ರಾಜ್ಯ ಸಾರಿಗೆ ಇಲಾಖೆಯು ತನ್ನ ಸುಪರ್ದಿಯಲ್ಲಿರುವ ಸಾರ್ವಜನಿಕರ ಎಲ್.ಎಲ್.ಆರ್, ಡಿ.ಎಲ್, ಆರ್.ಸಿ, ವಾಹನ ಟ್ರಾನ್ಸ್ ಫರ್ ದಾಖಲೆಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಸಾರ್ವಜನಿಕರಿಗೆ ವಿತರಿಸಲು ಅಂಚೆ ಇಲಾಖೆಯ (Chikkaballapur postal department) ಜೊತೆ ಒಪ್ಪಂದ ಮಾಡಿಕೊಂಡಿರುತ್ತದೆ. ಆದರೆ ಆರ್.ಟಿ.ಓ ( rto) ನೀಡುವ ದಾಖಲೆಗಳನ್ನು (documents) ಅಂಚೆ ಇಲಾಖೆ ಒಂದು ತಿಂಗಳಾದರೂ ಸಹಾ ಸಾರ್ವಜನಿಕರಿಗೆ ವಿತರಿಸದೇ ನಿರ್ಲಕ್ಷ್ಯ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಒಂದು ವರದಿ..
ಎಲ್.ಎಲ್.ಆರ್., ಡಿ.ಎಲ್., ಆರ್.ಸಿ., ವಾಹನ ಟ್ರಾನ್ಸ್ ಫರ್ ದಾಖಲೆಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಸಾರ್ವಜನಿಕರಿಗೆ ವಿತರಿಸಲು ಆರ್.ಟಿ.ಓ ಸಾರಿಗೆ ಇಲಾಖೆ, ಭಾರತೀಯ ಅಂಚೆ ಇಲಾಖೆಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಆರ್.ಟಿ.ಓ. ಸಾರ್ವಜನಿಕರಿಗೆ ವಿತರಣೆ ಮಾಡುವ ದಾಖಲೆಗಳನ್ನು ಅಂಚೆ ಇಲಾಖೆಗೆ ನೀಡುತ್ತಾರೆ. ಅಂಚೆ ಇಲಾಖೆ ಸಕಾಲಕ್ಕೆ ಅವುಗಳನ್ನು ಸಂಬಂಧಿಸಿದ ಸಾರ್ವಜನಿಕರಿಗೆ ನೋಂದಾಯಿತ ಅಂಚೆ ಮೂಲಕ ಕಳುಹಿಸಿಕೊಡಬೇಕು.
ತಲಾ ಪತ್ರಕ್ಕೆ ಅಂಚೆ ಇಲಾಖೆ ರೂ. 50 ಹಣ ಪಡೆಯುತ್ತದೆ. ಆದರೆ ಚಿಕ್ಕಬಳ್ಳಾಪುರ ಆರ್.ಟಿ.ಓ. ಯಿಂದ ದಾಖಲೆಗಳನ್ನು ಪಡೆದುಕೊಂಡಿರುವ ಚಿಕ್ಕಬಳ್ಳಾಪುರದ ಅಂಚೆ ಇಲಾಖೆ ಕಳೆದ ಒಂದು ತಿಂಗಳಿನಿಂದ ದಾಖಲೆಗಳನ್ನು ಅಂಚೆ ಬಟವಾಡೆ ಮಾಡದೇ ಕಛೇರಿಯಲ್ಲಿಯೇ ಸಂಗ್ರಹಿಸಿಕೊಟ್ಟುಕೊಂಡಿದೆ. ಇದರಿಂದ ಸಾರ್ವಜನಿಕರು ಆರ್.ಟಿ.ಓ ಹಾಗೂ ಅಂಚೆ ಕಛೇರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಆರ್.ಟಿ.ಓ ಹಾಗೂ ಅಂಚೆ ಇಲಾಖೆಗಳು ಒಪ್ಪಂದ ಮಾಡಿಕೊಂಡಿದ್ದು, ತಲಾ ಪತ್ರಕ್ಕೆ ರೂ. 50 ಶುಲ್ಕವನ್ನು ಸಾರ್ವಜನಿಕರಿಂದಲೇ ಪಡೆಯುತ್ತಾರೆ. ಸ್ವತಃ ಪೋಸ್ಟ್ ಮ್ಯಾನ್‍ಗಳು ಆರ್.ಟಿ.ಓ ಕಛೇರಿಗೆ ಹೋಗಿ ದಾಖಲೆಗಳನ್ನು ಪಡೆದು, ಅದಕ್ಕೆ ಕವರಿಂಗ್ ಲಕೋಟೆಗಳನ್ನು ರೆಡಿ ಮಾಡಿ, ಸಂಬಂಧಿಸಿದ ವ್ಯಕ್ತಿಗೆ ನೋಂದಾಯಿತ ಅಂಚೆ ಮೂಲಕ ತಲುಪಿಸಬೇಕು. ಆದರೆ ಚಿಕ್ಕಬಳ್ಳಾಪುರದ ಅಂಚೆ ಇಲಾಖೆ ಅಧಿಕಾರಿಗಳು ಕರ್ತವ್ಯಲೋಪ, ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇನ್ನು ಪೋಸ್ಟ್ ಮಾಸ್ಟರ್ ಮಂಜುರವರನ್ನು ಪ್ರಶ್ನಿಸಿದರೆ ಸಿಬ್ಬಂದಿ ಕೊರತೆ ನೆಪ ಹೇಳಿದ್ದಾರೆ.
ಇನ್ನು ಒಪ್ಪಂದದಂತೆ ಆರ್.ಟಿ.ಓ. ಸಾರ್ವಜನಿಕ ದಾಖಲೆಗಳನ್ನು ಬೈ ಹ್ಯಾಂಡ್ ನೀಡುವಂತಿಲ್ಲ. ನೋಂದಾಯಿತ ಅಂಚೆ ಮೂಲಕವೇ ಸಾರ್ವಜನಿಕರು ಪಡೆಯಬೇಕು. ಆದರೆ ಚಿಕ್ಕಬಳ್ಳಾಪುರದ ಅಂಚೆ ಇಲಾಖೆಯ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತಲುಪಬೇಕಾಗಿರುವ ಸಾವಿರಾರು ಮಹತ್ವದ ದಾಖಲೆಗಳು ಅಂಚೆ ಇಲಾಖೆಯಲ್ಲಿಯೇ ಕೊಳೆಯುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ