ಸಾಲ ವಸೂಲಿ ಮಾಡುವ ವೇಳೆ ಅವಾಚ್ಯ ಶಬ್ಧದಿಂದ ನಿಂದಿಸಿದ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಹಾಕಿದ ಕುಡುಕ

ಕೊಳ್ಳೇಗಾಲದ ಚೆನ್ನಿಪುರದೊಡ್ಡಿ ಗ್ರಾಮದಲ್ಲಿ ಸಾಲ ವಸೂಲಿ ವಿಷಯದಲ್ಲಿ ಜಗಳವಾಗಿ ಉಮೇಶ್ ಎಂಬ ವ್ಯಕ್ತಿಯನ್ನು ಆತನಸಂಬಂಧಿ ಸ್ವಾಮಿಗೌಡ ಕೊಚ್ಚಿ ಕೊಲೆ ಮಾಡಿದ್ದಾನೆ. ಸಾಲ ವಾಪಸ್ ಕೇಳಿದ್ದಕ್ಕೆ ರೊಚ್ಚಿಗೆದ್ದು ಈ ಕೃತ್ಯ ಎಸಗಿದ್ದಾನೆ. ಚಾಮರಾಜನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವೈಯಕ್ತಿಕ ದ್ವೇಷದ ಸಾಧ್ಯತೆಯನ್ನೂ ತನಿಖೆ ನಡೆಸುತ್ತಿದ್ದಾನೆ.

ಸಾಲ ವಸೂಲಿ ಮಾಡುವ ವೇಳೆ ಅವಾಚ್ಯ ಶಬ್ಧದಿಂದ ನಿಂದಿಸಿದ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಹಾಕಿದ ಕುಡುಕ
ಸಾಂದರ್ಭಿಕ ಚಿತ್ರ

Updated on: Dec 30, 2025 | 10:23 PM

ಚಾಮರಾಜನಗರ,ಡಿ.30: ಕೊಟ್ಟ ಸಾಲ ವಸೂಲಿ ಮಾಡುವ ವೇಳೆ ಅವಾಚ್ಯ ಶಬ್ಧದಿಂದ ನಿಂದಿಸಿದ ಎಂದು ವ್ಯಕ್ತಿಯೊಬ್ಬನನ್ನು ಕೊಚ್ಚಿ ಕೊಂದಿರುವ ಘಟನೆ ಚಾಮರಾಜನಗರ (Chamarajanagar) ಕೊಳ್ಳೇಗಾಲ ತಾಲೂಕಿನ ಚೆನ್ನಿಪುರದೊಡ್ಡಿಯಲ್ಲಿ ನಡೆದಿದೆ. ಉಮೇಶ್ ಎಂಬಾತ ತನ್ನ ಸಂಬಂಧಿ ಸ್ವಾಮಿ ಗೌಡ ಎಂಬಾತನಿಗೆ ಸಾಲ ಕೊಟ್ಟಿದ್ದ, ಸ್ವಲ್ಪ ದಿನದ ನಂತರ ಉಮೇಶ್ ಸಾಲವನ್ನು ವಾಪಸ್ಸು ಕೇಳಿದ್ದಾನೆ. ಇದರಿಂದ ರೊಚ್ಚಿಗೆದ್ದು, ಸ್ವಾಮಿ ಗೌಡ ಕುಡಿದ ಅಮಲಿನಲ್ಲಿ ಉಮೇಶ್ ತಲೆ, ಮುಖವನ್ನು ಮಚ್ಚಿನಿಂದ ಕೊಚ್ಚಿ ಹಾಕಿದ್ದಾನೆ. ನಂತರ ಕತ್ತು ಕೊಯ್ದು ಹಾಕಿದ್ದಾನೆ.

ನಂತರ ತೀವ್ರ ಗಾಯಗೊಂಡಿದ್ದ ಉಮೇಶ್​​ನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಚಾಮರಾಜನಗರ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿ ಸ್ವಾಮಿಗೌಡನ್ನನ್ನ ಬಂಧಿಸಿ ತನಿಖೆ ನಡೆಸಿದ್ದಾರೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದು, ಇನ್ನು ಕೊಲೆ ಮಾಡಲು ಪೋತ್ಸಾಹ ನೀಡಿ, ಉಪ್ಪು ಹುಲಿ ಖಾರ ಹಾಕಿದ್ದ ಕೆಂಡಗಣ್ಣ ಎಂಬ ವ್ಯಕ್ತಿಯನ್ನು ಪೊಲೀಸರು ಮನೆಯಲ್ಲಿದ್ದ ಸ್ವಾಮಿಗೌಡನ್ನು ಉಮೇಶ್ ನಿನ್ನನ್ನು ಬೈಯುತ್ತಿದ್ದಾನೆ ಎಂದು ಹೇಳಿ ಕರೆದುಕೊಂಡು ಹೋದ ವ್ಯಕ್ತಿ ಎಂಬ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಯಾಣ ಕಡೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ಬಸ್​​​ ಪಲ್ಟಿ, 12 ವಿದ್ಯಾರ್ಥಿಗಳಿಗೆ ಗಾಯ

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ಸ್ವಾಮಿಗೌಡ ಹಾಗೂ ಉಮೇಶ್ ಮಧ್ಯೆ ದೇವಸ್ಥಾನದ ವಿಚಾರ ಹಾಗೂ ವೈಯಕ್ತಿ ವಿಚಾರವಾಗಿ ಗಲಾಟೆಯಾಗಿದ್ದು, ಇದರಿಂದ ಇಬ್ಬರ ನಡುವೆ ಮತ್ತಷ್ಟು ದ್ವೇಷ ಬೆಳೆದು ಗಲಾಟೆ ತರಾಕಕ್ಕೇರಿ ಕೊಲೆಯಲ್ಲಿ ಅಂತ್ಯಯಾಗಿದೆ ಎನ್ನಲಾಗಿದೆ‌. ಇನ್ನು ಶವವನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಮೃತದೇಹ ನೀಡಿರುವ ಪೊಲೀಸರು ಮುಂದಿನ ತನಿಖೆ ಆರಂಭಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:20 pm, Tue, 30 December 25