ವಿಜಯಪುರದ ಪ್ರೇಮ-ಕಾಮ-ವಂಚನೆ ಪ್ರಕರಣದಲ್ಲಿ ಪೊಲೀಸಪ್ಪನೇ ಆರೋಪಿ! ದೂರು ದಾಖಲಾದ ಬಳಿಕ ನಾಪತ್ತೆ
ಅವನೊಂದಿಗೆ ಮಾತಾಡಿ ಪ್ರಯೋಜನವಿಲ್ಲ ಅಂತ ಮನವರಿಕೆಯಾದ ನಂತರ ಯುವತಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕಂಪ್ಲೇಂಟ್ ದಾಖಲಾಗಿದ್ದು ಗೊತ್ತಾದ ಕೂಡಲೇ ಯುವತಿ ಎದುರು ಪೌರುಷ ಮೆರೆದಿದ್ದ ಪೊಲೀಸ್ ಪೇದೆ ಬಾಲ ಮುದುರಿಕೊಂಡು ಬಿಲ ಸೇರಿಕೊಂಡಿದ್ದಾನೆ.
ವಿಜಯಪುರ: ಒಬ್ಬ ಪೊಲೀಸಪ್ಪನ ಪ್ರೇಮ-ಕಾಮ-ವಂಚನೆ ಪ್ರಕರಣ ಇದು. ಅದೇನೋ ಹೇಳ್ತಾರಲ್ಲ ಮೋಸ ಹೋಗೋರು ಇರೋವರೆಗೂ ಮೋಸ ವಂಚನೆಯ (betrayal) ಪ್ರಕರಣಗಳು ನಡೆಯುತ್ತಿರುತ್ತವೆ! ಇದು ವಿಜಯಪುರದಲ್ಲಿ (Vijayapura) ನಡೆದಿರುವ ಪ್ರಕರಣ. ಈ ಯುವತಿ ಮಾಡುತ್ತಿರುವ ಆರೋಪಗಳ ಪ್ರಕಾರ ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುವ ವಿನಾಯಕ ಟಕ್ಕಳಕಿ (Vinayaka Takkalaki) ಮದುವೆಯಾಗುವ ಭರವಸೆ ನೀಡಿ ಆಕೆಯ ವಿಶ್ವಾಸವನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಅಕೆಯೊಂದಿಗೆ ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿ ಮದುವೆಯಾಗಲು ನಿರಾಕರಿಸಿದ್ದಾನೆ. ವಿನಾಯಕನಿಗೆ ಬೇರೆ ಯುವತಿಯರ ಜೊತೆಯೂ ಸ್ನೇಹವಿದೆ ಎಂದು ಯುವತಿ ಹೇಳುತ್ತಾಳೆ. ಅವನು ಮದುವೆಯಾಗಲು ಒಲ್ಲೆ ಅಂದ ಬಳಿಕ ಯುವತಿ ಪರಿಪರಿಯಾಗಿ ಬೇಡಿಕೊಂಡಿದ್ದು ಸತ್ಯ. ಅವನೊಂದಿಗೆ ಮಾತಾಡಿ ಪ್ರಯೋಜನವಿಲ್ಲ ಅಂತ ಮನವರಿಕೆಯಾದ ನಂತರ ಯುವತಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕಂಪ್ಲೇಂಟ್ ದಾಖಲಾಗಿದ್ದು ಗೊತ್ತಾದ ಕೂಡಲೇ ಯುವತಿ ಎದುರು ಪೌರುಷ ಮೆರೆದಿದ್ದ ಪೊಲೀಸ್ ಪೇದೆ ಬಾಲ ಮುದುರಿಕೊಂಡು ಬಿಲ ಸೇರಿಕೊಂಡಿದ್ದಾನೆ. ಕಳೆದ 20 ದಿನಗಳಿಂದ ಅವನು ನಾಪತ್ತೆಯಾಗಿದ್ದಾನಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ