Chikkaballapur News: ಮಳಮಾಚನಹಳ್ಳಿ ಬ್ಯಾಟರಾಯಸ್ವಾಮಿ ದೇಗುಲದ ಗರ್ಭಗುಡಿಯಲ್ಲಿ ರಕ್ತ, ಮಾಂಸ ಸುರಿದು ವಿಕೃತಿ

ದೇವಸ್ಥಾನದ ಗರ್ಭಗುಡಿಯಲ್ಲಿ ರಕ್ತ ಹಾಗೂ ಮಾಂಸ ಸುರಿದು ವಿಕೃತಿ ಮೆರೆದ ಘಟನೆ ಚಿಕ್ಕಬಳ್ಳಾಪುರದ ಮಳಮಾಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

Chikkaballapur News: ಮಳಮಾಚನಹಳ್ಳಿ ಬ್ಯಾಟರಾಯಸ್ವಾಮಿ ದೇಗುಲದ ಗರ್ಭಗುಡಿಯಲ್ಲಿ ರಕ್ತ, ಮಾಂಸ ಸುರಿದು ವಿಕೃತಿ
ಬ್ಯಾಟರಾಯಸ್ವಾಮಿ ದೇವಸ್ಥಾನ ಗರ್ಭಗುಡಿ
Follow us
|

Updated on:May 25, 2023 | 6:22 PM

ಚಿಕ್ಕಬಳ್ಳಾಪುರ: ದೇವಸ್ಥಾನದ ಗರ್ಭಗುಡಿಯಲ್ಲಿ ರಕ್ತ ಹಾಗೂ ಮಾಂಸ ಸುರಿದು ವಿಕೃತಿ ಮೆರೆದ ಘಟನೆ ಚಿಕ್ಕಬಳ್ಳಾಪುರ(Chikkaballapur) ಮಳಮಾಚನಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಬಳ್ಳಾಫುರ ಜಿಲ್ಲೆ ಶಿಡ್ಲಘಟ್ಟದ ಮಳಮಾಚನಹಳ್ಳಿ (Malamachanahalli) ಗ್ರಾಮದ ಬ್ಯಾಟರಾಯಸ್ವಾಮಿ ದೇವಸ್ಥಾನದಲ್ಲಿ (byatarayana swamy temple) ದುಷ್ಕರ್ಮಿಗಳು ಗರ್ಭಗುಡಿಯ ಕಿಟಕಿಯಿಂದ ರಕ್ತ ಹಾಗೂ ಮಾಂಸ ಸುರಿದಿರುವುದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳ ವಿಕೃತಿಗೆ ಗ್ರಾಮಸ್ಥರ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ರಕ್ತ ಹಾಗೂ ಮಾಂಸ ಪ್ರಾಣಿಗಳದ್ದೋ ಅಥವಾ ಮನುಷ್ಯರದ್ದೋ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ದೇವರ ಮೂರ್ತಿಯ ಪಾದದವರೆಗೂ ರಕ್ತದ ಕೊಡಿ ಹರಿದಿದೆ.

ಇತಿಹಾಸ ಪ್ರಸಿದ್ಧ ದೇವಸ್ಥಾನ

ದೇವಸ್ಥಾನದ ಗರ್ಭ ಗುಡಿಯಲ್ಲಿ ದೇವ ಮೂರ್ತಿಯ ಪಾದಕ್ಕೆ ತಗುಲುವ ಹಾಗೆ, ಎರಡು ಮೂರು ಲೀಟರ್ ರಕ್ತವನ್ನು ಸುರಿಯಲಾಗಿತ್ತು. ಇದು ಇತಿಹಾಸ ಪ್ರಸಿದ್ದ, ಪುರಾಣ ಪ್ರಸಿದ್ದ ಪುರಾತನ ಕಾಲದ ಪ್ರಸಿದ್ದ ದೇವಸ್ಥಾನವಾಗಿದೆ. ಸುತ್ತಮುತ್ತಲ ಹತ್ತೂರು ಗ್ರಾಮಸ್ಥರಿಗೆ ಆರಾದ್ಯ ದೈವವಾಗಿರುವ ಬ್ಯಾಟರಾಯಮಿ ದೇಗುಲದಲ್ಲೇ ರಕ್ತದ ಹೊಳೆ ಹರಿದಿದೆ. ಎಂದಿನಂತೆ ಇಂದು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದು ಪೂಜೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ದೇವಸ್ಥಾನದ ಅರ್ಚಕ ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಒಂದು ಕವರ್ ನಲ್ಲಿ ರಕ್ತ ತಂದು ಸುರಿಯಲಾಗಿದೆ. ಯಾಗಾಗಿ ದೇವಸ್ಥಾನದ ಗರ್ಭ ಗುಡಿಯಲ್ಲಿ ರಕ್ತ ಸುರಿಯಲಾಗಿದೆ ಅದ್ಯಾವ ದುರುದ್ದೇಶ ಇತ್ತೊ ಅನ್ನೊ ಬಗ್ಗೆ ಗ್ರಾಮಸ್ಥರಿಗೆ ಅನುಮಾನ ವ್ಯಕ್ತವಾಗಿದ್ದು ಸೂಕ್ತ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್ ಗಿರಿ: ಮುಸ್ಲಿಂ ಯುವತಿ ಮತ್ತು ಹಿಂದೂ ಯುವಕನ ಮೇಲೆ ಹಲ್ಲೆಗೆ ಯತ್ನ

ಹಾಲು ತುಪ್ಪು ಎಳನೀರಿನಿಂದ ಮಜ್ಜನ ಮಾಡಬೇಕಾದ ಬ್ಯಾಟರಾಯಸ್ವಾಮಿ ದೇವರಿಗೆ, ಅದ್ಯಾಕೆ ರಕ್ತ ಮಜ್ಜನ ಮಾಡಲಾಗಿದೆ, ಆ ದೇವರಿಗೆ ಗೊತ್ತು, ಗ್ರಾಮಸ್ಥರು ನೀಡಿರುವ ದೂರನ್ನು ದಾಖಲು ಮಾಡಿಕೊಂಡಿರುವ ಶಿಡ್ಲಘಟ್ಟ ಪೊಲೀಸರು, ಪ್ರಕರಣ ದಾಖಲು ಮಾಡಿಕೊಂಡು ರಕ್ತದ ಮಾದರಿಯನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಿದ್ದಾರೆ. ಇನ್ನೂ ಪವಿತ್ರ ದೇವಸ್ಥಾನ ಅಪವಿತ್ರ ಮಾಡಿದ ಕಾರಣ, ಗ್ರಾಮಸ್ಥರು ದುಷ್ಕರ್ಮಿಗಳ ವಿರುದ್ದ ಕ್ರಮಕ್ಕೆ ಆಗ್ರಹ ಮಾಡಿದ್ದಾರೆ.

ಭೀಮನಗೌಡ ಟಿವಿ9 ಚಿಕ್ಕಬಳ್ಳಾಫುರ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:36 pm, Thu, 25 May 23