ಚಿಕ್ಕಬಳ್ಳಾಪುರ: ಮುಸ್ಲಿಂ ಯುವತಿ ಮತ್ತು ಹಿಂದೂ ಯುವಕರು ಇರುವ ವಿಡಿಯೋ ಪೋಟೋ ತೆಗೆದು ಹರಿಬಿಡುತ್ತಿದ್ದ ಲೇಡಿಸ್ ಟೈಲರ್

ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನ ಜೊತೆ ಇರುವುದು ಅಕ್ಷಮ್ಯ ಅಪರಾಧ ಎಂಬಂತೆ ವಾಟ್ಸಪ್ ಚಾಟಿಂಗ್ ಮಾಡಿ ಚಿಕ್ಕಬಳ್ಳಾಫುರದಲ್ಲಿ ಹಿಂದೂ ಮುಸ್ಲಿಂ ಮಧ್ಯೆ ಗಲಾಟೆ ಸೃಷ್ಟಿಸಲು ಯತ್ನಿಸುತ್ತಿದ್ದ ಆರೋಪ ಲೇಡಿಸ್ ಟೈಲರ್ ವಿರುದ್ಧ ಕೇಳಿಬಂದಿದ್ದು, ಆತನ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ: ಮುಸ್ಲಿಂ ಯುವತಿ ಮತ್ತು ಹಿಂದೂ ಯುವಕರು ಇರುವ ವಿಡಿಯೋ ಪೋಟೋ ತೆಗೆದು ಹರಿಬಿಡುತ್ತಿದ್ದ ಲೇಡಿಸ್ ಟೈಲರ್
ಮುಸ್ಲಿಂ ಯುವತಿ ಮತ್ತು ಹಿಂದೂ ಯುವಕರು ಇರುವ ವಿಡಿಯೋ ಪೋಟೊ ತೆಗೆದು ಹರಿಬಿಡುತ್ತಿದ್ದ ಚಿಕ್ಕಬಳ್ಳಾಪುರದ ಲೇಡಿಸ್ ಟೈಲರ್

Updated on: May 26, 2023 | 9:51 AM

ಚಿಕ್ಕಬಳ್ಳಾಪುರ: ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನ ಜೊತೆ ಇರುವುದು ಅಕ್ಷಮ್ಯ ಅಪರಾಧ ಎಂಬಂತೆ ವಾಟ್ಸಪ್ ಚಾಟಿಂಗ್ ಮಾಡಿ ಚಿಕ್ಕಬಳ್ಳಾಫುರದಲ್ಲಿ ಹಿಂದೂ ಮುಸ್ಲಿಂ ಮಧ್ಯೆ ಗಲಾಟೆ ಸೃಷ್ಟಿಸಲು ಯತ್ನಿಸುತ್ತಿದ್ದ ಲೇಡಿಸ್ ಟೈಲರ್ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಎರಡು ದಿನಗಳ ಹಿಂದೆ (ಮೇ 24) ಜಿಲ್ಲೆಯಲ್ಲಿ ಮುಸ್ಲಿಂ ಯುವಕರಿಂದ ನಡೆದ ನೈತಿಕ ಪೊಲೀಸ್ ಗಿರಿ (Moral Policing) ಪ್ರಕರಣದ ನಂತರ ಲೇಡಿಸ್ ಟೈಲರ್ ವಿರುದ್ಧ ಈ ಆರೋಪ ಕೇಳಿಬಂದಿದೆ.

ಅನ್ಯಕೋವಿನ ಯುವತಿಯ ಜೊತೆ ಹಿಂದೂ ಯುವಕ ಇರುವುದನ್ನೆ ನೆಪ ಮಾಡಿಕೊಂಡು ಗಲಾಟೆಗೆ ಯತ್ನ ನಡೆಸುತ್ತಿದ್ದ ಒಎಂಬಿ ರಸ್ತೆಯಲ್ಲಿರುವ ಲೇಡಿಸ್ ಟೈಲರ್, ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನ ಜೊತೆ ಇರುವುದು ಅಕ್ಷಮ್ಯ ಅಪರಾಧ ಎಂಬಂತೆ ವಾಟ್ಸ್​ ಆ್ಯಪ್ ಗ್ರೂಪ್​ನಲ್ಲಿ ಪ್ರಚೋದನಾತ್ಮಕ ಚಾಟಿಂಗ್ ಮಾಡುತ್ತಿದ್ದ. ಅಷ್ಟೇ ಅಲ್ಲದೆ, ಅಂತಹ ಜೋಡಿಯ ವಿಡಿಯೋ ಅಥವಾ ಫೋಟೋ ತೆಗೆದು ಗ್ರೂಪ್​ಗೆ ಹಂಚಿಕೊಳ್ಳುತ್ತಿದ್ದ.

ಅನ್ಯ ಕೋಮಿನ ಯುವಕರನ್ನು ಎತ್ತಿ ಕಟ್ಟಿ ಗಲಾಟೆಗೆ ಪ್ರಚೋದನೆ ಮಾಡಿ ಚಿಕ್ಕಬಳ್ಳಾಪುರದಲ್ಲಿ ಕೋಮು ಗಲಭೆ ಸೃಷ್ಟಿಸಲು ಲೇಡಿಸ್ ಟೈಲರ್ ಯತ್ನಸಿದ್ದ. ಟೈಲರ್ ಅವರದ್ದು​ ಎಂದು ಹೇಳಲಾಗಿರುವ ಆಡಿಯೋ ರೆಕಾರ್ಡ್​ ಟಿವಿ9ಗೆ ಲಭ್ಯವಾಗಿದೆ. ಗಲಭೆ ಯತ್ನದ ಹಿಂದೆ  ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತರ ಕುಮ್ಮಕ್ಕು ಇದೆ ಎಂದು ಆರೋಪಿಸಲಾಗಿದೆ. ಲೇಡಿಸ್ ಟೈಲರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರಜ್ಞಾವಂತರು ಒತ್ತಾಯಿಸುತ್ತಿದ್ದಾರೆ. ಆದರೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್ ಗಿರಿ: ಮುಸ್ಲಿಂ ಯುವತಿಯಿಂದ ದೂರು ದಾಖಲು, ಇಬ್ಬರು ಅರೆಸ್ಟ್

ಮನೆಯ ಬಳಿ ಆಗಮಿಸಿ ಗಲಾಟೆ ನಡೆಸಿದ ಯುವಕರು: ನೊಂದ ಮುಸ್ಲಿಂ ಯುವತಿ ಆರೋಪ

ಚಿಕ್ಕಬಳ್ಳಾಫುರದಲ್ಲಿ ಮುಸ್ಲಿಂ ಯುವಕರಿಂದ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಟಿವಿ9 ಜೊತೆ ಮಾತನಾಡಿದ ನೊಂದ ಮುಸ್ಲಿಂ ಯುವತಿ, ಯಾವುದೆ ಜಾತಿ ಧರ್ಮದವರು ನೈತಿಕ ಪೊಲೀಸ್ ಗಿರಿ ಮಾಡಬಾರದು. ನನಗೆ ಆದ ನೋವು ಯಾರಿಗೂ ಆಗಬಾರದು. ಮೂವರು ಸ್ವಜಾತಿ ಧರ್ಮದ ಯುವಕರು ಸಾರ್ವಜನಿಕವಾಗಿ ಎಳೆದಾಡಿ ಹೊಡೆದು ಅವಮಾನ ಮಾಡಿದ್ದಾರೆ. ಅಲ್ಲಿಂದ ತಪ್ಪಿಕೊಂಡು ಮನೆಗೆ ಹೊದರೂ ಬಿಡದೆ ಮನೆಯ ಬಳಿ ಆಗಮಿಸಿ ಗಲಾಟೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ನಾನು ನನ್ನ ಸಹಪಾಠಿಯ ಜೊತೆ ತಿಂಡಿ ತಿನ್ನಲು ಹೊಟಲ್​ಗೆ ಹೋಗಿದ್ದೆ. ನಮ್ಮಿಬ್ಬರ ಮದ್ಯೆ ಪ್ರೀತಿ ಪ್ರೇಮ ಏನು ಇರಲಿಲ್ಲ. ಅನ್ಯ ಧರ್ಮದ ಸಹಪಾಠಿಯ ಜೊತೆ ಇದ್ದಿದ್ದಕ್ಕೆ ಇಬ್ಬರ ಮೇಲೆ ಹಲ್ಲೆ ಮಾಡಿ ಗಲಾಟೆ ಮಾಡಿದ್ದಾರೆ. ಹೀಗಾಗಿ ಪೊಲೀಸರು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ನೈತಿಕ ಪೊಲೀಸ್ ಗಿರಿ ಪ್ರಕರಣ ಸಂಬಂಧ ಯುವತಿ ನೀಡಿದ ದೂರಿನ ಅನ್ವಯ ಪೊಲೀಸರು ವಾಯಿದ್ ಮತ್ತು ಸದ್ದಾಂ ಎಂಬ ಆರೋಪಿಗಳನ್ನು ಬಂಧಿಸಿ ನ್ಯಾಯದೀಶರ ಗೃಹ ಕಚೇರಿಗೆ ಹಾಜರು ಮಾಡಿದ್ದರು. ಅದರಂತೆ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾ. ಬಾಲಪ್ಪ ಅಪ್ಪಣ್ಣ ಜರಗು ಅವರು ಆದೇಶ ಹೊರಡಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿಯ ಬಂಧನಕ್ಕೆ ಶೋಧ ಮುಂದುವರಿದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ