ಚಿಕ್ಕಬಳ್ಳಾಪುರ, ಜ.26: ಫೇಸ್ ಬುಕ್(FaceBook)ನಲ್ಲಿ ಸ್ನೇಹಿತನಾದ ವಿದೇಶಿ ಮೂಲದ ವ್ಯಕ್ತಿಯೋರ್ವ ತನ್ನ ಮಗಳ ಹುಟ್ಟು ಹಬ್ಬದ ಪ್ರಯುಕ್ತ ತನ್ನ ಫೇಸ್ ಬುಕ್ ಸ್ನೇಹಿತರಿಗೆ ಗಿಫ್ಟ್ ಕಳುಹಿಸುವುದಾಗಿ ತಿಳಿಸಿ ವಿಳಾಸ ಪಡೆದಿದ್ದಾನೆ. ಇದನ್ನು ನಂಬಿದ ನರ್ಸ್(Nurse) ಒಬ್ಬರಿಗೆ ಬರೋಬ್ಬರು 19,43,500 ರೂಪಾಯಿ ಪಂಗನಾಮ ಹಾಕಿದ ಘಟನೆ ನಡೆದಿದೆ.
ವಿದೇಶಿ ಮೂಲದ ಡಾ. ಮೈಕ್ ರೊನಾಲ್ಡ್ ಎಂಬ ಫೇಸ್ ಬುಕ್ ಅಕೌಂಟ್‍ನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ, ಕೋಟಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಮಮತಾರೆಡ್ಡಿ ಎಂಬುವವರ ಫೇಸ್ ಬುಕ್ ಖಾತೆಗೆ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಫೇಸ್ ಬುಕ್ನಲ್ಲಿ ಮಮತಾರೆಡ್ಡಿ ಹಾಗೂ ಮೈಕ್ ರೊನಾಲ್ಡ್ ಫ್ರೆಂಡ್ಸ್ ಆಗಿ ಚಾಟಿಂಗ್ ಮಾಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಮೈಕ್ ರೊನಾಲ್ಡ್ ಎಂಬ ಫೇಸ್ ಬುಕ್ ಖಾತೆದಾರ, ತನ್ನ ಮಗಳ ಬರ್ತ್‍ಡೇ ಪ್ರಯುಕ್ತ ಗಿಫ್ಟ್ ಕಳುಹಿಸಿ ಕೊಡುವುದಾಗಿ ತಿಳಿಸಿ ನರ್ಸ್ ಮಮತಾರೆಡ್ಡಿಯ ಅಂಚೆ ವಿಳಾಸ ಪಡೆದಿದ್ದಾನೆ ಅಷ್ಟೇ. ಮುಂದೆ ಬರೋಬ್ಬರಿ 19 ಲಕ್ಷಕ್ಕೂ ಅಧಿಕ ರೂಪಾಯಿ ಪಂಗನಾಮ ಹಾಕಿದ್ದಾನೆ.
ಇದನ್ನೂ ಓದಿ:ವಿಜಯಪುರದಲ್ಲಿ ಲವ್ ಸೆಕ್ಸ್ ದೋಖಾ; ಪ್ರೀತಿ ಹೆಸರಿನಲ್ಲಿ ಯುವತಿಗೆ ವಂಚಿಸಿದ ಕಾನ್ಸ್ಟೇಬಲ್
ಮಮತಾರೆಡ್ಡಿ ಎನ್ನುವವರ ವಿಳಾಸಕ್ಕೆ ದುಬಾರಿ ಮೊತ್ತದ ವಿದೇಶಿ ಗಿಫ್ಟ್ ಬಂದಿದೆ. ಅದು ದೆಹಲಿಯ ಏರ್ಪೋ್ರ್ಟ್ನ ಕಸ್ಟಮ್ಸ್ ಕಛೇರಿಗೆ ಬಂದಿದೆ. 45 ಸಾವಿರ ರೂಪಾಯಿ ಕಸ್ಟಮ್ಸ್ ಫೀ ಕಟ್ಟಬೇಕೆಂದು ತಿಳಿಸಿ, ಮಮತಾರೆಡ್ಡಿ ಅವರ ಬಳಿ ದುಡ್ಡು ಕಟ್ಟಿಸಿಕೊಂಂಡಿದ್ದಾನೆ. ನಂತರ ಒಂದೊಂದು ನೆಪಗಳನ್ನು ಹೇಳಿ, ಒಂದೊಂದು ರೀತಿಯಲ್ಲಿ ಒಟ್ಟು ಆನ್‍ಲೈನ್ ಬ್ಯಾಂಕಿಂಗ್ ಮೂಲಕವೇ ಒಟ್ಟು 19,43,500 ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಬಳಿಕ ಮತ್ತೆ 1,48,000 ರೂಪಾಯಿಗಳ ಹಣ ಕಟ್ಟಿದರೆ ಗಿಫ್ಟ್ ಕಳುಹಿಸುವುದಾಗಿ ಹೇಳಿ ಆಮೀಷವೊಡ್ಡಿದ್ದಾರೆ. ಕೊನೆಗೆ ಅನುಮಾನ ಬಂದು, ನರ್ಸ್ ಮಮತಾರೆಡ್ಡಿ ನ್ಯಾಯ ಕೊಡಿಸುವಂತೆ ಚಿಕ್ಕಬಳ್ಳಾಪುರ ಸಿಇಎನ್ (ಸೈಬರ್ ಕ್ರೈಂ) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ವಿದೇಶಿ ಮೂಲದ ಫೇಸ್ ಬುಕ್ ಸ್ನೇಹಿತನ ನಯವಂಚನೆಯನ್ನು ನಂಬಿ ಪರಿಚಯಸ್ಥ ನರ್ಸ್‍ಗಳು, ವೈದ್ಯರುಗಳು, ಸ್ನೇಹಿತರುಗಳಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿ ಸೈಬರ್ ವಂಚಕರಿಗೆ ಹಣ ಹಾಕಿದ್ದಾರೆ. ಕೊನೆಗೆ ಗಿಫ್ಟ್ ಇಲ್ಲ. ಹಣನೂ ಇಲ್ಲವೆಂದು ಈಗ ಸಾಲದ ಸುಳಿಗೆ ಸಿಲುಕಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ