ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋಗಿ ಯುವಕನೊಬ್ಬ ನೀರು ಪಾಲಾಗಿರುವ ಘಟನೆ ಗುಡಿಬಂಡೆ ತಾಲೂಕು ಹಂಪಸಂದ್ರ ಕೆರೆಯಲ್ಲಿ ಸಂಭವಿಸಿದೆ. 24 ವರ್ಷದ ಯುವಕ ಸಂತೋಷ್ ನಿನ್ನೆ ಸಂಜೆ 6 ಗಂಟೆಗೆ ಕೆರೆಯಲ್ಲಿ ಈಜಲು ಹೋಗಿದ್ದ. ಈ ವೇಳೆ ನೀರು ಪಾಲಾಗಿದ್ದಾನೆ. ಮೂರು ಜನರ ಸ್ನೇಹಿತರೊಂದಿಗೆ ಈಜಾಡಲು ಹೋಗಿದ್ದಾಗ ಈ ಅವಘಡ ನಡೆದಿದೆ. ಸ್ನೇಹಿತರ ಜೊತೆ ಚಾಲೆಂಜ್ ಹಾಕಿ ಸಂತೋಷ್ ಈಜಲು ಹೋಗಿದ್ದ ಎಂಬ ಮಾಹಿತಿ ತಿಳಿದುಬಂದಿದೆ.
ಸಂತೋಷ್, ವಿಜಯ್ ಹಾಗೂ ಪವನ್ ಜೊತೆ ಈಜಾಟದಲ್ಲಿ ಸವಾಲು ಹಾಕಿದ್ದನಂತೆ. ಆದರೆ ಈಜಿ ದಡ ಸೇರಬೇಕಿದ್ದ ಯುವಕ ಕೆರೆ ಪಾಲಾಗಿದ್ದಾನೆ. ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆಗ್ನಿಶಾಮಕ ದಳ ಸಿಬ್ಬಂದಿಯಿಂದ ಸಂತೋಷ್ಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಇನ್ನೂ ದೊರೆಯದ ಮೃತನ ಶವ
ನಿನ್ನೆಯಿಂದ ಸಂತೋಷ್ ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ. ಆದರೆ ಇನ್ನೂ ಮೃತದೇಹ ಪತ್ತೆಯಾಗಿಲ್ಲ. ಕೆರೆಯಲ್ಲಿ ಮಳೆಯ ನೀರು ಕಂಡು ಸ್ನೇಹಿತರ ಜೊತೆ ಸಂತೋಷ್ ನೀರಿಗೆ ಇಳಿದಿದ್ದ.
ಭಾರಿ ಮಳೆ ಅವಾಂತರ
ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗಿದೆ. ಸೂಕ್ತ ಮೋರಿ ವ್ಯವಸ್ಥೆಯಿಲ್ಲದೆ ನೀರು ರಸ್ತೆಗಳಲ್ಲಿ ನಿಂತಿದೆ.
ಇದನ್ನೂ ಓದಿ
ಪೂರ್ವ ಲಡಾಖ್ ಸೇನಾ ಸಂಘರ್ಷ; ಭಾರತ-ಚೀನಾ ನಡುವೆ ಇಂದು 13ನೇ ಸುತ್ತಿನ ಮಾತುಕತೆ
ಧಾರವಾಡದಲ್ಲಿ ಸರಣಿ ಅಪಘಾತ; ಅದೃಷ್ಟವಶಾತ್ ಸ್ಥಳದಲ್ಲಿದ್ದ ಎಲ್ಲರೂ ಬಚಾವ್