ಚಿಕ್ಕಬಳ್ಳಾಪುರ, ಮಾ.15: 2024ರಲ್ಲಿ ಚಿಕ್ಕಬಳ್ಳಾಪುರ(Chikkaballapur) ಜಿಲ್ಲೆಯಲ್ಲಿಯೇ ಬರೊಬ್ಬರಿ 108 ಜನ ಮಹಿಳೆಯರು ಕಾಣೆಯಾಗಿದ್ದು, ಅದರಲ್ಲಿ 24 ಜನ ಮಹಿಳೆಯರು ಇನ್ನೂ ಪತ್ತೆ ಆಗಿಲ್ಲ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ(Karnataka State Commission for Women) ಡಾ.ನಾಗಲಕ್ಷ್ಮೀ ಚೌಧರಿ ಆತಂಕ ವ್ಯಕ್ತಪಡಿಸಿದ್ದಾರೆ. ಇಂದು(ಮಾ.15) ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಮಹಿಳೆಯರು ಕಾಣೆಯಾಗುವುದರ ಹಿಂದೆ ದೊಡ್ಡ ಮಾಫಿಯಾನೇ ಇದೆ ಎಂದಿದ್ದಾರೆ.
ಇನ್ನು ಅಪ್ರಾಪ್ತ ಬಾಲಕಿಯರ ಅತ್ಯಾಚಾರಕ್ಕೆ ಅವರ ಸಂಬಂಧಿ ಪುರುಷರೇ ಕಾರಣರಾಗಿದ್ದಾರೆ. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿ ಮಾಡಿ ಅವರನ್ನು ನರಕಕ್ಕೆ ದೂಡುತ್ತಿದ್ದಾರೆ. 7 ರಿಂದ 8ನೇ ತರಗತಿ ಓದುವಾಗ 7-8 ತಿಂಗಳ ಗರ್ಭಿಣಿಯಾದರೆ ಏನು ಮಾಡುವುದು. ಹೆಣ್ಣುಮಕ್ಕಳ ಮೇಲೆ ತಂದೆ-ತಾಯಿಗಳು ಹೆಚ್ಚಿನ ನಿಗಾ ಇಡಬೇಕು. ಇಲ್ಲದಿದ್ದರೆ ಇಂತಹ ಅನಾಹುತಗಳು ಹೆಚ್ಚೆಚ್ಚು ಆಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ಕಾಬೂಲ್ನ ಶಹರ್-ಇ-ನಾವ್ ಪಾರ್ಕ್ನಲ್ಲಿ ಆಶ್ರಯ ಪಡೆದಿದ್ದ ನೂರಾರು ಮಹಿಳೆಯರು ನಾಪತ್ತೆ; ಕುಟುಂಬಗಳಿಂದ ಹುಡುಕಾಟ
ಇದೇ ವೇಳೆ ಕಾಂಗ್ರೆಸ್ನ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ‘ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಹಕ್ಕುಗಳಿಗೆ ಗೌರವ ಬಂದಿದೆ. ಮಹಿಳೆಯರ ಮೇಲೆ ಹೂಡಿಕೆ ಮಾಡುವುದರಿಂದ ಕುಟುಂಬ, ಸಮಾಜ ಹಾಗೂ ದೇಶದ ಅಭಿವೃದ್ಧಿಯಾಗುತ್ತದೆ. ಜೊತೆಗೆ ಮಹಿಳೆಯರ ಬಳಿ ಹಣವಿದ್ದರೆ ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ಸಿಗುತ್ತದೆ ಎನ್ನುವ ಮೂಲಕ ಗ್ಯಾರಂಟಿ ಯೋಜನೆಗಳ ಲಾಭದ ಕುರಿತು ಹರ್ಷ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ