ಚಿಕ್ಕಬಳ್ಳಾಪುರ, ಜೂ.07: ಭೀಕರ ಅಪಘಾತದಲ್ಲಿ ಕರ್ನಾಟಕ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL)ನ ಇಬ್ಬರು ಸಿಬ್ಬಂದಿ ಮತ್ತು ಬೆಸ್ಕಾಂನ (BESCOM) ಓರ್ವ ಲೈನ್ ಮ್ಯಾನ್ ಸೇರಿ ಮೂವರು ಮೃತಪಟ್ಟಿರುವ ಘಟನೆ ಗೌರಿಬಿದನೂರು (Gauribidanur) ತಾಲೂಕಿನ ವಾಟದಹೊಸಹಳ್ಳಿ ಬಳಿ ಸಂಭವಿಸಿದೆ. ಕೆಪಿಟಿಸಿಎಲ್ ಸಿಬ್ಬಂದಿ ವೇಣಗೋಪಾಲ್ (34) ಹಾಗೂ ಶ್ರೀಧರ್ (35) ಮತ್ತು ಬೆಸ್ಕಾಂನ ಲೈನ್ ಮ್ಯಾನ್ ಮಂಜಪ್ಪ (35) ಮೃತರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಗರಗೇರೆ ಗ್ರಾಮದ ಬಳಿ ಇರುವ ಬೆಸ್ಕಾಂ ಸೇಕ್ಷನ್ ಕಚೇರಿಯಲ್ಲಿ ನಾಲ್ವರು ಲೈನ್ ಮ್ಯಾನ್ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಂದಿನಂತೆ ನಿನ್ನೆ(ಜೂ.06) ರಾತ್ರಿ ಕರ್ತವ್ಯಕ್ಕೆ ಹೋಗಿದ್ದಾರೆ. ಮದ್ಯೆರಾತ್ರಿ ವಿದ್ಯುತ್ ರಿಪೇರಿ ಎಂದು ನಗರಗೇರೆಯಿಂದ ವಾಟದಹೊಸಹಳ್ಳಿ ಗ್ರಾಮಕ್ಕೆ ಹೋಗಿ ವಾಪಸ್ ನಗರಗೇರೆಗೆ ವೇಣುಗೋಪಾಲ್ ಕಾರಿನಲ್ಲಿ ಬರುತ್ತಿದ್ದಾಗ ಪ್ರಯಾಣಿಸುತ್ತಿದ್ದ ಬ್ರೀಜಾ ಕಾರು ನಿಯಂತ್ರಣ ತಪ್ಪಿ, ನಾಲ್ಕು ಜನರಲ್ಲಿ ಶ್ರೀಧರ್, ವೇಣುಗೋಪಾಲ್,
ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಶಿವಕುಮಾರ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:ಚಾಮರಾಜನಗರ: ಎರಡು ಸಾವಿರ ಸಾಲಕ್ಕೆ ನಡೆದೆ ಹೋಯ್ತು ಕೊಲೆ; ಸ್ನೇಹಿತನನ್ನ ಕೊಂದು ಅಪಘಾತದ ಕಥೆ ಕಟ್ಟಿದರು
ಇನ್ನುಈ ಕಾರು ಸಿಬ್ಬಂದಿ ವೇಣುಗೋಪಾಲ್ಗೆ ಸೇರಿದ್ದು, ಆತನೇ ಕಾರನ್ನು ಚಾಲನೆ ಮಾಡುತ್ತಿದ್ದರು. ರಸ್ತೆಯಲ್ಲಿ ತಿರುವು ಇದ್ದರೂ ಅತಿವೇಗವಾಗಿ ಚಲಾಯಿಸಿದ್ದೆ ಘಟನೆಗೆ ಕಾರಣ ಎನ್ನಲಾಗಿದೆ. ಕಾರು ಪಲ್ಟಿಯಾದ ರಭಸಕ್ಕೆ ಕಾರಿನಲ್ಲಿ ಮೃತರಲ್ಲೊಬ್ಬರಾದ ಶ್ರೀಧರ್, ಎದರುಗಡೆ ಇದ್ದ ಮರದಲ್ಲಿ ಹಾರಿ ಹೋಗಿ ರಾತ್ರಿಯಿಡಿ ನೇತಾಡಿ ಕೊನೆಗೆ ಮೃತಪಟ್ಟಿದ್ದಾನೆ. ಬೆಳಿಗ್ಗೆ ದಾರಿಹೋಕರು ಗಮನಿಸಿ ಗೌರಿಬಿದನೂರು ಗ್ರಾಮಾಂತರ ಠಾನೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಕಾರಿನಲ್ಲಿದ್ದ ಶಿವಕುಮಾರ್ ನನ್ನು ಆಸ್ಪತ್ರೆಗ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ನಾಲ್ಕು ಜನ ಬೆಸ್ಕಾಂ ಸಿಬ್ಬಂಧಿಗಳು ರಾತ್ರಿ ಪಾಳಯದಲ್ಲಿ ಕರ್ತವ್ಯದಲ್ಲಿ ಇದ್ದರೂ ಪಾನಮತ್ತರಾಗಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಮದ್ಯದ ಅಮಲಿನಲ್ಲಿ ಕಾರು ಅತಿವೇಗವಾಗಿ ಚಲಾವಣೆ ಮಾಡಿದ ಕಾರಣ ನಿಯಂತ್ರಣ ತಪ್ಪಿ ಅಪಘಾತವಾಗಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇದ್ರಿಂದ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 ಎ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ