ ದುರ್ವಾಸನೆ ಬಂದಿದೆ. ಪೊಲೀಸರು ಪರಿಶೀಲನೆ ಮಾಡಿದ ವೇಳೆ ರಾಜಶೇಖರ ಮೂರ್ತಿಯ ಶವ ಪತ್ತೆಯಾಗಿದೆ. ರಾಜಶೇಖರ ಮೂರ್ತಿಯ ಸಾವಿನ ಹಿಂದೆ ಆತನ ಪತ್ನಿಯ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಮೃತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದಂಪತಿ ನಡುವೆ ಜಗಳ, ಪತಿ ಕೊಲೆಯಲ್ಲಿ ಅಂತ್ಯ
ಮೈಸೂರು: ಗಂಡ ಹೆಂಡತಿ ನಡುವಿನ ಜಗಳ ಪತಿ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಕೂರ್ಗಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಕೆಂಪ ಶೆಟ್ಟಿ(40) ಕೊಲೆಯಾದ ವ್ಯಕ್ತಿ. ಪತ್ನಿಯ ತಮ್ಮ ಕೆಂಡಗಣ್ಣ ಶೆಟ್ಟಿ ಕೊಲೆ ಮಾಡಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 10 ವರ್ಷದ ಹಿಂದೆ ಕೆಂಪ ಶೆಟ್ಟಿ ಶಶಿರೇಖಾಳನ್ನು ವಿವಾಹವಾಗಿದ್ದ.
ಪ್ರತಿದಿನ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು. ಸಾಕಷ್ಟು ಬಾರಿ ರಾಜಿ ಪಂಚಾಯತಿ ನಡೆದಿತ್ತು. ಆದರೂ ಗಂಡ ಹೆಂಡತಿ ಜಗಳ ಮುಂದುವರಿದಿತ್ತು. ಇದರಿಂದ ಕೆಂಡಗಣ್ಣ ಶೆಟ್ಟಿ ಚಾಕುವಿನಿಂದ ಇರಿದು ಭಾವನನ್ನು ಕೊಲೆ ಮಾಡಿದ್ದಾನೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ
ಪೊಲೀಸ್ ತಪಾಸಣೆ ವೇಳೆ ಗೂಡ್ಸ್ ಗಾಡಿ ಡಿಕ್ಕಿ; ತಾಯಿಯ ಎದುರೇ ಯುವಕನ ಸಾವು: ಪೊಲೀಸ್ ಚೆಕ್ ಪಾಯಿಂಟ್ ಧ್ವಂಸ
ಕಣ್ಮುಚ್ಚಿ ಬಿಡುವಷ್ಟರಲ್ಲಿ ಭೀಕರ ಅಪಘಾತ; ಪ್ರಯಾಣಿಕ ಸ್ಥಳದಲ್ಲೇ ಸಾವು
(Chamarajanagar man dead body found in toilet)