ಇಂದಿನಿಂದ ನಂದಿ ಹಿಲ್ಸ್ ಪ್ರವೇಶಕ್ಕೆ ಅನುಮತಿ; ಚುಮು ಚುಮು ಚಳಿ ನಡುವೆ ಬೆಟ್ಟಕ್ಕೆ ಹರಿದು ಬಂದ ಪ್ರವಾಸಿಗರ ದಂಡು

ನಂದಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಭಾರೀ ಮಳೆಗೆ ಕೊಚ್ಚಿ ಹೋಗಿ ಕಳೆದ ಮೂರು ತಿಂಗಳುಗಳಿಂದ ಬಂದ್ ನಂದಿಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು ಆಗಿತ್ತು. ಆದರೆ ಇಂದಿನಿಂದ ನಂದಿಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ಸಿಕ್ಕಿದೆ. ಅನುಮತಿ ಸಿಗುತ್ತಿದ್ದಂತೆ. ಪ್ರವಾಸಿಗರು ಬೆಟ್ಟದತ್ತ ಹರಿದು ಬರುತ್ತಿದೆ. ಪ್ರವಾಸಿಗರು ಇಂದು ಬೆಳಿಗ್ಗೆಯಿಂದ ನಂದಿ ಬೆಟ್ಟದತ್ತ ಮುಖ ಮಾಡಿದ್ದು, ತಂಪಾದ ತಂಗಾಳಿ, ತುಂತುರು ಮಳೆ ಮದ್ಯೆ ಪ್ರವಾಸಿಗರು ಫುಲ್ ಎಂಜಾಯ್ ಮಾಡ್ತಿಡುತ್ತಿದ್ದಾರೆ. ಇನ್ನು ಇಂದಿನಿಂದ ಪ್ರವೇಶಕ್ಕೆ ಅನುಮತಿ ನೀಡಿರುವ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ […]

sandhya thejappa

|

Dec 01, 2021 | 11:27 AM

ನಂದಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಭಾರೀ ಮಳೆಗೆ ಕೊಚ್ಚಿ ಹೋಗಿ ಕಳೆದ ಮೂರು ತಿಂಗಳುಗಳಿಂದ ಬಂದ್ ನಂದಿಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು ಆಗಿತ್ತು. ಆದರೆ ಇಂದಿನಿಂದ ನಂದಿಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ಸಿಕ್ಕಿದೆ. ಅನುಮತಿ ಸಿಗುತ್ತಿದ್ದಂತೆ. ಪ್ರವಾಸಿಗರು ಬೆಟ್ಟದತ್ತ ಹರಿದು ಬರುತ್ತಿದೆ. ಪ್ರವಾಸಿಗರು ಇಂದು ಬೆಳಿಗ್ಗೆಯಿಂದ ನಂದಿ ಬೆಟ್ಟದತ್ತ ಮುಖ ಮಾಡಿದ್ದು, ತಂಪಾದ ತಂಗಾಳಿ, ತುಂತುರು ಮಳೆ ಮದ್ಯೆ ಪ್ರವಾಸಿಗರು ಫುಲ್ ಎಂಜಾಯ್ ಮಾಡ್ತಿಡುತ್ತಿದ್ದಾರೆ.

ಇನ್ನು ಇಂದಿನಿಂದ ಪ್ರವೇಶಕ್ಕೆ ಅನುಮತಿ ನೀಡಿರುವ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಆರ್ ಟಿವಿ9ಗೆ ಮಾಹಿತಿ ನೀಡಿದ್ದಾರೆ. ವೀಕೆಂಡ್​ನಲ್ಲಿ ನಂದಿ ಬೆಟ್ಟದತ್ತ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಶನಿವಾರ ಮತ್ತು ಭಾನುವಾರ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಬೆಟ್ಟದಲ್ಲಿ ಹೋಟೆಲ್, ರೂಮ್​ ಬುಕಿಂಗ್ ಮಾಡಿದವರಿಗೆ ಮಾತ್ರ ಶನಿವಾರ ಭಾನುವಾರ ಅವಕಾಶ ಇದೆ ಅಂತ ಜಿಲ್ಲಾಧಿಕಾರಿ ಲತಾ ಆರ್ ತಿಳಿಸಿದ್ದಾರೆ.

Follow us on

Click on your DTH Provider to Add TV9 Kannada