ಚಿಕ್ಕಬಳ್ಳಾಪುರ: ಗಂಡ ಹೆಂಡರ ಜಗಳ ಉಂಡು ಮಲಗೋ ತನಕ ಅಂತಾರೆ ಆದ್ರೆ, ಇಲ್ಲೊಂದು ದಂಪತಿಯ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಇಂದು(ಡಿಸೆಂಬರ್ 03) ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆ ಚಿಂತಾಮಣಿ ನಗರದಲ್ಲಿ ನಡೆದಿದ್ದು, ಇದೀಗ ನಾಲ್ಕು ವರ್ಷದ ಮಗು ಮಗು ಅನಾಥರಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮೂಲದ ಸುಮೈರಾ ಸುಲ್ತಾನ್(40) ಹಾಗೂ ಶಿಡ್ಲಘಟ್ಟ ಮೂಲದ ಮುನಿಕೃಷ್ಣ, ಇಂದು(ಶನಿವಾರ)) ನಗರದ ಗ್ರಂಥಲಾಯ ಮುಂದೆ ನಡು ರಸ್ತೆಯಲ್ಲಿ ಇಬ್ಬರು ಜಗಳ ಮಾಡಿಕೊಂಡು ನೂಕಾಟ ತಳ್ಳಾಟ ಮಾಡ್ತಿದ್ರು. ಆಗ ರಸ್ತೆಯಲ್ಲಿ ಲಾರಿಯೊಂದು ಬಂದಿದೆ. ಲಾರಿಯನ್ನು ನೋಡಿದ ಆಕೆಯ ಗಂಡ ಮುನಿಕೃಷ್ಣ, ಉದ್ದೇಶ ಪೂರ್ವಕವಾಗಿಯೆ ಸುಮೈರಾ ಸುಲ್ತಾನ್ ಳನ್ನು ಲಾರಿ ಕೆಳಗೆ ತಳ್ಳಿದ್ದಾನೆ. ಇದ್ರಿಂದ ಮಹಿಳೆ ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದಾಳೆ.
ಇನ್ನೂ ಶಿಡ್ಲಘಟ್ಟ ಮೂಲದ ಸುಮೈರಾ ಸುಲ್ತಾನ್ ಹಾಗೂ ಶಿಡ್ಲಘಟ್ಟ ಮೂಲದ ಮುನಿಕೃಷ್ಣ, ಪರಸ್ಪರ ಅನ್ಯ ಕೋಮಿನವರಾದ್ರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. 8 ವರ್ಷಗಳ ಹಿಂದೆ ಊರು ಬಿಟ್ಟು ಬಂದು, ಚಿಂತಾಮಣಿ ನಗರದದಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸ್ತಿದ್ರು. ದಂಪತಿಗೆ ಬಾಬಾಜಾನ್ ಅನ್ನೊ ನಾಲ್ಕು ವರ್ಷದ ಮಗುವಿದ್ದು ಈಗ ತಾಯಿ ಮಸಣ ಸೇರಿದ್ದು, ತಂದೆ ಜೈಲು ಸೇರಿದ್ದರಿಂದ ಮಗು ಅನಾಥರಾಗಿದೆ.
ರಸ್ತೆಯಲ್ಲಿ ಗಂಡ ಹೆಂಡತಿ ಜಗಳ ಮಾಡುವುದನ್ನು ನೋಡಿದ ಚಾಲಕ ಗಂಗಾಧರ್ ಎಚ್ಚರಿಕೆಯಿಂದಲೇ ಲಾರಿ ಚಾಲನೆ ಮಾಡ್ತಿದ್ದ, ಆದ್ರೆ ಲಾರಿ ಸ್ವಲ್ಪ ಮುಂದೆ ಹೊಗ್ತಿದ್ದಂತೆ ಮುನಿಕೃಷ್ಣ, ತನ್ನ ಹೆಂಡತಿಯನ್ನು ಲಾರಿಯ ಹಿಂಬದಿ ಚಕ್ರಕ್ಕೆ ತಳ್ಳಿದ್ದಾನೆ. ಲಾರಿ ಗಾಲಿ ಮಹಿಳೆಯ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಹೆಂಡತಿಯನ್ನು ಕೊಲೆ ಮಾಡಬೇಕು ಎನ್ನುವ ಉದ್ದೇಶದಿಂದಲೇ ಲಾರಿ ಕೆಳಗೆ ಪತ್ನಿಯನ್ನು ತಳ್ಳಿದ್ದಾನೆ ಎನ್ನಲಾಗಿದೆ.
ಆರೋಪಿ ಮುನಿಕೃಷ್ಣನ ಕೃತ್ಯದಿಂದ ಚಾಲಕ ಗಂಗಾಧರ್ ಭಯ ಬೀತನಾಗಿ ಲಾರಿ ಬಿಟ್ಟು ಓಡಿ ಹೋಗಲು ಯತ್ನಿಸಿದ್ದ, ಆದ್ರೆ ಸಾರ್ವಜನಿಕರೆ ಧೈರ್ಯ ಹೇಳಿ ಸ್ಥಳಕ್ಕೆ ಪೊಲೀಸರು ಬಂದ ಮೇಲೆ ಚಾಲಕ ನಡೆದ ಕೃತ್ಯವನ್ನು ಹೇಳಿದ್ದಾನೆ. ಇದ್ರಿಂದ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರಂಗಸ್ವಾಮಯ್ಯ ಸ್ಥಳಕ್ಕೆ ಭೇಟಿ ನೀಡಿ ಲಾರಿಯನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದ್ರೆ ತಾಯಿ ಸಾವು ತಂದೆ ಜೈಲು ಪಾಲಿನಿಂದ ನಾಲ್ಕು ವರ್ಷದ ಮಗ ಅನಾಥವಾಗಿದ್ದಾನೆ.
ಇನ್ನೂ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಆರಕ್ಷಕ ವೃತ್ತ ನಿರೀಕ್ಷರಾದ ರಂಗಸ್ವಾಮಯ್ಯ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಇನ್ನು ಲಾರಿಯನ್ನು ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:05 pm, Sat, 3 December 22