ಎಚ್ ವಿಶ್ವನಾಥ್‌ಗೆ ಅರ್ಚಕರಿಂದ ನಿಂಬೆಹಣ್ಣಿನ ಅಭಯ!

|

Updated on: Nov 18, 2019 | 11:16 AM

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನರ್ಹ ಶಾಸಕ ಎ ಎಚ್​ ವಿಶ್ವನಾಥ್‌ ಅವರಿಂದು ನಾಮಪತ್ರ ಸಲ್ಲಿಕೆಗೂ ಮುನ್ನ ಕೆಂಡಗಣ್ಣ ಸ್ವಾಮಿ ಗದ್ದುಗೆ ತೆರಳಿ ಪೂಜೆ ಸಲ್ಲಿಸಿದರು. ಅರ್ಚಕರಿಂದ ನಿಂಬೆಹಣ್ಣಿನ ಅಭಯ: ಪೂಜೆ ನೆರವೇರಿಸಿದ ವಿಶ್ವನಾಥ್‌ಗೆ ಅರ್ಚಕರು ನಿಂಬೆಹಣ್ಣು ನೀಡಿ, ಅಭಯ ಸೂಚಿಸಿದರು. ಆ ವೇಳೆ, ಮಂಗಳಾರತಿ ತಟ್ಟೆಗೆ ವಿಶ್ವನಾಥ್ ಹಣ ಹಾಕಿದರು. ನಂತರ ಮಂಗಳಾರತಿ ತಟ್ಟೆ ಕೆಳಗೂ ವಿಶ್ವನಾಥ್ ಹಣ ಕೊಟ್ಟರು. ತದನಂತರ, ಅಲ್ಲಿದ್ದ ಎಲ್ಲಾ ಅರ್ಚಕರಿಗೂ ತಲಾ 200 ರೂಪಾಯಿಯನ್ನು […]

ಎಚ್ ವಿಶ್ವನಾಥ್‌ಗೆ ಅರ್ಚಕರಿಂದ ನಿಂಬೆಹಣ್ಣಿನ ಅಭಯ!
Follow us on

ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನರ್ಹ ಶಾಸಕ ಎ ಎಚ್​ ವಿಶ್ವನಾಥ್‌ ಅವರಿಂದು ನಾಮಪತ್ರ ಸಲ್ಲಿಕೆಗೂ ಮುನ್ನ ಕೆಂಡಗಣ್ಣ ಸ್ವಾಮಿ ಗದ್ದುಗೆ ತೆರಳಿ ಪೂಜೆ ಸಲ್ಲಿಸಿದರು.

ಅರ್ಚಕರಿಂದ ನಿಂಬೆಹಣ್ಣಿನ ಅಭಯ:
ಪೂಜೆ ನೆರವೇರಿಸಿದ ವಿಶ್ವನಾಥ್‌ಗೆ ಅರ್ಚಕರು ನಿಂಬೆಹಣ್ಣು ನೀಡಿ, ಅಭಯ ಸೂಚಿಸಿದರು. ಆ ವೇಳೆ, ಮಂಗಳಾರತಿ ತಟ್ಟೆಗೆ ವಿಶ್ವನಾಥ್ ಹಣ ಹಾಕಿದರು. ನಂತರ ಮಂಗಳಾರತಿ ತಟ್ಟೆ ಕೆಳಗೂ ವಿಶ್ವನಾಥ್ ಹಣ ಕೊಟ್ಟರು. ತದನಂತರ, ಅಲ್ಲಿದ್ದ ಎಲ್ಲಾ ಅರ್ಚಕರಿಗೂ ತಲಾ 200 ರೂಪಾಯಿಯನ್ನು ವಿಶ್ವನಾಥ್ ನೀಡಿದರು.

ಹಳ್ಳಿಹಕ್ಕಿ ಟೆಂಪಲ್​ ರನ್​!
ಅದಾದ ನಂತರ, ಹುಣಸೂರು ತಾಲ್ಲೂಕಿನ ಹೊಸರಾಮೇನಹಳ್ಳಿಯಲ್ಲಿ ವೀರಾಂಜನೇಯನಿಗೆ ಹಳ್ಳಿಹಕ್ಕಿ ವಿಶ್ವನಾಥ್ ಪೂಜೆ ಸಲ್ಲಿಸಿದರು. ವೀರಾಂಜನೇಯನಿಗೆ ಪೂಜೆ ಸಲ್ಲಿಸಿಸುವ ವೇಳೆ ವಿಶ್ವನಾಥ್ ಗೆ ಸ್ಥಳೀಯ ಬಿಜೆಪಿ ನಾಯಕರು ಸಾಥ್ ನೀಡಿದರು.

Published On - 11:01 am, Mon, 18 November 19