ಚಾಮರಾಜನಗರದಲ್ಲಿ ನಡೆಯಿತು ಬೆಳಗ್ಗೆ ಸತ್ತ ವ್ಯಕ್ತಿಗೆ ಮರುಜೀವ ನೀಡುವ ಬಲಿ ಜಾತ್ರೆ! ಏನಿದರ ವಿಶೇಷತೆ?

| Updated By: sandhya thejappa

Updated on: May 10, 2022 | 8:11 AM

ಸತ್ತವನು ಮತ್ತೆ ಎದ್ದು ಬರುವ ಪವಾಡದ ಜಾತ್ರೆಯ ವಿಶೇಷತೆ ಎಂದರೆ, ರಾತ್ರಿ ವ್ಯಕ್ತಿಯ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ. ಆತನ ಶವವನ್ನು ಊರ ತುಂಬೆಲ್ಲಾ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆ ವೇಳೆ ಜನ ಶವವನ್ನು ಮೇಲೆ ಎಸೆಯುತ್ತಾರೆ.

ಚಾಮರಾಜನಗರದಲ್ಲಿ ನಡೆಯಿತು ಬೆಳಗ್ಗೆ ಸತ್ತ ವ್ಯಕ್ತಿಗೆ ಮರುಜೀವ ನೀಡುವ ಬಲಿ ಜಾತ್ರೆ! ಏನಿದರ ವಿಶೇಷತೆ?
ಜಾತ್ರೆಯಲ್ಲಿ ಸೇರಿದ ಭಕ್ತರು
Follow us on

ಚಾಮರಾಜನಗರ: ಜಾತ್ರೆ (Fair) ಎಂದರೆ ಸಂಭ್ರಮ, ಸಡಗರ. ಸಾಮಾನ್ಯವಾಗಿ ಜಾತ್ರೆ ಅಂದರೆ ದೇವರ (God) ಮೂರ್ತಿಯನ್ನು ಹೊತ್ತು ಉತ್ಸಾಹ ಮಾಡಿ ಪೂಜಾ ವಿಧಿ ವಿಧಾನಗಳನ್ನ ಮಾಡಲಾಗುತ್ತದೆ. ಹಲವೆಡೆ ಪ್ರಾಣಿ ಬಲಿ ಕೂಡಾ ಇರುತ್ತದೆ. ಜಾತ್ರೆ ಎಂದು ನೆನೆದಾಗ ಅಂಗಡಿ ಮುಂಗಟ್ಟು, ಲಕ್ಷಾಂತರ ಜನ, ಆಟದ ಜೋಕಾಲಿಗಳು, ದೇವರ ರಥೋತ್ಸವ ಕಣ್ಣಿನ ಮುಂದೆ ಬಂದು ಹೋಗುತ್ತವೆ. ಇದು ಸರ್ವೆ ಸಾಮಾನ್ಯ. ಆದರೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುವ ಜಾತ್ರೆ ತೀರಾ ಭಿನ್ನವಾಗಿದೆ. ಸತ್ತವನು ಮತ್ತೆ ಎದ್ದು ಬರುವ ಪವಾಡದ ಜಾತ್ರೆ ಜಿಲ್ಲೆಯಲ್ಲಿ ನಡೆಯುತ್ತದೆ.

ಸತ್ತವನು ಮತ್ತೆ ಎದ್ದು ಬರುವ ಪವಾಡದ ಜಾತ್ರೆಯ ವಿಶೇಷತೆ ಎಂದರೆ, ರಾತ್ರಿ ವ್ಯಕ್ತಿಯ ಪ್ರಾಣಪಕ್ಷಿ ಹಾರಿ ಹೋಗಿರುತ್ತದೆ. ಆತನ ಶವವನ್ನು ಊರ ತುಂಬೆಲ್ಲಾ ಮೆರವಣಿಗೆ ಮಾಡಲಾಗುತ್ತದೆ. ಮೆರವಣಿಗೆ ವೇಳೆ ಜನ ಶವವನ್ನು ಮೇಲೆ ಎಸೆಯುತ್ತಾರೆ. ಈ ವೇಳೆ ಬೆಳಗ್ಗೆ ಸತ್ತ ವ್ಯಕ್ತಿಗೆ ಮರುಜೀವ ಬರುತ್ತದೆ. ಇದು ಜನರ ನಂಬಿಕೆ. ಈ ವಿಚಿತ್ರ ಆಚರಣೆಯನ್ನು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕು ಪಾಳ್ಯ ಗ್ರಾಮದಲ್ಲಿ ಆಚರಿಸುತ್ತಾರೆ.

ಸೀಗೆಮಾರಮ್ಮ ಬಲಿ ಹಬ್ಬದಲ್ಲಿ ವಿಶೇಷ ಆಚರಣೆ:
ಸತತ 9 ಗಂಟೆಗಳ ಕಾಲ ಆತನ ಉಸಿರಾಟ ನಿಂತು‌ ಹೋಗಿರುತ್ತದೆ. ಆತ ದೇವರಿಗೆ ಬಲಿಯಾಗಿರುತ್ತಾನೆ ಎಂಬ  ನಂಬಿಕೆಯಿದೆ. ಸೀಗಮಾರಮ್ಮ ಬಲಿ ಹಬ್ಬ ಸುಮಾರು 19 ವರ್ಷಗಳ ಬಳಿಕ ನಡೆದಿದೆ. ಗ್ರಾಮದ ಎಲ್ಲಾ‌ ಸಮುದಾಯಗಳು ಒಟ್ಟಿಗೆ ಸೇರಿ ಆಚರಣೆ ಮಾಡಿದ್ದಾರೆ. ಇನ್ನು ಬಲಿ ಬೀಳುವ ವ್ಯಕ್ತಿಯ ಎದೆ ಮೇಲೆ ದೇಗುಲದ ಅರ್ಚಕ ಕಾಲಿಡುತ್ತಾರೆ. ಮಧ್ಯೆ ರಾತ್ರಿ 12 ಗಂಟೆ ವೇಳೆಗೆ ಸೀಗಮಾರಮ್ಮ ದೇವತೆ ಮೈಮೇಲೆ ಬಂದು ಅರ್ಚಕ  ಕಾಲಿಟ್ಟರೇ ಪ್ರಾಣ ಹೋಗುತ್ತೆ ಎಂಬ ನಂಬಿಕೆ. ಪ್ರಾಣ ಹೋಗಿ ನಿಷ್ಕ್ರಿಯವಾದ ವ್ಯಕ್ತಿಯನ್ನು ಬಲಿ ಪೀಠಕ್ಕೆ ತೆಗೆದುಕೊಂಡು ಹೋಗುತ್ತಾರೆ. ಬಲಿ ಪೀಠದ ಬಳಿ ಸತ್ತ ವ್ಯಕ್ತಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಬೆಳಿಗ್ಗೆ 9 ಗಂಟೆ ವೇಳೆಗೆ ಅರ್ಚಕರಿಂದ ನಿರ್ಜೀವ ವ್ಯಕ್ತಿ ಮೇಲೆ ತೀರ್ಥ ಪ್ರೋಕ್ಷಣೆ ನೆರವೇರುತ್ತದೆ. ಒಳಗೆರೆ ಹುಚ್ಚಮ್ಮ ದೇವತೆ ಅರ್ಚಕರ ಮೈಮೇಲೆ ಬರುತ್ತದೆಯಂತೆ. ತೀರ್ಥ ಪೋಕ್ಷಣೆಯಿಂದ ಸತ್ತ ವ್ಯಕ್ತಿಗೆ ಮರುಜೀವ ಬರುತ್ತದೆ. ಸತ್ತಿದ್ದ ವ್ಯಕ್ತಿಗೆ 11ನೇ ದಿನ ಸಾಂಕೇತಿಕವಾಗಿ ತಿಥಿ ಮಾಡಲಾಗುತ್ತದೆ. ಹೀಗೆ ಬಲಿ ಬೀಳುವ ವ್ಯಕ್ತಿ ಇನ್ನು ಮುಂದೆ ತನ್ನ ಮನೆ ಹೊರತುಪಡಿಸಿ ಬೇರೆಡೆ ಊಟ ತಿಂಡಿ ಮಾಡುವಂತಿಲ್ಲ.

24 ದಿನ ಶುಭಕಾರ್ಯಗಳು ನಡೆಯಲ್ಲ:
ಈ ಸೀಗಮಾರಮ್ಮನ ಹಬ್ಬ 24 ದಿನಗಳ ಕಾಲ ನಡೆಯುತ್ತದೆ. 24 ದಿನಗಳ ಕಾಲ ಗ್ರಾಮದಲ್ಲಿ ಮಾಂಸಹಾರ ಮಾಡಲ್ಲ. ಮದ್ಯಪಾನ ಮಾಡಲ್ಲ, ಮನೆಗಳಲ್ಲಿ ಒಗ್ಗರಣೆ ಹಾಕಲ್ಲ. ಈ ಅವಧಿಯಲ್ಲಿ ಮದುವೆ ಸೇರಿದಂತೆ ಶುಭಕಾರ್ಯಗಳು ನಡೆಯಲ್ಲ. ಈ ಅವಧಿಯಲ್ಲಿ ಯಾರಾದರು ಸತ್ತರೆ ಒಂದೇ ಗಂಟೆ ಅವಧಿಯಲ್ಲಿ ಗ್ರಾಮದಿಂದ ಹೊರಕ್ಕೆ ಶವ ಸಾಗಣೆ ಮಾಡಬೇಕು.

ಇದನ್ನೂ ಓದಿ

Namitha Birthday: ‘ನೀಲಕಂಠ’ ಬೆಡಗಿ ನಮಿತಾ ಜನ್ಮದಿನ: ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಲಿರುವ ಬಹುಭಾಷಾ ನಟಿ

ನ್ಯೂಯಾರ್ಕ್​ನಲ್ಲಿ ಕತ್ರಿನಾ-ವಿಕ್ಕಿ ಕೌಶಲ್​; ವೈರಲ್​ ಆಯ್ತು ವೆಕೇಶನ್ ಫೋಟೋ

Published On - 8:08 am, Tue, 10 May 22