ಚಾಮರಾಜನಗರ: ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಮಾರಾಟ ಜಾಲ ಪತ್ತೆ ಹಚ್ಚಿದ್ದಾರೆ. ಕ್ವಾರಿಗಳಿಗೆ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಮಾಡುತ್ತಿದ್ದ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕೃಷ್ಣ ಗ್ರಾನೈಟ್ ಗೆ ಡಿಸೇಲ್ ಇಳಿಸುವಾಗ ಆಹಾರ ಇಲಾಖೆ ಉಪ ನಿರ್ದೇಶಕ ಯೋಗಾನಂದ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಕರಿಕಲ್ಲು ಕ್ವಾರಿಗಳಿಗೆ ಕಲಬೆರಕೆ ಪೆಟ್ರೋಲಿಯಂ ಉತ್ಪನ್ನ ಸಪ್ಲೈ ಮಾಡುತ್ತಿರುವುದು ಬೆಳಕಿಗೆ ಬಂದಿದೆ. 5,000 ಲೀ. ಡೀಸೆಲ್ ತುಂಬಿದ ಟ್ಯಾಂಕರ್ ಮತ್ತು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.
ತಮಿಳುನಾಡಿನಿಂದ ಚಾಮರಾಜನಗರಕ್ಕೆ ಡೀಸೆಲ್ ಪುರೈಕೆಯಾಗ್ತಿತ್ತು ಎಂದು ತಿಳಿದು ಬಂದಿದ್ದು ಘಟನೆ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ 6 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ.
ಇದನ್ನೂ ಓದಿ: Cheteshwar Pujara: ಆಫ್ರಿಕಾ ವಿರುದ್ಧದ ಅಗ್ನಿಪರೀಕ್ಷೆಗೂ ಮುನ್ನ ಮಹತ್ವದ ಮತುಗಳನ್ನಾಡಿದ ಚೇತೇಶ್ವರ್ ಪೂಜಾರ