ಚಿಕ್ಕಬಳ್ಳಾಫುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಡಾ.ಕೆ ಸುಧಾಕರ್ (Dr. K Sudhakar), ತಮ್ಮ ಬೆಂಬಲಿಗರ ಮೇಲೆ ಹಾಲಿ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಬೆಂಬಲಿಗರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಚಿಕ್ಕಬಳ್ಳಾಪುರ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಎಸ್ಪಿಗೆ ದೂರು ನೀಡಿದ್ದರು. ನಂತರ ಹಾಲಿ ಶಾಸಕ ಪ್ರದೀಪ್ ಈಶ್ವರ್ ಹಾಗೂ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರಿಂದ ಕೆರಳಿ ಕೆಂಡವಾದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಪ್ರದೀಪ್ ಈಶ್ವರ್ ಮಾಜಿ ಸಚಿವ ಸುಧಾಕರ್ ವಿರುದ್ದ ಶನಿವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ಸುಧಾಕರ್ಗೆ ಮನ ಮರ್ಯಾದೆ ಇದೆಯಾ? ನಾನು ಚಿಲ್ಲೆರೆ ರಾಜಕಾರಣ ಮಾಡುತ್ತೇನೆ, ರೌಡಿ ರಾಜಕಾರಣ ಮಾಡುತ್ತೇನೆ ಅಂತ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕ್ಷೇತ್ರದಲ್ಲಿ ಗೊಂಡಾ ರಾಜಕಾರಣ ಯಾರು ಮಾಡಿದ್ದಾರೆ? ನನ್ನ ಅವಧಿಯಲ್ಲಿ ಯಾರಾದ್ರು ಬಾಲ ಬಿಚ್ಚಲಿ ನೋಡೋಣ. ಅಧಿಕಾರ ಇಲ್ಲದಿರುವಾಗಲೇ ಬಾಲ ಕಟ್ ಮಾಡಿದವನು ನಾನು. ನಿಮ್ಮ (ಸುಧಾಕರ್) ಪಾಲೋವರ್ಸ್ಗೆ ಹೇಳಿ ಬಾಲ ಬಿಚ್ಚಿದರೆ ಕಟ್ ಮಾಡುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಡಾ. ಕೆ ಸುಧಾಕರ್ ಇನ್ನು ಮುಂದೆ ಶಾಶ್ವತವಾಗಿ ಮಾಜಿ ಶಾಸಕರಾಗಿಯೇ ಇರಲಿದ್ದಾರೆ. ನಮ್ಮ ಬೆಂಬಲಿಗರು ನಿಮ್ಮ ಬೆಂಬಲಿಗನ ಮೇಲೆ ದೈಹಿಕ, ಮಾನಸಿಕ ಹಲ್ಲೆ ನಡೆಸಿದ್ದಾನೆ ಅಂತ ದೂರು ಕೊಡಿಸಿದ್ದೀರಿ. ಸುಧಾಕರ್ ನಿಮಗೆ ತಾಕತ್ತು ಇದ್ದರೆ ಸಾಕ್ಷಿ ತೊರಿಸಿ. ಎಸ್ಪಿ ಕಚೇರಿಗೆ ನಿಮ್ಮವರನ್ನು ಕರೆದುಕೊಂಡು ಹೋಗಿ ಸುಳ್ಳು ದೂರು ಕೊಡಿಸಿದ್ದೀರಿ. ನಿಮಗೆ ಮಾನ ಮರ್ಯಾದೆ ಇದೆಯಾ ಎಂದು ಪ್ರದೀಪ್ ಈಶ್ವರ್ ಪ್ರಶ್ನೆ ಮಾಡಿದ್ದಾರೆ.
ಸುಧಾಕರ್ ಅವರು, ನಾನು ರಾಜೀನಾಮೆ ಕೊಟ್ಟು ಬಂದು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಲು ಸವಾಲು ಹಾಕಿದ್ದಾರೆ. ನಾನ್ಯಾಕೆ ರಾಜೀನಾಮೆ ಕೊಟ್ಟು ಪಕ್ಷೇತರರಾಗಿ ಬರಬೇಕು. ಈಗ ತಾನೆ ಎರಡು ತಿಂಗಳ ಹಿಂದೆ ಸುಧಾಕರ್ ನನ್ನು ವಿರುದ್ದ ಹೀನಾಯವಾಗಿ ಸೋತಿದ್ದಾರೆ. ಐದು ವರ್ಷ ಆದ ಮೇಲೆ ಬರ್ತಿನಿ ಎದುರಿಸಿ. ಯಾಕೆ ನಿಮಗೆ ಬಿಜೆಪಿಯಲ್ಲೆ ಟಿಕೆಟ್ ಕೊಡಲ್ವಾ? ಇನ್ನು ಮುಂದೆ ನೀವು ಚಿಕ್ಕಬಳ್ಳಾಫುರ ಕ್ಷೇತ್ರದ ಆಸೆ ಬಿಟ್ಟು ಬಿಡಿ. ಬೇರೆ ಕ್ಷೇತ್ರ ಹುಡುಕಿಕೊಳ್ಳಿ ಎಂದು ಟಾಂಗ್ ಕೊಟ್ಟಿದ್ದಾರೆ.
ನನಗೆ ಐದು ಸಾವಿರ ಓಟು ಆದರೂ ದೊರೆಯುತ್ತವೆ. ಸುಧಾಕರ್ ಮುಖ ನೋಡಿ ಐನೂರು ಓಟು ಕೂಡ ಸಿಗಲಾರದು. ಸುಧಾಕರ್ ಹುಟ್ಟೂರಲ್ಲೇ ಅವರಿಗೆ ಗೌರವ, ಮರ್ಯಾದೆ ಇಲ್ಲ ಎಂದು ಪ್ರದೀಪ್ ಈಶ್ವರ್ ವ್ಯಂಗ್ಯವಾಡಿದ್ದಾರೆ.
ನಿವ್ಯಾರೂ ನೋಡಿರದ ಸುಧಾಕರ್ರನ್ನು ನಾನು ನೋಡಿದ್ದೇನೆ. ನೀವು ಯಾರು ಅವರನ್ನು ನಂಬಿಕೊಳ್ಳಬೇಡಿ. ಅವರನ್ನು ನಂಬಿದರೆ ನಿಮಗೆ ಚಿಪ್ಪೇ ಗತಿ. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಅಷ್ಟೆ ಕಥೆ ಎಂದು ಶಾಸಕ ಪ್ರದೀಪ್ ಈಶ್ವರ್ ಮಾಜಿ ಸಚಿವರ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರ ಯಾರಿಗೂ ಶಾಶ್ವತವಲ್ಲ. ಪ್ರದೀಪ್ ಈಶ್ವರ್ ವಿಚಾರದಲ್ಲಿ ಸುಧಾಕರ್ ಏನು ಮಾಡಲೂ ಸಾದ್ಯವಿಲ್ಲ. ಅವರು ಇದೀಗ ಸುಧಾಕರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಯತ್ನಿಸಿದ್ದಾರೆ. ಕಾಂಗ್ರೇಸ್ ಸೇರ್ಪಡೆಯಾಗಲು ಸುಧಾಕರ್ ಸರ್ಕಸ್ ನಡೆಸಿದ್ದಾರೆ. ಈಗಾಗಲೇ ಕಾಂಗ್ರೆಸ್ನ ಒಬ್ಬರು ಧುರಿಣರನ್ನು ಭೇಟಿ ಮಾಡಿದ್ದಾರೆ. ಬೇರೆ ಯಾರೂ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಸುಧಾಕರ್ ಕನಸು ಈಡೇರಲ್ಲ. ಬಿಜೆಪಿಯವರು ಅವರನ್ನು ಪಕ್ಷದಲ್ಲಿ ಇಟ್ಟುಕೊಳ್ಳಲ್ಲ. ಕಾಂಗ್ರೆಸ್ನವರು ಸೇರಿಸಿಕೊಳ್ಳಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಸುಧಾಕರ್ ಕಾಂಗ್ರೆಸ್ನಿಂದ ಲೋಕಸಭೆ ಟಿಕೆಟ್ ಕೇಳಿದ್ದಾರೆ. ಸಂಸದ ಸ್ಥಾನಕ್ಕೆ ಟಿಕೆಟ್ ಹೋಗಲಿ, ಜಿ.ಪಂ ಟಿಕೆಟ್ ಕೂಡ ಅವರಿಗೆ ಕೊಡಲ್ಲ. ಸ್ಥಳೀಯ ಶಾಸಕರು, ಸಚಿವರನ್ನು ಕೇಳದೆ ಹೈಕಮಾಂಡ್ ಸುಧಾಕರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ. ಸುಧಾಕರ್ಗೆ ಮಾಡಲು ಕೆಲಸ ಇಲ್ಲ. ಏನು ಬೇಕಾದರೂ ಮಾಡಲಿ ಎಂದು ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:29 pm, Sat, 29 July 23